ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಚರಿಸಲಾದ ವಾಲ್ಮೀಕಿ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ರಾಮನ ಆದರ್ಶಗಳನ್ನು ರಾಮಾಯಣದ ಮೂಲಕ ವಾಲ್ಮೀಕಿ ಪರಿಚಯಿಸದಿದ್ದರೆ ರಾಮ ಯಾರು ಎಂಬುದೇ ಗೊತ್ತಾಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ವಾಲ್ಮೀಕಿ ಜಯಂತಿ ರಾಷ್ಟ್ರೀಯ ಜಯಂತಿಯಾಗಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ರಾಮಾಯಣ ಬರೆದವರು ವಾಲ್ಮೀಕಿ ಎನ್ನುವುದು ಎಷ್ಟು ಮುಖ್ಯವೋ ಅದರಂತೆ ನಮ್ಮದು ಸೂಫಿ, ಸಂತರು, ಋಷಿ ಮುನಿಗಳ ನಾಡು ಎನ್ನುವುದನ್ನು ಮರೆಯುವಂತಿಲ್ಲ. ಶ್ರೇಷ್ಟ ಗ್ರಂಥ ರಾಮಾಯಣದ ಮೂಲಕ ವಾಲ್ಮೀಕಿ ರಾಮನ ಆದರ್ಶಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯವರಂತೆ ಕಾಂಗ್ರೆಸ್ ಎಂದಿಗೂ ಸಮಾಜದಲ್ಲಿ ಒಡಕುಂಟು ಮಾಡುವ ಕೆಲಸಕ್ಕೆ ಕೈಹಾಕಿಲ್ಲ. ಧರ್ಮ, ಜಾತಿ, ಸೂಫಿ ಸಂತರ ಹೆಸರುಗಳನ್ನು ಮುಂದಿಟ್ಟುಕೊಂಡು ದ್ವೇಷ ಹರಡಬಾರದು. ರಾಮನ ಆದರ್ಶ, ವಾಲ್ಮೀಕಿರವರ ತತ್ವ ಸಿದ್ದಾಂತಗಳ ಮೇಲೆ ಕಾಂಗ್ರೆಸ್ ಪಕ್ಷ ನಡೆಯುತ್ತಿದೆ. ರಾಮಾಯಣದ ಆಧಾರದ ಮೇಲೆ ಸಂವಿಧಾನ ರಚನೆಯಾಗಿದೆ ಎಂದರು. ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್ ಮಾತನಾಡಿ, ವಾಲ್ಮೀಕಿ ಎಂದ ಕೂಡಲೆ ಎಲ್ಲರಿಗೂ ರಾಮಾಯಣ ನೆನಪಾಗುತ್ತದೆ. ಕಾಡಿನಲ್ಲಿ ಭೇಟೆಯಾಡಿಕೊಂಡಿದ್ದ ವಾಲ್ಮೀಕಿ ಮನಃಪರಿವರ್ತನೆಗೊಂಡು ತಪಸ್ಸಿಗೆ ಕೂರುತ್ತಾರೆ. ಇದರಿಂದ ರಾಮಾಯಣ ಬರೆಯಲು ಸಾಧ್ಯವಾಯಿತು. ವಾಲ್ಮೀಕಿಯನ್ನು ಬಿಟ್ಟು ಬಿಜೆಪಿ, ಆರ್‌ಎಸ್ಎಸ್ ನವರು ರಾಮನನ್ನು ಹಿಡಿದುಕೊಂಡು ರಾಜಕಾರಣ ಮಾಡುತ್ತ ರಾಮರಾಜ್ಯದ ಬದಲಿಗೆ ರಾವಣ ರಾಜ್ಯವನ್ನಾಗಿಸಲು ಹೊರಟಿದ್ದಾರೆಂದರು.ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ತತ್ವದಂತೆ ರಾಮಾಯಣ ಬರೆದಿರುವ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬೇಕು. ರಾಮನ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿನಂತಿಸಿದರು.
ದಲಿತ ಮುಖಂಡ ಬಿ.ರಾಜಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‍ಕುಮಾರ್, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಪದವೀಧರ ವಿಭಾಗದ ಅಧ್ಯಕ್ಷ ಪ್ರಕಾಶ್‍ರಾಮನಾಯ್ಕ, ಮ್ಯಾಕ್ಲುರಹಳ್ಳಿ ತಿಮ್ಮಣ್ಣ, ಕಣ್ಮೇಶ್, ಸಚಿನ್, ನ್ಯಾಯವಾದಿ ಮಹಮದ್ ರಫಿ, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮದ್ ಆಜಾಂ ಬಸವರಾಜ್ ಬಚ್ಚಬೋರನಹಟ್ಟಿ, ಪಾಪಯ್ಯ, ರವಿ, ಮಂಜುನಾಥ್, ನಗರ ಆಶ್ರಯ ಕಮಿಟಿ ಸದಸ್ಯ ಉಮೇಶ್‍ಕುಮಾರ್, ಗ್ಯಾರೆಂಟಿ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ ಇದ್ದರು.