ಸರ್ಕಾರ ಕೈಮಗ್ಗಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ನೀಡುತ್ತಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು.
ಗಜೇಂದ್ರಗಡ: ನೇಕಾರರು ನೂತನ ಕೌಶಲ್ಯಗಳನ್ನು ಬಳಸಿಕೊಂಡು ಗ್ರಾಹಕರಿಗೆ ಪ್ರಿಯವಾದ ಬಟ್ಟೆಗಳ ತಯಾರಿಕೆಯಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಆದಾಯ ಹೆಚ್ಚುತ್ತದೆ ಎಂದು ಕೈಮಗ್ಗ ಮತ್ತು ಪಶ್ಚಿಮ ಬೆಳಗಾವಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಶಿವರಾಜ ಕುಲಕರ್ಣಿ ತಿಳಿಸಿದರು.
ಪಟ್ಟಣದ ವಾಣಿಪೇಟೆಯ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ನಡೆದ ಜವಳಿ ಮಂತ್ರಾಲಯ ಮತ್ತು ಜವಳಿ ಅಭಿವೃದ್ಧಿ ಆಯುಕ್ತರು ಮತ್ತು ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಎನ್‌ಎಚ್‌ಡಿಪಿ ಅಡಿಯಲ್ಲಿ ಗಜೇಂದ್ರಗಡ ಬ್ಲಾಕ್ ಹ್ಯಾಂಡ್ ಲೂಮ್ ಕ್ಲಸ್ಟರ್ ಯೋಜನೆ ವತಿಯಿಂದ ಸೋಮವಾರ ಸಂಜೆ ನಡೆದ ಮಾರಾಟ ಖರೀದಿದಾರರ ಸಭೆ ಉದ್ಘಾಟಿಸಿ ಮಾತನಾಡಿ, ಸರ್ಕಾರ ಕೈಮಗ್ಗಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ನೀಡುತ್ತಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಬಾಲರಾಮಸಾ ಬಸವಾ ಮಾತನಾಡಿ, ಕೈಮಗ್ಗ ನೇಕಾರಿಕೆ ಬಹಳಷ್ಟು ಕಡಿಮೆಯಾಗುತ್ತಿದೆ. ಯುವಕರು ನೇಕಾರಿಕೆ ಬಗ್ಗೆ ಒಲವು ತೋರುತ್ತಿಲ್ಲ. ಸರ್ಕಾರ ನೇಕಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ಅವಶ್ಯಕತೆ ಇದೆ ಎಂದರು.ಜಗದೀಶ ಡಾಗಾ ಮಾತನಾಡಿ, ಗಜೇಂದ್ರಗಡದ ಪಟ್ಟೇದ ಅಂಚಿನ ಸೀರೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಇದರ ಹಿಂದೆ ನೇಕಾರರ ಶ್ರಮ ಅದ್ಭುತವಾಗಿದೆ. ಶ್ರಮದ ಹಿಂದೆ ಫಲ ಸಿಕ್ಕೆ ಸಿಗುತ್ತದೆ. ಆಧುನಿಕ ಯುಗ ಬಹಳಷ್ಟು ಪೈಪೋಟಿಯಿಂದ ಕೂಡಿದೆ. ನೇಕಾರರು ಕೌಶಲ್ಯ ಜತೆಗೆ ಗುಣಮಟ್ಟದ ಬಟ್ಟೆಗಳನ್ನು ತಯಾರು ಮಾಡುವ ಮೂಲಕ ಪ್ರಗತಿ ಸಾಧಿಸಬೇಕು ಎಂದರು.ಸಭೆಯಲ್ಲಿ ಅಶೋಕ ವನ್ನಾಲ, ರವೀಂದ್ರ ಶಿಂಗ್ರಿ, ಹನುಮಂತ ಕೆಂಚಿ, ಅಂಬರೀಶ ಮೂದೇನೂರ, ತಿಮ್ಮಣ್ಣ ವನ್ನಾಲ, ಮಾರುತಿ ಶಾಬಾದಿ, ಬಸವರಾಜ ಸೂಡಿ, ಕೊಟ್ರೇಶ ಚಿಲಕಾ, ಬಾಬಣ್ಣ ರಾಯಬಾಗಿ, ತೇಜಪ್ಪ ಚಿನ್ನೂರ, ಶ್ರೀನಿವಾಸ್ ಲಾಳಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.