ಸ್ತ್ರೀಯರು ಸಮಾಜಸೇವೆಯಲ್ಲಿ ತೊಡಗಲಿ

KannadaprabhaNewsNetwork | Published : Apr 2, 2025 1:01 AM

ಸಾರಾಂಶ

ಮಹಿಳೆಯರು ಶಿಕ್ಷಣ ಪಡೆದು ಸ್ವಾವಲಂಬಿಯಾಗಿ ಬದುಕಬೇಕು. ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗುವ ಮೂಲಕ ಸಾಧನೆ ಮಾಡಬೇಕು ಎಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಾ ಪ್ರಕಾಶ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಮಹಿಳೆಯರು ಶಿಕ್ಷಣ ಪಡೆದು ಸ್ವಾವಲಂಬಿಯಾಗಿ ಬದುಕಬೇಕು. ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗುವ ಮೂಲಕ ಸಾಧನೆ ಮಾಡಬೇಕು ಎಂದು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಾ ಪ್ರಕಾಶ ಹೇಳಿದರು.

ಪಟ್ಟಣದ ರಾಘವೇಂದ್ರ ಕಲ್ಯಾಣಮಂಟಪ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಾಲರ್ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜೈನ ಸಮುದಾಯಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವಾಕಾರ್ಯದಲ್ಲಿ ತೊಡಗಿರುವ ಜೈನ ಸಮುದಾಯದ ಸೇವೆ ಸ್ಮರಣೀಯವಾಗಿದೆ ಎಂದರು.ಸೊಲ್ಲಾಪುರದ ಸಂಶೋಧಕಿ ಡಾ.ಸುಜಾತ ಶಾಸ್ತ್ರಿ ಮಾತನಾಡಿ, ಮಹಿಳೆಯರು ಸಾಕಷ್ಟು ಶ್ರಮಜೀವಿಗಳಾಗಿದ್ದಾರೆ. ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ. ಕೊರೋನಾ, ಪ್ರಕೃತಿ ವಿಕೋಪ ಸಂದರ್ಭದಲ್ಲಿಯೂ ಮಹಿಳೆಯರ ಪಾತ್ರ ಅನನ್ಯವಾಗಿದೆ ಎಂದು ತಿಳಿಸಿದರು.ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ನಿರ್ದೇಶಕಿ ಶೀಲಾ ಯಲಗುದ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ನಿರ್ದೇಶಕರಾದ ಶರ್ಮಿಲಾ ಪಾಟೀಲ, ಸರಸ್ವತಿ ನೇಮಗೌಡ, ಮಾಣಿಕ ಅಸ್ಕಿ, ಸುನಂದಾ ಪಡನಾಡ, ಸುವರ್ಣಾ ಪಡನಾಡ, ಶಾಂತಾ ಲಠ್ಠೆ, ರಾಜಶ್ರೀ ಕೊಪ್ಪ, ಕಮಲ ನಂದಗಾಂವ, ಸುಜಾತಾ ಸಾಂಗವಡೆ, ಜ್ಯೋತಿ ಅಸ್ಕಿ, ಸಂಧ್ಯಾ ಇಜಾರೆ, ಹಿರಿಯರಾದ ಸತ್ಯಪ್ಪ ಲಠ್ಠೆ, ನಿವೃತ್ತ ಇಂಜಿನೀಯರ್ ಅರುಣ ಯಲಗುದ್ರಿ, ಮನೋಹರ ಅಸ್ಕಿ, ಚಕ್ರವರ್ತಿ ಕಿಣಿಂಗೆ, ಪ್ರಶಾಂತ ಇಜಾರಿ, ತುಷಾರ ಯಲಗುದ್ರಿ, ರಾಜು ಕರ್ಪೂರಶೆಟ್ಟಿ, ಸತೀಶ ಜಕನೂರ, ದರ್ಶನ ಜಕನೂರ, ಎಸ್.ಐ.ಪಾಟೀಲ, ಅಭಿನಂದನ್ ಪಡನಾಡ, ರಾವಸಾಹೇಬ ತೇರದಾಳ, ಅಣ್ಣಾಸಾಹೇಬ ಸಿರಿಗೌಡ ಹಾಗೂ ಇತರರು ಇದ್ದರು. ಹಂಸಗಾಮಿನಿ ಮಹಿಳಾ ಮಂಡಳದ ಅಧ್ಯಕ್ಷೆ ಜಯಶ್ರೀ ಕಿಣಿಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು . ಪ್ರಿಯಾ ಪಾಟೀಲ ಸ್ವಾಗತಿಸಿದರು. ದೀಪಾ ನಂದಗಾವ ನಿರೂಪಿಸಿದರು.

Share this article