ಮುಂಡರಗಿ:
ತಾಲೂಕಿನ ಡೋಣಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಮತ್ತು ವಿಶ್ವ ಪರಿಸರ ಹಾಗೂ ಕಪ್ಪತಗುಡ್ಡ ಪರಿಸರ ಸಂರಕ್ಷಣಾ ವೇದಿಕೆ, ಗ್ರಾಮ ಪಂಚಾಯಿತಿ ಡೋಣಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಭುವನೇಶ್ವರಿ ವೃತ್ತ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯೋತ್ಸವದ ಈ ದಿನ ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಮನತುಂಬಿ ಆಚರಿಸುವುದರೊಂದಿಗೆ ಕನ್ನಡ ಉಳಿಸಿ, ಬಳಸಿ, ಬೆಳೆಸುವ ಕಾರ್ಯ ಮಾಡಬೇಕು. ಕರ್ನಾಟಕದ ಏಕೀಕರಣದ ರೂವಾರಿಗಳ ಆಶಯಗಳನ್ನು ಸಾಕಾರಗೊಳಿಸಬೇಕೆಂದರು.ವಿಶ್ರಾಂತ ಪ್ರಾಚಾರ್ಯ ಸಿ.ಎಸ್. ಅರಸನಾಳ, ಉಪನ್ಯಾಸಕ ರಮಾಕಾಂತ ದೊಡ್ಡಮನಿ ಮತ್ತು ವಕೀಲ ಬಿ.ಎಸ್. ಕೆರಿ ಮಾತನಾಡಿ, ನಮ್ಮ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆ ಗೌರವಿಸುವುದು ಮತ್ತು ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಕರ್ನಾಟಕ ಅಸ್ತಿತ್ವಕ್ಕೆ ಬಂದು 70 ವರ್ಷ ಕಳೆದಿವೆ. ಇಂದು ರಾಜ್ಯದ ಸಾಧನೆಗಳ ಸಿಂಹಾವಲೋಕನ ಮಾಡಲು, ಮುಂದಿನ ಗುರಿಗಳನ್ನು ಸ್ಪಷ್ಟಪಡಿಸಲು ಶ್ರಮಿಸಬೇಕು ಎಂದರು.
ಮಾರುತಿ ಜೊಗದಂಡಕರ, ಬಿ.ಎಸ್. ಜಾಧವ, ವಿ.ಎಂ. ಪಾಟೀಲ, ಲಕ್ಷ್ಮಣ ತಳವಾರ, ಮುತ್ತಣ್ಣ ಬಳ್ಳಾರಿ, ಜಗದೀಶ ಮೈನಳ್ಳಿ, ಕಾಶಣ್ಣ ಅಳವುಂಡಿ, ಪರಸಪ್ಪ ಬೆಳ್ಳಿ, ಬಸಪ್ಪ ಪುರದ, ಮಳ್ಳಪ್ಪ ಜೊಂಡಿ, ಸಿದ್ದನಗೌಡ ಪಾಟೀಲ, ಶಂಕರಗೌಡ ಜಾಯನಗೌಡ್ರ, ಗ್ರಾಪಂ ಸದಸ್ಯರು, ಗದಗ ಜಿಲ್ಲಾ ಕರವೇ ಕುಟುಂಬ ಉಪಸ್ಥಿತರಿದ್ದರು.