ಎಪಿಎಸ್ ರದ್ದುಪಡಿಸುವಂತೆ ಒತ್ತಾಯಿಸಿ ಪತ್ರ ಚಳವಳಿ

KannadaprabhaNewsNetwork |  
Published : Jan 30, 2025, 01:47 AM IST
ಲಕ್ಷ್ಮೇಶ್ವರ ಪಟ್ಟಣದ ಎನ್.ಪಿ.ಎಸ್.ನೌಕರರ ಸಂಘದ ಪದಾಧಿಕಾರಿಗಳು ರಾಜ್ಯ ಸರ್ಕಾರ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಪತ್ರ ಚಳವಳಿ ನಡೆಸಿದರು.  | Kannada Prabha

ಸಾರಾಂಶ

ರಾಜ್ಯದಲ್ಲಿ ಪ್ರಸ್ತುತ 2 ಲಕ್ಷದ 65ಸಾವಿರ ಎನ್.ಪಿ.ಎಸ್ ನೌಕರರು ಹಾಗೂ ಅಷ್ಟೇ ಸಂಖ್ಯೆಯ ನಿಗಮ ಮಂಡಳಿ ಅನುದಾನಿತ ಹಾಗೂ ಸ್ವಾಯುತ್ತ ಸಂಸ್ಥೆಗಳ ನೌಕರರು ಎನ್ ಪಿ ಎಸ್ ರದ್ಧತಿಗೆ ಎದುರು ನೋಡುತ್ತಿದ್ದು

ಲಕ್ಷ್ಮೇಶ್ವರ: ಹೊಸ ಪಿಂಚಣಿ ವ್ಯವಸ್ಥೆ (ಎನ್.ಪಿ.ಎಸ್) ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್‌) ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ತಾಲೂಕಾಧ್ಯಕ್ಷ ಎಫ್.ಎಸ್. ತಳವಾರ ಹೇಳಿದರು.

ಬುಧವಾರ ಪಟ್ಟಣದ ಅಂಚೆ ಕಚೇರಿ ಮುಂದೆ ಎನ್.ಪಿ.ಎಸ್ ನೌಕರರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಪತ್ರ ಚಳವಳಿ ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಪ್ರಸ್ತುತ 2 ಲಕ್ಷದ 65ಸಾವಿರ ಎನ್.ಪಿ.ಎಸ್ ನೌಕರರು ಹಾಗೂ ಅಷ್ಟೇ ಸಂಖ್ಯೆಯ ನಿಗಮ ಮಂಡಳಿ ಅನುದಾನಿತ ಹಾಗೂ ಸ್ವಾಯುತ್ತ ಸಂಸ್ಥೆಗಳ ನೌಕರರು ಎನ್ ಪಿ ಎಸ್ ರದ್ಧತಿಗೆ ಎದುರು ನೋಡುತ್ತಿದ್ದು, ಸರ್ಕಾರ ಆದಷ್ಟು ಬೇಗನೆ ರದ್ದು ಪಡಿಸಿ ನೌಕರರ ಬೇಡಿಕೆ ಈಡೇರಿಸಬೇಕು. ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಓಪಿಎಸ್ ಜಾರಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಾ ಬಂದರೂ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಹುಸಿ ಭರವಸೆ ನೀಡುತ್ತಾ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.

ಈ ಅನ್ಯಾಯದ ವಿರುದ್ಧ ಹೋರಾಟಕ್ಕೆ ಕರೆಕೊಟ್ಟು ರಾಜ್ಯದ ಲಕ್ಷಾಂತರ ನೌಕರರು ಮುಖ್ಯ ಮಂತ್ರಿಗಳಿಗೆ ಅಂಚೆ ಪತ್ರ ಬರೆಯುವ ಚಳವಳಿ ಆರಂಭಿಸಿದ್ದೇವೆ.ನೋಂದ ನೌಕರರಿಗೆ ಶೀಘ್ರ ಓಪಿಎಸ್ ನೀಡುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಫೆ. 7ರಂದು ಒಂದು ಲಕ್ಷಕ್ಕೂ ಹೆಚ್ಚು ನೌಕರರು ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಬೃಹತ್ ಧರಣಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು. ಕ.ರಾ.ಪ್ರಾ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನೇಕಾರ ಮಾತನಾಡಿ, ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ 5 ಗ್ಯಾರಂಟಿ ಈಡೇರಿಸುವ ಮೂಲಕ ಜನರ ಮನಸ್ಸಿನಲ್ಲಿ ಉಳಿದಿದೆ. ಅದೇ ರೀತಿ ಓಪಿಎಸ್ ನೀಡುವ ಮೂಲಕ ನೌಕರರ ಮನದಲ್ಲೂ ಉಳಿಯಬೇಕು ಎಂದರು.

ಈ ವೇಳೆ ಎನ್ ಪಿ ಎಸ್ ನೌಕರರ ಸಂಘ ಗೌರವಾಧ್ಯಕ್ಷ ಮಂಜುನಾಥ ಕೊಕ್ಕರಗುಂದಿ, ಪ್ರಕಾರ್ಯದರ್ಶಿ ಸಿದ್ದಪ್ಪ ಪೂಜಾರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕಾಧ್ಯಕ್ಷ ಗುರುರಾಜ ಹವಳದ, ಶ್ರೀಕಾಂತ ನಂದೆಣ್ಣವರ, ಕರಾಪ್ರಾಶಾಶಿ ಸಂಘ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನೇಕಾರ, ಡಿ.ಡಿ. ಲಮಾಣಿ, ಮಂಜುನಾಥ ಚಾಕಲಬ್ಬಿ, ಎಲ್.ಎ. ನಂದೆಣ್ಣವರ, ಎಂ. ಎ.ಅಕ್ಕಿ, ಫಕ್ಕೀರೇಶ ಡಂಬಳ, ಎಚ್.ವೈ. ಹಂಜಗಿ, ಬಸವರಾಜ ಹೆಬ್ಬಾಳ, ನಾಗರಾಜ ಶಿಗ್ಲಿ, ಎಂ.ಎ. ನದಾಫ್, ಬಸವರಾಜ ಯರಗುಪ್ಪಿ, ಸತೀಶ ಬೋಮಲೆ, ಬಿ.ವಿ.ಯತ್ತಿನಹಳ್ಳಿ, ಎಂ.ಎಸ್. ಹಿರೇಮಠ ಹಾಗೂ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯ ಎನ್ ಪಿ ಎಸ್ ನೌಕರರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ