30 ವರ್ಷಗಳ ಹೋರಾಟಕ್ಕೆ ಮುಕ್ತಿ: ಶರತ್ ಬಚ್ಚೇಗೌಡ

KannadaprabhaNewsNetwork |  
Published : Jun 29, 2024, 12:30 AM IST
ಸೂಲಿಬೆಲೆ ಸಹಕಾರ ಬ್ಯಾಂಕ್ ಸಮುದಾಯಭವನದಲ್ಲಿ ನೆಡೆದ ಜನಸ್ಪಂದನಾ ಕಾರ್ಯಕ್ರಮವನ್ನು ಶಾಸಕ ಶರತ್‌ಬಚ್ಚೇಗೌಡ ಉದ್ಘಾಟಿಸಿದರು, ಡಿಸಿ ಶಿವಶಂಕರ್, ಸಿಇಓ ಅನುರಾಧ, ಗ್ರಾ.ಪಂ.ಅಧ್ಯಕ್ಷ ಜನಾರ್ಧನರೆಡ್ಡಿ, ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ ಇತರರು ಇದ್ದರು. | Kannada Prabha

ಸಾರಾಂಶ

ಸೂಲಿಬೆಲೆ: ಹೊಸಕೋಟೆ ತಾಲೂಕಿನಲ್ಲಿ ಸುಮಾರು ೩೦ ವರ್ಷ ಜಮೀನಿನ ಹಕ್ಕು ಪಡೆಯಲು ಹೋರಾಟ ಮಾಡಿದವರಿಗೆ ಇಂದು ಹಕ್ಕುಪತ್ರ ನೀಡಿ ಹೋರಾಟಕ್ಕೆ ಮುಕ್ತಿ ನೀಡಿದ್ದೇವೆ ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು.

ಸೂಲಿಬೆಲೆ: ಹೊಸಕೋಟೆ ತಾಲೂಕಿನಲ್ಲಿ ಸುಮಾರು ೩೦ ವರ್ಷ ಜಮೀನಿನ ಹಕ್ಕು ಪಡೆಯಲು ಹೋರಾಟ ಮಾಡಿದವರಿಗೆ ಇಂದು ಹಕ್ಕುಪತ್ರ ನೀಡಿ ಹೋರಾಟಕ್ಕೆ ಮುಕ್ತಿ ನೀಡಿದ್ದೇವೆ ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು.

ಸಮುದಾಯಭವನದ ಆವರಣದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ತಾಪಂ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 29 ಫಲಾನುಭವಿಗಳಿಗೆ ಸಾಗುವಳಿ ಚೀಟಿ, 187 ಫಲಾನುಭವಿಗಳಿಗೆ ಸವಲತ್ತು, 230 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಶಿವಶಂಕರ್ ಮಾತನಾಡಿ, ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ ಬಗೆಹರಿಸಲು ಜನಸ್ಪಂದನಾ ಕಾರ್ಯಕ್ರಮ ಸಹಕಾರಿಯಾಗಿದ್ದು, ಕಂದಾಯ ಇಲಾಖೆ, ಗ್ರಾಪಂ, ಪೋಲಿಸ್ ಇಲಾಖೆ ವ್ಯಾಪ್ತಿಯ ಸಮಸ್ಯೆಗಳ ಅರ್ಜಿಗಳನ್ನು ಸ್ವೀಕರಿಸಿ, ಒಂದು ವಾರದೊಳಗೆ ಪರಿಹಾರ ಕೊಡಲಿದ್ದೇವೆ. ಸ್ಮಶಾನ ಒತ್ತುವರಿ, ರಸ್ತೆ ಒತ್ತುವರಿ, ಅರಣ್ಯ ಒತ್ತುವರಿ ಅರ್ಜಿಗಳಿಗೆ ಸಮಯಾವಕಾಶ ಬೇಕಾಗುತ್ತದೆ. ಅಭಿವೃದ್ಧಿ ಕಾರ್ಯಕ್ರಮಗಳು ಅನುದಾನದ ಆಧಾರದ ಮೇಲೆ ನಡೆಯಲಿವೆ ಎಂದರು.

ಜಿಪಂ ಸಿಇಒ ಡಾ.ಅನುರಾಧ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ಡೆಂಘೀ ಹಾಗೂ ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರು ಎಚ್ಚರದಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ತಾಪಂ ಇಒ ನಾರಾಯಣಸ್ವಾಮಿ, ಆರಕ್ಷಕ ಉಪಾಧೀಕ್ಷಕ ಶಂಕರಗೌಡ ಪಾಟೀಲ್, ಬಿಇಒ ಪದ್ಮನಾಭ, ಗ್ರಾಪಂ ಅಧ್ಯಕ್ಷ ಜನಾರ್ದನರೆಡ್ಡಿ, ಉಪಾಧ್ಯಕ್ಷೆ ಷಾಜಿಯಾ ಖಾನಂ, ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಗೋಪಾಲಗೌಡ, ಸಹಕಾರ ಬ್ಯಾಂಕ್ ಅಧ್ಯಕ್ಷ ಸತೀಶಗೌಡ, ಯುವ ಮುಖಂಡ ಜಿ.ನಾರಾಯಣಗೌಡ, ತಾಪಂ ಮಾಜಿ ಸದಸ್ಯ ನಗರೇನಹಳ್ಳಿ ನಾಗರಾಜಪ್ಪ, ಡಾ.ಡಿ.ಟಿ.ವೆಂಕಟೇಶ್, ಉಪ ತಹಸೀಲ್ದಾರ್ ಚೈತ್ರಾ, ರಾಜಸ್ವ ನೀರಿಕ್ಷಕ ನ್ಯಾನಮೂರ್ತಿ, ಪಿಡಿಒ ಮಂಜುನಾಥ್, ಜಿಲ್ಲಾ ಆರೋಗ್ಯ ಅಧಿಕಾರಿ ಸುನೀಲ್‌ಕುಮಾರ್, ಡಾ.ಕಿರಣ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿದ್ಯಾ ವಸ್ತ್ರದ ಇತರರಿದ್ದರು.

ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಬೆಸ್ಕಾಂ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಸವಲತ್ತುಗಳ ಪ್ರದರ್ಶನ ಮಳಿಗೆಗಳನ್ನು ಹಾಕಲಾಗಿತ್ತು.

ಕೋಟ್‌.............

ರಾಜ್ಯದಲ್ಲಿ ಮಳೆಯ ಕಾರಣ ಹಸಿರು ಮೇವು ಹೆಚ್ಚಾಗಿ ಹಾಲಿನ ಉತ್ಪಾದನೆ ಹೆಚ್ಚಾಗಿರುವ ಕಾರಣ ಗ್ರಾಹಕರಿಗೆ ೫೦ ಎಂ.ಎಲ್. ಹಾಲು ಹೆಚ್ಚು ನೀಡಿ ೨ ರು. ಹೆಚ್ಚು ಪಡೆಯಲಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇತರೆ ರಾಜ್ಯಗಳಿಗಿಂತ ನಮ್ಮಲ್ಲಿ ಪ್ರಸ್ತುತ ಕಡಿಮೆಯಿದೆ. ಕೇಂದ್ರ ಸರ್ಕಾರ ತೆರಿಗೆ ಕಡಿಮೆ ಮಾಡಿದರೆ ದರ ಕಡಿತ ಮಾಡಬಹುದು.

-ಶರತ್ ಬಚ್ಚೇಗೌಡ, ಶಾಸಕ

ಕೋಟ್‌............

ಹೋಬಳಿಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ೨೩೦ ಅರ್ಜಿಗಳನ್ನು ಸ್ವೀಕರಿಸಿದ್ದು ಎಲ್ಲ ಅರ್ಜಿಗಳನ್ನು ಅನೈಲೈನ್‌ನಲ್ಲಿ ನಮೂದಿಸಲಾಗಿದೆ. ಈ ಅರ್ಜಿಗಳನ್ನು ಮುಖ್ಯಮಂತ್ರಿಗಳ ಕಚೇರಿ ನಿರ್ವಹಣೆ ಮಾಡುತ್ತದೆ. ಪರಿಹಾರ ಶೀಘ್ರದಲ್ಲೆ ದೊರೆಯುತ್ತದೆ.

-ವಿಜಯಕುಮಾರ್, ತಹಸೀಲ್ದಾರ್‌

(ಯಾವುದಾದರೂ ಒಂದು ಫೋಟೊ ಮಾತ್ರ ಬಳಸಿ)

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌