ಧಾರವಾಡ:
ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಪ್ರೊ. ಎಂ.ಆರ್. ಕುಂಬಾರ ಜನ್ಮ ಶತಮಾನೋತ್ಸವ ಸವಿ ನೆನಪಿಗಾಗಿ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆದ "ಡಿಜಿಟಲ್, ಕೃತಕ ಬುದ್ಧಿಮತ್ತೆ " ಜಗತ್ತಿನಲ್ಲಿ ಸಾಂಪ್ರದಾಯಿಕ ವರ್ಗೀಕರಣ, ಕ್ಯಾಟ್‌ಲಾಗ್ ಪದ್ಧತಿಯಿಂದ ಜ್ಞಾನ ಸಂಘಟನೆಯತ್ತ ಮುನ್ನಡೆಯುವಿಕೆ: ಹಿಂದಿನ ಭವಿಷ್ಯದ ದೃಷ್ಟಿಕೋನಗಳು ಎಂಬ ವಿಷಯದ ಕುರಿತು ನಡೆದ ಎರಡು ದಿನಗಳ ರಾಷ್ಟ್ರಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭದ ಭಾಷಣದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಹಳೆಯ ಪದ್ಧತಿ ಮತ್ತು ವಿಧಾನಗಳು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಮಹತ್ವ ಪಡೆದಿದೆ. ಇಂದಿನ ಯುವ ಗ್ರಂಥಪಾಲಕರು ಮತ್ತು ವೃತ್ತಿಪರರು ಪ್ರಾಚೀನ ಪರಂಪರೆ ಮತ್ತು ವಿಧಾನವನ್ನು ಕೂಡ ಮರೆಯಬಾರದು ಎಂದ ಅವರು, ಪ್ರೊ. ಎಂ.ಆರ್. ಕುಂಬಾರ ಅವರು ಗ್ರಂಥಾಲಯದ ದಿಗ್ಗಜರಾಗಿದ್ದಾರೆ ಎಂದರು.ರಾಣಿ ಚೆನ್ನಮ್ಮ ವಿವಿ ವಿಶ್ರಾಂತ ಪ್ರಾಧ್ಯಾಪಕ ಪಿ.ಡಿ. ಕೊಣ್ಣೂರ, ಕವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ದೇಶದಲ್ಲಿ ತನ್ನದೇ ಆದ ಮಹತ್ವ ಪಡೆದಿದೆ. ಗ್ರಂಥಾಲಯದ ಶಿಕ್ಷಣವನ್ನು ಇನ್ನಷ್ಟು ಬೆಳಸಬೇಕಾದ ಅಗತ್ಯವಿದೆ ಎಂದು ಹೇಳಿದರು.ಗ್ರಂಥಾಲಯ ತಜ್ಞ ಪ್ರೊ. ಎಸ್.ಎಲ್. ಕಾಡದೇವರಮಠ ಮಾತನಾಡಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಕುರಿತು ಯುವಕರಲ್ಲಿ ಅರಿವು ಮೂಡಿಸಬೇಕಾಗಿದೆ. ಕರ್ನಾಟಕ ರಾಜ್ಯ ಸಂಘವು ಗ್ರಂಥಪಾಲಕರ ಮತ್ತು ವೃತ್ತಿಪರರ ಜಿಲ್ಲಾಮಟ್ಟದ ಗ್ರಂಥಪಾಲಕರ ಮತ್ತು ವೃತ್ತಿಪರರ ಸಂಘಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಬೆಂಗಳೂರಿನ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಇನ್ಫಾರ್ಮೇಶನ್ ರಿಸೋರ್ಸ್ ಸೆಂಟರ್ ಮುಖ್ಯಸ್ಥ ಡಾ. ನಾಗಪ್ಪ ಬಕ್ಕನ್ನವರ ಅವರು ವಿಚಾರ ಸಮ್ಮೇಳನದ ವರದಿ ಮಂಡಿಸಿದರು. ಈ ವೇಳೆ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ತಜ್ಞರು ಮಾತನಾಡಿದರು. 40ಕ್ಕೂ ಹೆಚ್ಚಿನ ಸಂಶೋಧನಾತ್ಮಕ ಪ್ರಬಂಧಗಳ ಮಂಡನೆಯಾದವು.