ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಅಂಗವಾಗಿ ತಾಲೂಕು ಆಡಳಿತ ಹಾಗೂ ತಾಲೂಕು ಯಾದವ ಸಮಾಜ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಸಮಾಜದ ಯುವಕರು ಇಂದು ಶಿಕ್ಷಣದಲ್ಲಿ ಹೆಚ್ಚು ಒಲವು ತೋರುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದ್ದು ಶ್ರೀಕೃಷ್ಣ ಮಾಡಿರುವ ಮತ್ತು ಅವರ ಧರ್ಮ ಪರವಾದ ನಡೆ, ನುಡಿ, ಆಚಾರ, ವಿಚಾರಗಳನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಬೇಕು ಎಂದು ಕರೆ ನೀಡಿದರು.
ಮದ-ಮತ್ಸರಗಳನ್ನು ನಿಗ್ರಹಿಸಿಕೊಂಡು ಧರ್ಮವಾದ ಮಾರ್ಗದಲ್ಲಿ ಬದುಕು ಸಾಧಿಸುವುದೇ ಶ್ರೀ ಕೃಷ್ಣನ ಸಂದೇಶವಾಗಿದ್ದು, ಭಗವದ್ಗೀತೆಯಲ್ಲಿ ಹೇಳಿರುವ ಮನುಷ್ಯನು ಧರ್ಮವಾಗಿ ಬದುಕುವ ರೀತಿಯನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.ತಾಲೂಕು ಯಾದವ ಸಮಾಜದ ಅಧ್ಯಕ್ಷ ಬೇಡೆಕೆರೆ ಅಜ್ಜಪ್ಪ, ಉಪಾಧ್ಯಕ್ಷ ಬಂಡಿಗೌಡರ ರಾಜಣ್ಣ, ಕಾರ್ಯದರ್ಶಿ ಮಲ್ಲಯ್ಯ, ಜಿಲ್ಲಾ ಜವನಪ್ಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ಬಾಬು, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಸವಲಿಂಗಪ್ಪ, ಬೇಡ್ರಳ್ಳಿ ಜೈರಾಮ್ ,ರಂಗಸ್ವಾಮಿ, ತಿಮ್ಮಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.