ನಿರಂತರ ಕಲಿಕೆಯೇ ಜೀವನ: ಶಂಕರ ಭಾರತೀ ಶ್ರೀ

KannadaprabhaNewsNetwork |  
Published : Jun 19, 2025, 12:35 AM IST
ನೂತನ ಛಾತ್ರ ಪ್ರವೇಶೋತ್ಸವ ಕಾರ್ಯಕ್ರಮ | Kannada Prabha

ಸಾರಾಂಶ

ಕೊಪ್ಪ, ನಿರಂತರ ಕಲಿಕೆಯೇ ಜೀವನ. ಎಲ್ಲಾ ವಿಧದಲ್ಲೂ ಪಕ್ವತೆ ಪಡೆಯುವ ಶಿಕ್ಷಣ ಗುರುಕುಲದಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಮೈಸೂರಿನ ಕೆ.ಆರ್.ಪೇಟೆ ಶ್ರೀ ಯಡತೊರೆ ಯೋಗಾನಂದೇಶ್ವರ ಮಠದ ಶ್ರೀ ಶಂಕರ ಭಾರತೀ ಸ್ವಾಮೀಜಿ ಹೇಳಿದರು.

ಅದ್ದಡದ ಪ್ರಭೋಧಿನಿ ಗುರುಕುಲದಲ್ಲಿ ನಡೆದ ನೂತನ ಛಾತ್ರ ಪ್ರವೇಶೋತ್ಸವ

ಕನ್ನಡಪ್ರಭ ವಾರ್ತೆ, ಕೊಪ್ಪ

ನಿರಂತರ ಕಲಿಕೆಯೇ ಜೀವನ. ಎಲ್ಲಾ ವಿಧದಲ್ಲೂ ಪಕ್ವತೆ ಪಡೆಯುವ ಶಿಕ್ಷಣ ಗುರುಕುಲದಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಮೈಸೂರಿನ ಕೆ.ಆರ್.ಪೇಟೆ ಶ್ರೀ ಯಡತೊರೆ ಯೋಗಾನಂದೇಶ್ವರ ಮಠದ ಶ್ರೀ ಶಂಕರ ಭಾರತೀ ಸ್ವಾಮೀಜಿ ಹೇಳಿದರು.ಬುಧವಾರ ಸಂಜೆ ಅದ್ದಡದ ಪ್ರಭೋಧಿನಿ ಗುರುಕುಲದಲ್ಲಿ ನಡೆದ ನೂತನ ಛಾತ್ರ ಪ್ರವೇಶೋತ್ಸವದ ದಿವ್ಯ ಸಾನಿಧ್ಯ ವಹಿಸಿ ಗುರುಕುಲ ವಿದ್ಯಾರ್ಥಿಗಳಿಗೆ ಪ್ರಥಮ ಪಾಠ ಬೋಧನೆ ಹಾಗೂ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.

ಆಚಾರ್ಯ ಶ್ರೀ ಶಂಕರರು ಈ ಯುಗ ಕಂಡ ಮಹಾನ್ ದಾರ್ಶನಿಕರು. ಸೀಮಿತ ಜೀವಿತಾವಧಿಯಲ್ಲಿ ಅವರು ವೇದ ವೇದಾಂತದ ಕುರಿತಾದ ಉದ್ಗ್ರಂಥಗಳನ್ನು ರಚಿಸಿದರು. ಇದಕ್ಕೆ ಕಾರಣ ಅವರ ಸಾಧನೆ ಹಾಗೂ ಪರಿಶ್ರಮ ಎಂದ ಅವರು ಕುಂದು ಕೊರತೆಗಳನ್ನು ಕಡೆಗಣಿಸಿ ಸಾಧನೆಯಲ್ಲಿ ನಿರತರಾದಾಗ ಎಂತಹ ಸಾಧನೆಯನ್ನೂ ಮಾಡಬಹುದು ಎಂಬುದಕ್ಕೆ ಶ್ರೀ ಶಂಕರ ಭಗವತ್ಪಾದರು ನಮಗೆ ಆದರ್ಶಪ್ರಾಯರಾಗಿದ್ದಾರೆ. ಪ್ರಬೋಧಿನೀ ಗುರುಕುಲ ದ ವಿದ್ಯಾರ್ಥಿಗಳು ಇಂತಹ ಮಹಾನ್ ಸಾಧನೆ ಮಾಡುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀಗಳು ಸ್ವಾಮೀಜಿಯವರು ಸೇರ್ಪಡೆಯಾದ ೧೯ ವಿದ್ಯಾರ್ಥಿಗಳಿಗೆ ಪ್ರಥಮ ಪಾಠ ಬೋಧಿಸಿದರು. ಸರ್ಕಾರದ ಉನ್ನತ ಶಿಕ್ಷಣ ವಿಭಾಗದ ನಿವೃತ್ತ ಜಂಟಿ ನಿರ್ದೇಶಕ, ಪ್ರಭೋಧಿನಿ ಗುರುಕುಲದ ಮುಖ್ಯ ವಕ್ತಾರ ಟಿ.ಎನ್. ಪ್ರಭಾಕರ್ ಮಾತನಾಡಿ ಪ್ರಬೋಧಿನೀ ಗುರುಕುಲ ಕಳೆದ ೩೦ ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ಇಲ್ಲಿ ಅಧ್ಯಯನ ಮಡುವವರಿಗೆ ಆಧ್ಯಾತ್ಮಿಕ, ರಾಷ್ಟ್ರೀಯ ಶಿಕ್ಷಣ ನೀಡಲಾಗುತ್ತದೆ. ಪರಿಸರ, ನದಿ ಹಸಿರು, ಬೆಟ್ಟ ಗುಡ್ಡ ಗಳ ಜೊತೆಗೆ ಸಜೀವ ಸಂಬಂಧ ಇಟ್ಟುಕೊಂಡು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇಂದ್ರಿಯಗಳ ಅನುಭವಕ್ಕೆ ಮೀರಿದ ಅಲೌಕಿಕ ಅನುಭೂತಿ ಇಲ್ಲಿ ಸಿಗುತ್ತಿದೆ. ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಒಮ್ಮೆ ಮೈಸೂರಿನ ಚಿಂತನಕೂಟವೊಂದರಲ್ಲಿ ಗುರು ಕುಲದ ವಿದ್ಯಾರ್ಥಿಗಳ ಬಗ್ಗೆ ಉಲ್ಲೇಖಿಸುತ್ತಾ "ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಕಾಲೇಜು ವಿದ್ಯಾರ್ಥಿಗಳಿಗೆ ಹೊಳೆಯದ ಮೌಲಿಕ ಪ್ರಶ್ನೆಗಳನ್ನು ಇಲ್ಲಿನ ವಿದ್ಯಾರ್ಥಿಗಳು ಕೇಳುತ್ತಾರೆ " ಎಂದಿದ್ದರು. ಇಂತಹ ಸಂಸ್ಥೆಯಲ್ಲಿ ಅಧ್ಯಯನ ಮಾಡಲು ಈ ವರ್ಷ ಸೇರ್ಪಡೆಯಾದ ನೂತನ ಛಾತ್ರರಿಗೆ ಶುಭವಾಗಲಿ ಎಂದರು. ಪ್ರಬೋಧಿನೀ ಟ್ರಸ್ಟ್ ನಿರ್ವಾಹಕ ವಿಶ್ವಸ್ತ ಎಚ್.ಬಿ. ರಾಜಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಬೋಧಿನೀ ಟ್ರಸ್ಟ್ನ ಅಭ್ಯಾಗತರು, ಬೆಂಗಳೂರು ಏಸ್ಟರ್ ಆರ್.ವಿ. ಆಸ್ಪತ್ರೆಯ ಡಾ. ಶಿವರಾಮ್ ಮಾತನಾಡಿ ಈ ಪುಣ್ಯಭೂಮಿ ಯಲ್ಲಿ ನಡೆಯುತ್ತಿರುವ ಶ್ರೇಷ್ಠ ಕಾರ್ಯಕ್ಕೆ ಸಮಾಜದ ಸರ್ವರೂ ಹೆಗಲು ಕೊಟ್ಟು ಯಶಸ್ವಿಗೊಳಿಸಬೇಕಾಗಿದೆ ಎಂದರು. ಗುರುಕುಲದ ಮುಖ್ಯಸ್ಥರು, ಶಿಕ್ಷಕ ಗುರುವೃಂದ, ವಿದ್ಯಾರ್ಥಿಗಳು, ಸಿಬ್ಬಂದಿಗಳು, ಸುತ್ತಲಿನ ಭಕ್ತಾದಿಗಳು ಕಾರ್ಯಕ್ರಮದಲ್ಲಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...