ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಗ್ರಾಮದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಶುಕ್ರವಾರ 50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಕೆ. ವೆಂಕಟೇಶ್ ಅವರು ತಾಲೂಕಿನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಗಮನ ಸೆಳೆದು ಅನುದಾನವನ್ನು ಬಿಡುಗಡೆ ಮಾಡಿಸಿದ್ದಾರೆ, ಬಹುದಿನಗಳ ಬೇಡಿಕೆಯಾಗಿದ್ದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಬೆಟ್ಟಕ್ಕೆ ಹೋಗುವ ರಸ್ತೆಯ ಕಾಮಗಾರಿಗೆ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.ಇಲಾಖೆ ವತಿಯಿಂದ ಶಾಲೆ ಕಾಲೇಜು ನಿರ್ಮಾಣ ನೀರಾವರಿ ಯೋಜನೆಗಳಿಗೆ ಚಾಲನೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಯೋಜನೆಗಳಿಗೆ ಸಹಕಾರ ನೀಡಲಾಗುತ್ತಿದೆ, ಸ್ಥಳೀಯ ಶಾಸಕ ಕೆ. ವೆಂಕಟೇಶ್ ಅವರ ಈ ಅವಿರತ ಶ್ರಮವನ್ನು ತಾಲೂಕಿನ ಜನತೆ ಎಂದಿಗೂ ಮರೆಯಬಾರದು ಎಂದರು.
ಶಾಸಕ ಕೆ. ವೆಂಕಟೇಶ್ ಬಹಳ ಕಾಲದಲ್ಲಿ ಬೇಡಿಕೆ ಇದಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡಿದ್ದೆ. ಅವರು ಲೋಕೋಪಯೋಗಿ ಸಚಿವರಿಗೆ ವಿಶೇಷವಾಗಿ 50 ಕೋಟಿ ಅನುದಾನ ಮಂಜೂರು ಮಾಡಿಕೊಟ್ಟಿದಾರೆ, ಇವರಿಬ್ಬರಿಗೆ ಧನ್ಯವಾದಗಳು ಅರ್ಪಿಸುತ್ತೇನೆ. ಐತಿಹಾಸಿಕ ಕಾರ್ಯಕ್ರಮ ದೇವಸ್ಥಾನಕ್ಕೆ ರಸ್ತೆ ಮಾಡಿಯೇ ಬೆಟ್ಟ ಹತ್ತುವುದಾಗಿ ಶಪಥ ಮಾಡಿದ್ದೆ. ಅಭಿವೃದ್ಧಿಗೆ ಮನಸ್ಸಿರಬೇಕು. ಕ್ಷೇತ್ರದ ಸಮಸ್ಯೆ ಅರಿವಿರಬೇಕು. ಅಗತ್ಯತೆ ಪೂರೈಸುವ ಚಿಂತನೆ ಇರಬೇಕು. 9 ಚುನಾವಣೆಯಲ್ಲಿ ಎದುರಿಸಿದ್ದೇನೆ. 6 ಬಾರಿ ಗೆದ್ದಿದ್ದೇನೆ. ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಅಂದಿನಿ ಸರ್ಕಾರ ಸಹಕಾರ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಅಭಿವೃದ್ಧಿಗೆ ಎಲ್ಲ ಸಹಕಾರ ನೀಡಿದ್ದಾರೆ.
ಶಿಕ್ಷಣ ಆದ್ಯತೆ ನೀಡಿ 85 ಸ್ಮಾರ್ಟ್ ಕ್ಲಾಸ್ ನೀಡಿದ್ದೇನೆ.ನಾನು ಮೈಮರೆತು ಕೂತಿಲ್ಲ. ಅಭಿವೃದ್ದಿ ಬಗ್ಗೆ ಇಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ. ಅಭಿವೃದ್ಧಿಗೆ ಶ್ರಮಿಸಿದವರ ಪರವಾಗಿ ನಿಲ್ಲಬೇಕು ಎಂದರು.