ಕುಕನೂರು: ಸ್ಥಳೀಯ ಪಪಂ ಅಧ್ಯಕ್ಷೆಯಾಗಿ ಲೀಲಾವತಿ ಪ್ರವೀಣಕುಮಾರ ಮುಧೋಳ, ಉಪಾಧ್ಯಕ್ಷರಾಗಿ ಮಂಜುಳಾ ಯಲ್ಲಪ್ಪ ಕಲ್ಮನಿ ಶನಿವಾರ ಆಯ್ಕೆಯಾದರು.
ಶಾಸಕ, ಸಂಸದನಿಂದ ಮತದಾನ: ಪಪಂನಲ್ಲಿ ನಡೆದ ಚುನಾವಣೆಗೆ ಶಾಸಕ ಬಸವರಾಜ ರಾಯರಡ್ಡಿ ಮತ್ತು ಸಂಸದ ಕೆ.ರಾಜಶೇಖರ ಹಿಟ್ನಾಳ ಮತದಾನ ಮಾಡಿದರು. ಅವರ ಮತದಾನದಿಂದ ಕಾಂಗ್ರೆಸ್ ೧೨ ಮತ ಪಡೆದರೆ, ಬಿಜೆಪಿಗೆ ೯ಮತಗಳು ಬಂದಿವೆ. ಆದ್ದರಿಂದ ಅಧಿಕೃತವಾಗಿ ೩ಮತಗಳ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳು ಪಡೆದಿರುವದರಿಂದ ಅಧ್ಯಕ್ಷರಾಗಿ ಲೀಲಾವತಿ ಮುಧೋಳ,ಉಪಾಧ್ಯಕ್ಷರಾಗಿ ಮಂಜುಳಾ ಕಲ್ಮನಿ ಆಯ್ಕೆಯಾದರು. ಚುನಾವಣೆ ಪ್ರಕ್ರೀಯೆ ತಮ್ಮ ಅಭ್ಯರ್ಥಿಗಳಿಗೆ ಕೈ ಎತ್ತುವ ಮೂಲಕ ಚುನಾವಣೆ ಜರುಗಿತು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾರ್ಗದರ್ಶನದಲ್ಲಿ ಶ್ರಮಿಸುತ್ತಾರೆ ಎಂದರು.ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಈ ಬಾರಿ ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ತಾಲೂಕಿನ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುತ್ತಿದ್ದೇನೆ.ರೈತರಿಗಾಗಿ ಕುಕನೂರು ಮತ್ತು ಚಿಕ್ಕೊಪ್ಪ ಎಪಿಎಂಸಿಯಲ್ಲಿ ಎರಡು ಕೋಲ್ಡ್ ಸ್ಟೋರೆಜ್ ನಿರ್ಮಿಸಿದ್ದೇನೆ. ಕೆರೆ ತುಂಬಿಸುವ ಯೋಜನೆ, ಪ್ರಜಾಸೌಧ, ಬುದ್ಧ ಬಸವ ಅಂಬೇಡ್ಕರ್ ಭವನ, ನ್ಯಾಯಾಲಯ ನಿರ್ಮಾಣಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಕ್ಷೇತ್ರಕ್ಕೆ ಕರೆಸುತ್ತೇನೆ. ಎಲ್ಲರೂ ಕುಕನೂರು ಪಟ್ಟಣ ಅಭಿವೃದ್ಧಿಗೆ ಶ್ರಮೀಸೋಣ ಎಂದರು.
ಚುನಾವಣಾಧಿಕಾರಿ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರು, ಸಂಸದ ರಾಜಶೇಖರ ಹಿಟ್ನಾಳ, ಪಪಂ ಮುಖ್ಯಾಧಿಕಾರಿ ನಾಗೇಶ, ಕರೆಬಸಪ್ಪ ನೀಡಗುಂದಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಯಲಬುರ್ಗಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಕೊರ್ಲಹಳ್ಳಿ, ಮಂಜುನಾಥ ಕಡೆಮನಿ, ಮಲಿಯಪ್ಪ ಅಣ್ಣಿಗೇರಿ, ಶರಣಪ್ಪ ಗಾಂಜಿ, ವೀರಯ್ಯ ತೊಂಟದಾರ್ಯಮಠ, ಪಪಂ ಸದಸ್ಯರು, ಅಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.