ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಪ್ರಶಸ್ತಿ ಸ್ವೀಕರಿಸಿದ, ಡಾ.ಹಂಸಲೇಖ ಮಾತನಾಡಿ, ವಚನ ಸಾಹಿತ್ಯ ಎಂಬ ಟೆಂಗಿನಕಾಯಿಯನ್ನು ನನಗೆ ಪೂಜ್ಯರು ಕರುಣಿಸಿದರೆ, ನಾನು ಅದನ್ನು ಹೆಮ್ಮರವಾಗಿ ಬೆಳೆಸಿ, ಸಾವಿರಾರು ಟೆಂಗಿನ ಗಿಡಗಳು, ಅಂದರೆ ವಚನದ ಪರಿಮಳವನ್ನು ಎಲ್ಲಡೆ ಪಸರಿಸುವಲ್ಲಿ ವಚನ ವೃಕ್ಷ ನಿರ್ಮಾಣ ಮಾಡುವಲ್ಲಿ ಖಂಡಿತವಾಗಿ ಪ್ರಯತ್ನ ಮಾಡುತ್ತೇನೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷರಾದ ಈಶ್ವರ ಖಂಡ್ರೆ, ಮಾಜಿ ಸಚಿವದ ರಹೀಂ ಖಾನ್ ಉಪಸ್ಥಿತರಿದ್ದರು. ಬಸವರಾಜ ಬುಳ್ಳಾ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸುನೀತಾ ರಾಜು ದಾವಣಗೆರೆ ಅವರು ವಿರಚಿತ ಎರಡು ಗ್ರಂಥಗಳು ಲೋಕಾರ್ಪಣೆಗೊಂಡವು. ಶ್ರೀಕಾಂತಸ್ವಾಮಿ, ಗುಣವಂತರಾವ ಪಾಟೀಲ, ಅವಿನಾಶ ಭೋಸಿಕರ್, ಮಹೇಶ ಬೆಲ್ಲದ, ಪಿ.ಚಂದ್ರಶೇಖರೆಡ್ಡಿ, ನೀಲಕಂಠ ಮೂಲಗೆ, ರವೀಂದ್ರ ಶಾಬಾದಿ, ರಾಜಶೇಖರ ಯಕ್ಕಂಚಿ, ಮಲ್ಲಿಕಾರ್ಜುನ ವಡ್ಡನಕೇರೆ, ದಿಗಂಬರ ಮಡಿವಾಳ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿಜಯಸಿಂಗ್, ಗುರುನಾಥ ಗಡ್ಡೆ, ರವಿ ಮೀಸೆ, ಡಾ.ಜಗನ್ನಾಥ ಹೆಬ್ಬಾಳೆ, ಬಂಡೆಪ್ಪ ಕಂಟೆ, ಪ್ರಕಾಶ ಘೂಳೆ, ವಿಜಯಕುಮಾರ ಪಟ್ನೆ, ಅನೀಲಕುಮಾರ ಹೈಲೆಟ್ ಮಧುಶೇಖರ, ಸಂಜಯ ಪಾಟೀಲ, ಭೀಮರಾವ ಬಿರಾದಾರ ಸೇರಿದಂತೆ ಇನ್ನಿತರರು ಇದ್ದರು.--
ಬಸವಕಲ್ಯಾಣದ ಶರಣ ಕಮ್ಮಟದಲ್ಲಿ ಖ್ಯಾತ ಸಂಗೀತ ನಿರ್ದೇಶಕ, ಡಾ.ಹಂಸಲೇಖ ಸೇರಿದಂತೆ ಇನ್ನಿತರರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.