ಯೋಗ, ಧ್ಯಾನದ ಮೊರೆ ಹೋದ ವಿದೇಶಿ ಜನತೆ

KannadaprabhaNewsNetwork |  
Published : Nov 30, 2026, 02:30 AM IST
29ಕೆಡಿವಿಜಿ3-ದಾವಣಗೆರೆಯಲ್ಲಿ ಭಾನುವಾರ ಶ್ರೀ ದಿವ್ಯ ಯೋಗ ಮಂದಿರದ ಶಿಲಾನ್ಯಾಸ ನೆರವೇರಿಸಿದ ಶಾಸಕ ಸಮರ್ಥ ಶಾಮನೂರು. ಹೆಬ್ಬಾಳ್ ಡಾ.ಮಹಾಂತ ರುದ್ರೇಶ್ವರ ಸ್ವಾಮೀಜಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಡಾ.ಟಿ.ಜಿ.ರವಿಕುಮಾರ, ವಿ.ಕೆ.ವಿ.ಅಶೋಕ, ಕ್ಷೀರಸಾಗರ ಹನುಮಂತಪ್ಪ ಇತರರು ಇದ್ದರು. ...............29ಕೆಡಿವಿಜಿ4-ದಾವಣಗೆರೆಯಲ್ಲಿ ಭಾನುವಾರ ಶ್ರೀ ದಿವ್ಯ ಯೋಗ ಮಂದಿರದ ಶಿಲಾನ್ಯಾಸ ಸಮಾರಂಭ ಉದ್ಘಾಟಿಸಿದ ಶಾಸಕ ಸಮರ್ಥ ಶಾಮನೂರು. ಹೆಬ್ಬಾಳ್ ಡಾ.ಮಹಾಂತ ರುದ್ರೇಶ್ವರ ಸ್ವಾಮೀಜಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಡಾ.ಟಿ.ಜಿ.ರವಿಕುಮಾರ, ವಿ.ಕೆ.ವಿ.ಅಶೋಕ, ಕ್ಷೀರಸಾಗರ ಹನುಮಂತಪ್ಪ ಇತರರು ಇದ್ದರು. | Kannada Prabha

ಸಾರಾಂಶ

ಭಾರತೀಯ ಋಷಿ, ಮುನಿಗಳ ಬಳುವಳಿಯಾದ ಯೋಗ, ಧ್ಯಾನದ ಮಹತ್ವವನ್ನು ನಮ್ಮ ದೇಶದ ಜನಕ್ಕಿಂತಲೂ ವಿದೇಶದವರು ಅರ್ಥ ಮಾಡಿಕೊಂಡು, ಅದನ್ನು ಶಿಕ್ಷಣ ಮತ್ತು ಬದುಕಿನ ಭಾಗವಾಗಿ ಅಳವಡಿಸಿಕೊಂಡಿದ್ದಾರೆ. ಅದು ನಮಗೆ, ನಿಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ ಎಂ. ಶಾಮನೂರು ಹೇಳಿದ್ದಾರೆ.

- ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಯೋಗ, ಧ್ಯಾನ ತರಬೇತಿ ಅಗತ್ಯ: ಸಮರ್ಥ ಶಾಮನೂರು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತೀಯ ಋಷಿ, ಮುನಿಗಳ ಬಳುವಳಿಯಾದ ಯೋಗ, ಧ್ಯಾನದ ಮಹತ್ವವನ್ನು ನಮ್ಮ ದೇಶದ ಜನಕ್ಕಿಂತಲೂ ವಿದೇಶದವರು ಅರ್ಥ ಮಾಡಿಕೊಂಡು, ಅದನ್ನು ಶಿಕ್ಷಣ ಮತ್ತು ಬದುಕಿನ ಭಾಗವಾಗಿ ಅಳವಡಿಸಿಕೊಂಡಿದ್ದಾರೆ. ಅದು ನಮಗೆ, ನಿಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ ಎಂ. ಶಾಮನೂರು ಹೇಳಿದರು.

ನಗರದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ಭಾನುವಾರ ಶ್ರೀ ದಿವ್ಯ ಯೋಗ ಮಂದಿರದ ಶಿಲಾನ್ಯಾಸ ಹಾಗೂ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದೇಶದಲ್ಲಿ ತಾವು ಓದುತ್ತಿದ್ದಾಗ ಬಿಳಿ ಬಣ್ಣದವರ ಮಧ್ಯೆ ನಮ್ಮ ಬಣ್ಣದವನು ನಾನೊಬ್ಬನಿದ್ದೆ. ಅಲ್ಲಿ ನಾನು ಆ ಜನರಿಂದ ಯೋಗ, ಧ್ಯಾನ ಕಲಿಯಬೇಕಾಯಿತು ಎಂದರು.

ವಿದೇಶದಲ್ಲಿ ಕಾಲೇಜು ಶಿಕ್ಷಣವೆಂದರೆ ವೈದ್ಯ ಅಥವಾ ಎಂಜಿನಿಯರ್ ಆಗಬೇಕು ಎಂಬುದಾಗಿದೆ. ಆದರೆ, ನಾನು ಎಕನಾಮಿಕ್ಸ್ ಓದಿದ್ದು, ವಿದೇಶಗಳಲ್ಲಿ ಜಗತ್ತಿಗೆ ಭಾರತದ ಕೊಡುಗೆಯಾದ ಯೋಗ, ಧ್ಯಾನವನ್ನು ನಿತ್ಯ ಅಭ್ಯಾಸ ಮಾಡಿಸುವುದು ಕಂಡು ಸಾಕಷ್ಟು ಖುಷಿಯಾಯಿತು. ಯೋಗಕ್ಕೆ ನಮ್ಮ ದೇಶದಲ್ಲಿ ನೀಡುವುದಕ್ಕಿಂತಲೂ ಹೆಚ್ಚಿನ ಮಹತ್ವ ಅಲ್ಲಿ ನೀಡಲಾಗುತ್ತಿದೆ. ಯೋಗ, ಪ್ರಾಣಾಯಾಮ, ಅಷ್ಟಾಂಗ ಯೋಗ ಎಲ್ಲವನ್ನೂ ನಾನು ಅಲ್ಲೇ ಕಲಿತಿದ್ದು. ಯೋಗ, ಧ್ಯಾನವೆಂದರೆ ನನಗೆ ಅಚ್ಚುಮೆಚ್ಚು ಎಂದು ತಿಳಿಸಿದರು.

ಯೋಗ, ಪ್ರಾಣಾಯಾಮದಿಂದ ಮನಸ್ಸಿಗೆ ಸಮಾಧಾನ ಲಭಿಸುವುದು. ಮನುಷ್ಯನಿಗೆ ಅತಿಯಾದ ದುಃಖವೂ ಇರಬಾರದು, ಖುಷಿಯೂ ಇರಬಾರದು. ಎರಡೂ ಸಮಾಧಾನ ಆಗಿದ್ದಾಗ ಆರೋಗ್ಯ ಸಹಜವಿರುತ್ತದೆ. ಪ್ಯಾನಿಕ್ ಅಟ್ಯಾಕ್, ಮೆಂಟಲ್ ಹೆಲ್ತ್ ಅಂತಾ ಅಂತಾ ಹೇಳಿದರೆ ಹಿರಿಯ ಜನರಿಗೆ ಏನೆಂಬುದು ಗೊತ್ತಿಲ್ಲ. ಆದರೆ, ಈಗಿನ ಪೀಳಿಗೆ ಒತ್ತಡ, ಜೀವನಶೈಲಿಯಿಂದಾಗಿ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದೆ ಎಂದು ಹೇಳಿದರು.

ನಿಂತು ನೀರು ಕುಡಿಯದೇ, ಕುಳಿತು ಕುಡಿಯಬೇಕು. ಸಾಧ್ಯವಾದಷ್ಟು ನೆಲದ ಮೇಲೆಯೇ ಕೂಡಬೇಕು. ಹೀಗೆ ಹಿರಿಯರು ಪಾಲಿಸುತ್ತಿದ್ದ ಜೀವನ ಶೈಲಿಯನ್ನೇ ಇಂದು ವೈದ್ಯರು, ಯೋಗ ಗುರುಗಳು ಹೇಳುತ್ತಾರೆ. ನಾವಾದರೂ ನಮ್ಮ ಹಳೆಯ ಮನೆಯನ್ನು ಜನಸಂಪರ್ಕ ಕಚೇರಿ ಮಾಡಿಕೊಂಡಿದ್ದು, ಅಲ್ಲಿ ನೆಲದ ಮೇಲೆಯೇ ಒಂದು ಮಣೆ ಮಾಡಿಸಿ, ಅದರ ಮೇಲೆ ಕುಳಿತೇ, ಜನರ ಭೇಟಿಯಾಗುತ್ತಿದ್ದೇನೆ. ನಮ್ಮ ಸಂಬಂಧಿ ಡಾ. ಟಿ.ಜಿ.ರವಿಕುಮಾರ ಆರೋಗ್ಯ ಕಾಪಾಡಿಕೊಳ್ಳಲು ಕಿವಿಮಾತು ಹೇಳಿದ್ದಾರೆ. 6 ತಿಂಗಳಿಂದ ಯೋಗ, ಧ್ಯಾನ ಮಾಡಿಲ್ಲ. ಇನ್ನು ಮುಂದೆ ನಾನೂ ದಿವ್ಯ ಯೋಗ ಮಂದಿರಕ್ಕೆ ಯೋಗಾಭ್ಯಾಸಕ್ಕೆ ಬರುತ್ತೇನೆ ಎಂದು ಶಾಸಕ ಸಮರ್ಥ ತಿಳಿಸಿದರು.

ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿ, ಪ್ರತಿಯೊಬ್ಬರೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಯಾರೂ ಒಂದು ಕಡೆ ಸಮಾಧಾನದಿಂದ ಕೂಡುತ್ತಿಲ್ಲ. ಇಂತಹ ಯೋಗ ಕೇಂದ್ರಗಳ ಮೂಲಕ ಮಕ್ಕಳಾದಿಯಾಗಿ ಎಲ್ಲ ವಯೋಮಾನದವರಿಗೂ ಯೋಗಾಭ್ಯಾಸ ಮಾಡಿಸಬೇಕು. ಈಗಿನ ಪೀಳಿಗೆ, ಝೆನ್‌ ಜೀಗಳಿಗೆ ಶಾಂತಿ, ಸಮಾಧಾನವೇ ಇಲ್ಲದಂತಾಗಿದೆ. ಇನ್ನು ಮುಂದೆ ಶಾಲೆಗಳಲ್ಲಿ ಕನಿಷ್ಠ ಅರ್ಧ ಗಂಟೆ ಯೋಗ, ಧ್ಯಾನ ತರಬೇತಿ ನೀಡುವಂತೆ ಶಿಕ್ಷಣ ಸಚಿವರಿಗೆ 2 ವರ್ಷದಿಂದ ಒತ್ತಾಯಿಸುತ್ತಿದ್ದೇವೆ. ಬೆಳಗಾವಿ ಅಧಿವೇಶನದ ವೇಳೆ ಮತ್ತೊಮ್ಮೆ ಭೇಟಿ ಮಾಡಿ, ಈ ಬಗ್ಗೆ ಮನವಿ ಮಾಡುತ್ತೇವೆ ಎಂದರು.

ದಾವಣಗೆರೆ, ಹುಬ್ಬಳ್ಳಿಯಂತಹ 2ನೇ ಹಂತದ ನಗರಗಳಲ್ಲಿ ಮಾತ್ರ ನೆರೆಹೊರೆ, ಬಾಂಧವ್ಯ, ಸ್ನೇಹ ಅಂತಾ ಉಳಿದಿದೆ. ಬೆಂಗಳೂರು, ಮುಂಬೈನಂತಹ ನಗರಹಳಲ್ಲಿ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದೂ ಗೊತ್ತಾಗದಂತೆ ಅಪರಿಚಿತರಾಗಿ ಜೀವನ ನಡೆಸುತ್ತಿದ್ದಾರೆ. ನಮ್ಮ ಊರಿನಲ್ಲಿ ಪಾರ್ಕ್‌ಗಳು, ಗಾಜಿನ ಮನೆ, ಕುಂದುವಾಡ ಕೆರೆಯಂತಹ ಸ್ಥಳ ಜನರಿಗೆ ಪರಸ್ಪರರ ಭೇಟಿಗೆ ಪೂರಕವಾಗಿ. ಮೂಲತಃ ಮನುಷ್ಯ ಸಂಘ ಜೀವಿಯಾಗಿದ್ದು, ಕೊರೋನಾ ಬಂದು ಹೋದ ನಂತರ ಸ್ನೇಹ, ಸಂಬಂಧಗಳು ವೃದ್ಧಿಯಾಗುತ್ತಿವೆ. ಹಣವಿದ್ದರೆ ಎಲ್ಲವೂ ಸಾಧ್ಯವಿಲ್ಲ. ಸ್ನೇಹಿತರಿಲ್ಲದಿದ್ದರೆ ಏಕಾಂಗಿತನ ಕಾಡುತ್ತದೆ ಎಂದು ಅವರು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಹೆಬ್ಬಾಳ್ ವಿರಕ್ತ ಮಠದ ಡಾ.ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, 25 ವರ್ಷಗಳ ಹಿಂದೆ ಆರಂಭ‍ವಾದ ದಿವ್ಯ ಯೋಗ ಮಂದಿರ ಒಂದು ಸ್ವಂತ ಸ್ಥಳದಲ್ಲಿ ಈಗ ನಿರ್ಮಾಣವಾಗುತ್ತಿದೆ. ಸಿದ್ಧಗಂಗಾ ಮಠ, ಧಾರವಾಡದ ಮೃತ್ಯುಂಜಯ ಅಪ್ಪಗಳ ಮಠಗಳು ತ್ರಿವಿಧ ದಾಸೋಹಿ ಮಠಗಳಾಗಿವೆ. ದಿವ್ಯ ಯೋಗ ಕೇಂದ್ರವು ಚತುರ್ಥ ದಾಸೋಹ ಮಂದಿರ ಮಾಡಬೇಕೆಂಬ ಸಂಕಲ್ಪ ಆದಷ್ಟು ಬೇಗನೆ ಸಾಕಾರಗೊಳ್ಳಲಿ. ಸಂಸ್ಥೆ ಹೆಮ್ಮರವಾಗಿ ಬೆಳೆದು, ಸಮಾಜದ ಅಜ್ಞಾನ, ಅಂಧಕಾರ, ಮೂಢನಂಬಿಕೆಗಳನ್ನು ದೂರ ಮಾಡಿ, ನವಚೈತನ್ಯ ತುಂಬುವ ಕೇಂದ್ರವಾಗಲಿ ಎಂದು ಹಾರೈಸಿದರು.

ಹಿರಿಯರಾದ ಕ್ಷೀರಸಾಗರ ಹನುಮಂತಪ್ಪ, ಯೋಗ ಮಂದಿರದ ಸಂಸ್ಥಾಪಕ ವಿ.ಕೆ.ಅಶೋಕ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ಟಿ.ಜಿ.ರವಿಕುಮಾರ, ಸಿ.ಉಮೇಶ ಶೆಟ್ಟಿ, ರೂಪಾ ಅಶೋಕ, ಭೂಮಿಕಾ ರೇಣುಕಾಚಾರ್ಯ, ವೀರೇಶ, ಚಂದ್ರಶೇಖರ, ದಿಳ್ಳೆಪ್ಪ, ಶ್ರೀಕಾಂತ ಬಗರೆ, ವಿಲೇಶ ಮಲ್ಲಿಕಾರ್ಜುನ ಗೌಡ್ರು, ಡಾ. ಚೈತ್ರಾ, ಉಮಾ ರುದ್ರೇಶ ಇತರರು ಇದ್ದರು.

- - -

(ಕೋಟ್‌)

ತಮ್ಮ ಅವಧಿಯಲ್ಲಿ ದಿವ್ಯ ಯೋಗ ಮಂದಿರಕ್ಕೆ ಜಾಗ ನೀಡಿದ್ದಕ್ಕೆ ಖುಷಿಯಾಗಿದೆ. ಜನರಲ್ಲಿ ಈಚೆಗೆ ಆರೋಗ್ಯ ಕಾಳಜಿ ಹೆಚ್ಚುತ್ತಿದ್ದು, ಯೋಗ, ಧ್ಯಾನ, ವಾಕ್‌ ಮೊರೆ ಹೋಗುತ್ತಿದ್ದಾರೆ. ಪಿರಮಿಡ್‌ನಲ್ಲಿ ಕುಳಿತು ಧ್ಯಾನ ಮಾಡಲು ಬಹಳಷ್ಟು ಜನ ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ಇಲ್ಲಿನ ಎಸ್.ನಿಜಲಿಂಗಪ್ಪ ಬಡಾವಣೆಯ ದೂಡಾ ಅಧೀನದ ಅಮರ್ ಜವಾನ್ ಪಾರ್ಕ್‌ನಲ್ಲಿ ಪಿರಮಿಡ್ ನಿರ್ಮಿಸುವ ಆಲೋಚನೆ ಇದೆ. ಆದಷ್ಟು ಬೇಗನೆ ಇದನ್ನು ಕಾರ್ಯರೂಪಕ್ಕೆ ತರುತ್ತೇವೆ.

- ದಿನೇಶ ಕೆ. ಶೆಟ್ಟಿ, ಅಧ್ಯಕ್ಷ, ದೂಡಾ.

- - -

-29ಕೆಡಿವಿಜಿ3: ದಾವಣಗೆರೆಯಲ್ಲಿ ಭಾನುವಾರ ಶ್ರೀ ದಿವ್ಯ ಯೋಗ ಮಂದಿರದ ಶಿಲಾನ್ಯಾಸವನ್ನು ಶಾಸಕ ಸಮರ್ಥ ಶಾಮನೂರು ನೆರವೇರಿಸಿದರು. ಹೆಬ್ಬಾಳ್ ಡಾ.ಮಹಾಂತ ರುದ್ರೇಶ್ವರ ಸ್ವಾಮೀಜಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಡಾ.ಟಿ.ಜಿ.ರವಿಕುಮಾರ, ವಿ.ಕೆ.ವಿ.ಅಶೋಕ, ಕ್ಷೀರಸಾಗರ ಹನುಮಂತಪ್ಪ ಇತರರು ಇದ್ದರು. -29ಕೆಡಿವಿಜಿ4: ದಾವಣಗೆರೆಯಲ್ಲಿ ಭಾನುವಾರ ಶ್ರೀ ದಿವ್ಯ ಯೋಗ ಮಂದಿರದ ಶಿಲಾನ್ಯಾಸ ಸಮಾರಂಭವನ್ನು ಶಾಸಕ ಸಮರ್ಥ ಶಾಮನೂರು ಉದ್ಘಾಟಿಸಿದರು. ಹೆಬ್ಬಾಳ್ ಡಾ.ಮಹಾಂತ ರುದ್ರೇಶ್ವರ ಸ್ವಾಮೀಜಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಡಾ.ಟಿ.ಜಿ.ರವಿಕುಮಾರ, ವಿ.ಕೆ.ವಿ.ಅಶೋಕ, ಕ್ಷೀರಸಾಗರ ಹನುಮಂತಪ್ಪ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಖಿಲ ಭಾರತ ಫಿಡೆ ರ್‍ಯಾಪಿಡ್ ಚೆಸ್‌, ಚಿರಂತ್‌ ಪ್ರಥಮ
ಸಕ್ಕರೆ ರಿಕವರಿ ವರದಿಯಲ್ಲಿ ರೈತರಿಗೆ ಮೋಸ; ತನಿಖೆಗೆ ಆಗ್ರಹ