ಜಿಲ್ಲಾ ಚೆಸ್ ಅಸೋಸಿಯೇಷನ್ ಆಶ್ರಯದಲ್ಲಿ ನಗರದ ವಾಲ್ಮೀಕಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸರ್ಜಿ ರೇಣುಕಾ ಆಲ್‌ ಇಂಡಿಯಾ ಫಿಡೆ ರ್ಯಾ,ಪಿಡ್ ರೇಟಿಂಗ್ ಚೆಸ್ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಚಿರಂತ್ ಎಂ.ಡಿ. ಪ್ರಥಮ ಸ್ಥಾನ ಪಡೆದು ₹15,001 ನಗದು ಬಹುಮಾನ ಗಳಿಸಿದರು.

ಹಾವೇರಿ: ಜಿಲ್ಲಾ ಚೆಸ್ ಅಸೋಸಿಯೇಷನ್ ಆಶ್ರಯದಲ್ಲಿ ನಗರದ ವಾಲ್ಮೀಕಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸರ್ಜಿ ರೇಣುಕಾ ಆಲ್‌ ಇಂಡಿಯಾ ಫಿಡೆ ರ್‍ಯಾಪಿಡ್ ರೇಟಿಂಗ್ ಚೆಸ್ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಚಿರಂತ್ ಎಂ.ಡಿ. ಪ್ರಥಮ ಸ್ಥಾನ ಪಡೆದು ₹15,001 ನಗದು ಬಹುಮಾನ ಗಳಿಸಿದರು.

ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯ ಹಾಗೂ ನೇಪಾಳದ 200ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. ರೇಣುಕಾ ಸರ್ಜಿ ಆಸ್ಪತ್ರೆಯ ಡಾ. ಮಧು ಕೆ.ಆರ್. ಅವರು ಪಂದ್ಯಾವಳಿಗೆ ಚಾಲನೆ ನೀಡಿದರು.

ಪಂದ್ಯಾವಳಿಯಲ್ಲಿ ನೇಪಾಳದ ಥಾಪಾ ಕೃಷ್ಣ ದ್ವಿತೀಯ ಸ್ಥಾನ ಪಡೆದು ₹10,001 ಹಾಗೂ ಉತ್ತರ ಕನ್ನಡದ ಚಿನ್ಮಯ್ ವಿಷ್ಣು ಭಟ್ ತೃತೀಯ ಸ್ಥಾನ ಪಡೆದು ₹7,501 ನಗದು ಬಹುಮಾನ ತಮ್ಮದಾಗಿಸಿಕೊಂಡರು. ಪ್ರಥಮ ಸ್ಥಾನ ಪಡೆದ ಚಿರಂತ್ ಮತ್ತು ದ್ವಿತೀಯ ಸ್ಥಾನ ಪಡೆದ ಥಾಪಾ ಕೃಷ್ಣ ತಲಾ 8 ಅಂಕ ಗಳಿಸಿದ್ದರೆ, ಚಿನ್ಮಯ್ ವಿಷ್ಣು ಭಟ್ 7.5 ಅಂಕ ಗಳಿಸಿ ಮೂರನೇ ಸ್ಥಾನ ಪಡೆದರು.

ಶಿವಮೊಗ್ಗದ ಸಮರ್ಥ್ ಜೆ. ರಾವ್ ನಾಲ್ಕನೇ ಸ್ಥಾನ ಪಡೆದು ₹5,001 ಬಹುಮಾನ ಗಳಿಸಿದರು. ಇದಲ್ಲದೇ ವಿವಿಧ ವಿಭಾಗದಲ್ಲಿ ಕೂಡ ಪ್ರಶಸ್ತಿ ಮತ್ತು ಬಹುಮಾನ ನೀಡಲಾಯಿತು. ಪಂದ್ಯಾವಳಿಯು ಅಖಿಲ ಭಾರತ ಚೆಸ್ ಒಕ್ಕೂಟ (ಎಐಸಿಎಫ್) ಹಾಗೂ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಮಾನ್ಯತೆಯೊಂದಿಗೆ ನಡೆದಿದ್ದು, ವಿಜೇತರಿಗೆ ವಿವಿಧ ವಿಭಾಗಗಳಲ್ಲಿ ನಗದು ಬಹುಮಾನ ವಿತರಿಸಲಾಯಿತು. ಅಂತಾರಾಷ್ಟ್ರೀಯ ಚೆಸ್‌ ಆರ್ಬಿಟರ್‌ ಮಂಜುನಾಥ ಅವರು ಪಂದ್ಯಾವಳಿ ನಡೆಸಿಕೊಟ್ಟರು. ಚೆಸ್ ಮಾಸ್ಟರ್‌ ಕೃಷ್ಣ ಸಿಂಧೆ, ವಿಜಯ ಹುಂಬಿ, ಮನು ಎನ್‌ಸಿ, ಸಂತೋಷ, ಶಶಿಧರ ಇತರರು ಇದ್ದರು.