ಶಿವಾನಂದ ಗೊಂಬಿ
ಕಾಂಗ್ರೆಸ್ ಬೆಂಗಳೂರಲ್ಲಿ ಇತ್ತೀಚಿಗೆ ನಡೆಸಿದ ಪ್ರತಿಭಟನೆಯಿಂದಾಗಿ ಕೇಳಿ ಬರುತ್ತಿರುವ ಕೂಗು.
ಇದಕ್ಕೆ ಕಾರಣವೂ ಇಲ್ಲದಿಲ್ಲ. ಯಾವುದೇ ಪಕ್ಷದ ಅಧಿಕಾರವಿರಲಿ. ಯಾವುದೇ ಚುನಾವಣೆ ಇದ್ದರೂ ಆಗ ಕೇಳಿ ಬರುವುದು ಚುನಾವಣಾ ಅಕ್ರಮ. ಅದರಲ್ಲೂ ನಕಲಿ ಮತದಾರರ ಹಾವಳಿ. ಜತೆಗೆ ಒಬ್ಬನೇ ವ್ಯಕ್ತಿ. ಎರಡ್ಮೂರು ಕಡೆಗಳಲ್ಲಿ ಹೆಸರು ಹೊಂದಿರುವುದು. ಚುನಾವಣಾ ಆಯೋಗವೂ ನಕಲಿ ಮತದಾರರು, ಡಬ್ಲಿಂಗ್, ತಿದ್ದುಪಡಿಗಾಗಿ ಆಯೋಗ ವಿಶೇಷ ಅಭಿಯಾನ ನಡೆಸುತ್ತದೆ. ಜತೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೂ ವಿಶೇಷ ಅಭಿಯಾನ ನಡೆಯುತ್ತಿರುತ್ತದೆ.ಆದರೂ ಕಳೆದ ಸಲವಂತೂ ಡಬ್ಲಿಂಗ್ ಆದವರು (ಎರಡು ಕಡೆಗಳಲ್ಲಿ ಹೆಸರಿರುವುದು), ಮೃತಪಟ್ಟವರ ಹೆಸರಗಳನ್ನು ತೆಗೆದುಹಾಕಿತ್ತು. ಆಗ ಬರೋಬ್ಬರಿ ಧಾರವಾಡ ಜಿಲ್ಲೆಯಲ್ಲೇ 1.36 ಲಕ್ಷ ಹೆಸರುಗಳನ್ನು ಡಿಲಿಟ್ ಮಾಡಿತ್ತು. ಆಗಲೂ ಆಧಾರ ಕಾರ್ಡ್‌ನೊಂದಿಗೆ ಗುರುತಿನ ಚೀಟಿ ಲಿಂಕ್ ಮಾಡಿಬಿಡಿ. ಆಗ ಸಮಸ್ಯೆಯೇ ಇರಲ್ಲ ಎಂಬ ವಾದ ಕೇಳಿ ಬರುತ್ತಿದೆ.
ಈ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಹೀಗಾಗಿ ಆರೋಪ ಮಾಡುತ್ತಿದೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಆಗ ಬಿಜೆಪಿ ಆರೋಪ ಮಾಡುತ್ತದೆ ಅಷ್ಟೇ. ಎಲ್ಲ ರಾಜಕೀಯ ಪಕ್ಷಗಳು ಇಷ್ಟೇ ಎಂದು ಪ್ರಜ್ಞಾವಂತರ ಟೀಕಿಸುತ್ತಾರೆ.
ಏನಾದರೂ ಲಿಂಕ್ ಆಗಿಲ್ಲವೆಂದರೆ ಅದು ಚುನಾವಣಾ ಗುರುತಿನ ಚೀಟಿ ಮಾತ್ರ. ಆದಕಾರಣ ಇದಕ್ಕೂ ಲಿಂಕ್ ಮಾಡಬೇಕು. ಇದಕ್ಕೆ ಲಿಂಕ್ ಮಾಡುತ್ತಿಲ್ಲವೇಕೆ? ಎಂಬ ಪ್ರಶ್ನೆ ಪ್ರಜ್ಞಾವಂತರದ್ದು.
ಯಾವುದೇ ಕಾರಣಕ್ಕೂ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸಲು ಸಾಧ್ಯವಾಗಲ್ಲ. ಯಾವುದೇ ಪಕ್ಷದ ವಿರುದ್ಧವೂ ಆರೋಪಿಸಲು ಅವಕಾಶವೂ ಇರುವುದಿಲ್ಲ. ಈ ನಿಟ್ಟಿನಲ್ಲಿ ಆಯೋಗವೇ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.
ಈಗ ಪ್ರತಿಯೊಂದು ಸೌಲಭ್ಯಕ್ಕೂ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವೆನಿಸಿದೆ. ಆದರೆ, ಈ ವರೆಗೂ ಚುನಾವಣಾ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ಗೋಜಿಗೆ ಮಾತ್ರ ಹೋಗಿಲ್ಲ. ಇನ್ನು ಮೇಲಾದರೂ ಚುನಾವಣಾ ಅಕ್ರಮ ತಡೆಯಲು ಚುನಾವಣಾ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಮೇಶ ಜಮಖಂಡಿ ಹೇಳಿದರು.