ಉಡುಪಿ: ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಇದರ ಉಡುಪಿ ಜಿಲ್ಲೆ (275 ಎಸ್.) ಯ ಪ್ರಥಮ ಜಿಲ್ಲಾ ಸಮ್ಮೇಳನ ‘ವಿಜಯಲಕ್ಷ್ಮಿ’ ನಗರದ ಪುರಭವನದಲ್ಲಿ ನಡೆಯಿತು. ಜಿಲ್ಲಾ ಗವರ್ನರ್ ಅಲೈ ಸುನಿಲ್ ಸಾಲ್ಯಾನ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಪ್ರಥಮ ಮಹಿಳೆ ಅಲೈ ಡಾ. ಅನುಪಮಾ ಸುನಿಲ್ ಉಪಸ್ಥಿತರಿದ್ದರು.ಸಂಸ್ಥೆಯ ಅಂತಾರಾಷ್ಟ್ರೀಯ ನಿರ್ದೇಶಕ ಅಲೈ ಡಾ. ನಾಗರಾಜ ಭಾಯರಿ ಸಮ್ಮೇಳನವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಂತಾರಾಷ್ಟ್ರೀಯ ಸಮಿತಿಯ ಸದಸ್ಯ ಅಲೈ. ಮುನಿಯಪ್ಪ ಮುಖ್ಯ ಅತಿಥಿಗಳಾಗಿದ್ದರು. ಸಮ್ಮೇಳನದಲ್ಲಿ ಮಾಜಿ ಜಿಲ್ಲಾ ಗವರ್ನರ್ ಮತ್ತು ಅಂತಾರಾಷ್ಟ್ರೀಯ ಸಮಿತಿಯ ಮುಖ್ಯಸ್ಥ ಅಲೈ ಶ್ರೀಧರ್ ಡಿ. ಶೇಣವ ಮತ್ತು ಅಲಯನ್ಸ್ ಗೌರವ ಸಲಹೆಗಾರ ಡಾ. ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.
ಸಮ್ಮೇಳನ ಸಮಿತಿ ಅಧ್ಯಕ್ಷ ಅಲೈ ಗೋಪಾಲ ಸಿ. ಬಂಗೇರ ಸ್ವಾಗತಿಸಿ, ಅಲೈ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ ಹಾಗೂ ಅಲೈ ಪ್ರತಾಪ್ ಕಾರ್‍ಯಕ್ರಮ ನಿರೂಪಿಸಿದರು.