ಲಯನ್ಸ್ ಸಂಸ್ಥೆ ಆರೋಗ್ಯ, ಶಿಕ್ಷಣ, ವಿಕಲಚೇತನರ ಅಭಿವೃದ್ಧಿಗಾಗಿ ಕೆಲಸ: ಟಿ.ನಾರಾಯಣಸ್ವಾಮಿ

KannadaprabhaNewsNetwork |  
Published : Aug 27, 2024, 01:30 AM IST
26ಕೆಎಂಎನ್ ಡಿ15 | Kannada Prabha

ಸಾರಾಂಶ

ವಿಶ್ವದ 208 ದೇಶಗಳಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆ ಸೇವೆಯಲ್ಲಿ ನಾಯಕತ್ವದ ಗುಣವನ್ನು ಕಲಿಸುತ್ತದೆ. ಸದಸ್ಯರು ತಾವು ಸಂಪಾದಿಸಿದ ಗಳಿಕೆಯಲ್ಲಿ ಅಲ್ಪ ಪ್ರಮಾಣದ ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸುವ ಮೂಲಕ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡುತ್ತಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ವಿಶ್ವದಲ್ಲೇ ಆರೋಗ್ಯ, ಶಿಕ್ಷಣ, ಮಹಿಳಾ ಸ್ವಾವಲಂಬನೆ ಮತ್ತು ವಿಕಲಚೇತನರ ಅಭಿವೃದ್ಧಿ ದೃಷ್ಟಿಕೋನದ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದು ಸಂಸ್ಥೆಯ ಟಿ.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಮದ್ದೂರು ಕ್ರೀಡಾ ಬಳಗದ ಸಭಾಂಗಣದಲ್ಲಿ ಕದಂಬ ಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಆರ್. ಕೆಂಗಲ್ ಗೌಡ, ಕಾರ್ಯದರ್ಶಿ ವಕೀಲ ಎಚ್.ಸುರೇಶ್, ಖಜಾಂಚಿ ಎಸ್.ಬಿ.ನಾಗರಾಜು ಮತ್ತು ತಂಡದವರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.

ವಿಶ್ವದ 208 ದೇಶಗಳಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆ ಸೇವೆಯಲ್ಲಿ ನಾಯಕತ್ವದ ಗುಣವನ್ನು ಕಲಿಸುತ್ತದೆ. ಸದಸ್ಯರು ತಾವು ಸಂಪಾದಿಸಿದ ಗಳಿಕೆಯಲ್ಲಿ ಅಲ್ಪ ಪ್ರಮಾಣದ ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸುವ ಮೂಲಕ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡುತ್ತಿದೆ ಎಂದರು.

ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸಮಾಜ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರ ನಲಿವು ನೋವುಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಆಗ ಮಾತ್ರ ಮನುಷ್ಯನ ಜೀವನ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಂಸ್ಥೆ ಮಾಜಿ ರಾಜ್ಯಪಾಲ ದೇವಿ ಪ್ರಸಾದ್ ಮಾತನಾಡಿ, ಸದಸ್ಯರು ತಮ್ಮ ಸಂಸ್ಥೆ ವ್ಯಾಪ್ತಿಯಲ್ಲಿ ದೀನದಲಿತರು, ದುರ್ಬಲ ವರ್ಗದವರನ್ನು ಗುರುತಿಸಿ ಅವರಿಗೆ ಆರೋಗ್ಯ ಸೇವೆ ಮತ್ತು ಮಕ್ಕಳ ಶೈಕ್ಷಣಿಕ ಚಟುವಟಿಕೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಿದರೆ ಸಂಸ್ಥೆಗೆ ಒಳ್ಳೆಯ ಹೆಸರಿನ ಜೊತೆಗೆ ತಾವು ಸಮಾಜದಲ್ಲಿ ಗೌರವ ಕಾಣಲು ಸಾಧ್ಯವಾಗುತ್ತದೆ ಎಂದರು.ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆಂಗಲ್ ಗೌಡ ಮಾತನಾಡಿ, ತಾವು ವೃತ್ತಿಯಲ್ಲಿ ಗುತ್ತಿಗೆದಾರನಾದರೂ ಸಹ ಸಮಾಜ ಸೇವೆ ಮಾಡಬೇಕೆಂಬ ಹಂಬಲದಿಂದ ಲಯನ್ಸ್ ಸಂಸ್ಥೆಗೆ ಸೇರ್ಪಡೆಗೊಂಡು ಸದಸ್ಯರ ವಿಶ್ವಾಸದೊಂದಿಗೆ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಕೆ.ಹೊನ್ನಲಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ವೈದ್ಯ ಡಾ.ಸುನಿಲ್ ಕುಮಾರ್, ರಾಮನಗರ ಲೋಕೋಪಯೋಗಿ ಇಲಾಖೆ ವಿಶೇಷ ವಿಭಾಗದ ಇಇ ಎಚ್.ಎಂ.ಮಹದೇವಪ್ಪ, ನಿವೃತ್ತ ಶಿಕ್ಷಕ ಟಿ.ಆರ್.ಲೋಕೇಶ್ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆ ಜಿಲ್ಲಾ ರಾಯಬಾರಿ ವಿ.ಹರ್ಷ. ಪಿಆರ್‌ಒ ವಿ.ಕೆ.ಜಗದೀಶ್, ಪ್ರಾಂತೀಯ ಅಧ್ಯಕ್ಷ ಎಸ್.ಪಿ.ಆದರ್ಶ, ಕೆ. ಎಸ್.ಸುನಿಲ್ ಕುಮಾರ್, ಸುರೇಶ್ ಪಾಲ್ಗೊಂಡಿದ್ದರು.

PREV

Recommended Stories

ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ
ಕೇಂದ್ರದ ಎನ್‌ಸಿಡಿಸಿ ಬಳಕೆಗೆ ಸಿಎಂ ಮೊಂಡುತನ