₹1.50 ಲಕ್ಷ ಮೌಲ್ಯದ ಮದ್ಯ ಜಪ್ತಿ

KannadaprabhaNewsNetwork |  
Published : Apr 08, 2024, 01:03 AM IST
ನೀತಿ ಸಂಹಿತೆ ಉಲ್ಲಂಘನೆ : ಅಬಕಾರಿ ಇಲಾಖೆ ದಾಳಿ1.50 ಲಕ್ಷ ರೂ.ಗಳ ಮೌಲ್ಯದ ಮದ್ಯ ಜಪ್ತಿ | Kannada Prabha

ಸಾರಾಂಶ

ಹುನಗುಂದ ವಲಯ ವ್ಯಾಪ್ತಿಯಲ್ಲಿ ಸೂಳೇಭಾವಿ ಗ್ರಾಮದಿಂದ 4 ಕಿ.ಮೀ ದೂರದ ತೋಟದ ಮನೆ ಮೇಲೆ ದಾಳಿ ನಡೆಸಿ ಅಕ್ರಮ ಕಳ್ಳಬಟ್ಟಿ ಸರಾಯಿ ವಶಕ್ಕೆ ಪಡೆಯಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಲೋಕಸಭಾ ಚುನಾವಣೆ-24ರ ನೀತಿ ಸಂಹಿತೆ ಉಲ್ಲಂಘನೆಯಡಿ ಜಿಲ್ಲೆಯ ಮುಧೋಳ ವಲಯ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ಮನೆಯೊಂದರ ಮೇಲೆ ಅಬಕಾರಿ ಇಲಾಖೆ ದಾಳಿ ಮಾಡಿ ಒಟ್ಟು ₹1.50 ಲಕ್ಷ ಮೌಲ್ಯದ ಅಕ್ರಮ ಮದ್ಯ ಜಪ್ತ ಮಾಡಿದೆ.

ಮುಧೋಳ ವ್ಯಾಪ್ತಿಯ ಬೆಳಗಲಿ ಸರ್ಕಲ್‍ನಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಒಟ್ಟು ₹1.50 ಲಕ್ಷ ಮೌಲ್ಯದ ಡಿಕೆ ಮತ್ತು ಓರಿಜನಲ್ ಚಾಯ್ಸ್ ವಿಸ್ಕಿಯ 3 ರಟ್ಟಿನ ಪೆಟ್ಟಿಗೆಗಳಲ್ಲಿದ್ದ 1080 ಟೆಟ್ರಾ ಪ್ಯಾಕೆಟ್ ಎರಡು ಸೇರಿ 259.200 ಲೀಟರ್ ಮದ್ಯ ಮತ್ತು 15,600 ಪವರ್ ಕೂಲ್ ಬಿಯರ್ ಜಪ್ತಿ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ಲಕ್ಷ್ಮಣ ಬಸಪ್ಪ ಚನ್ನಾಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

14 ಲೀ.ಕಳ್ಳಬಟ್ಟಿ ಜಪ್ತಿ: ಹುನಗುಂದ ವಲಯ ವ್ಯಾಪ್ತಿಯಲ್ಲಿ ಸೂಳೇಭಾವಿ ಗ್ರಾಮದಿಂದ 4 ಕಿ.ಮೀ ದೂರದ ತೋಟದ ಮನೆ ಮೇಲೆ ದಾಳಿ ನಡೆಸಿ ಅಕ್ರಮ ಕಳ್ಳಬಟ್ಟಿ ಸರಾಯಿ ವಶಕ್ಕೆ ಪಡೆಯಲಾಗಿದೆ. 7 ಬಾಟಲ್‌ಗಳಲ್ಲಿ ತಲಾ 2 ಲೀ. ಸಂಗ್ರಹಿಸಿಡಲಾಗಿತ್ತು. ಆರೋಪಿ ಕೃಷ್ಣಪ್ಪ ಹುವಪ್ಪ ಲಮಾಣಿ ವಿರುದ್ಧ ಪ್ರಕರಣ ದಾಖಲಿಸಿ ಅಬಕಾರಿ ಉಪ ನಿರೀಕ್ಷಕ ಜೆ.ಬಿ.ಭಜಂತ್ರಿ ತನಿಖೆ ಕೈಗೊಂಡಿದ್ದಾರೆ.

8.64 ಲೀ. ವಿಸ್ಕಿ ವಶಕ್ಕೆ: ಬಾದಾಮಿ ಕ್ಷೇತ್ರದ ಕುಳಗೇರಿ ಖಾನಾಪೂರ ರಸ್ತೆಯಲ್ಲಿ ಅಬಕಾರಿ ಇಲಾಖೆ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್‌ನಲ್ಲಿ 8.64 ಲೀ. ಓರಿಜಿನಲ್ ಚಾಯ್ಸ್ ವಿಸ್ಕಿ ಮದ್ಯ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ₹53,841 ಗಳದ್ದಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

--

ಬಾಕ್ಸ್ . . .

ಅಪರಾಧಿಗಳಿಗೆ ಶಿಕ್ಷೆ

ಬಾದಾಮಿ ವಲಯ ವ್ಯಾಪ್ತಿಯಲ್ಲಿ ಜಾಲಿಹಾಳ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಕೆ ಮತ್ತು ಮಾರಾಟ ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳಾದ ಮಂಜುನಾಥ ಮಾದರ, ಕಳಕಪ್ಪ ಮಾದರ, ರಾಮಪ್ಪ ಮಾದರ, ದೇವಪ್ಪ ಮಾದರ ಇವರ ಮೇಲೆ ಅಬಕಾರಿ ನಿರೀಕ್ಷಕ ಮಂಜುನಾಥ ಹಗಳಗಾರ ಅಂತಿಮ ದೋಷಾರೋಪಣಾ ಪಟ್ಟಿಯನ್ನು ಬಾದಾಮಿ ಜೆ.ಎಂ.ಎಪ್.ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯ ಇಲಾಖೆಯ ವಾದ ಆಲಿಸಿ ಪ್ರಕರಣದಲ್ಲಿ ಬಂಧಿಸಲ್ಪಟ್ಟ 4 ಜನ ಆರೋಪಿಗಳಿಗೆ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡವಿಧಿಸಿ ಆದೇಶ ಹೊರಡಿಸಿದೆ. (ಪೋಟೊ7ಬಿಕೆಟಿ5, ಲೋಕಸಭಾ ಚುನಾವಣೆ-24ರ ನೀತಿ ಸಂಹಿತೆ ಉಲ್ಲಂಘನೆಯಡಿ ಜಿಲ್ಲೆಯ ಮುಧೋಳ ವಲಯ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ಮನೆಯೊಂದರ ಮೇಲೆ ಶನಿವಾರ ಅಬಕಾರಿ ಇಲಾಖೆ ದಾಳಿ ಮಾಡಿ ಒಟ್ಟು 1.50 ಲಕ್ಷ ರೂ.ಗಳ ಮೌಲ್ಯದ ಮದ್ಯವನ್ನು ಜಪ್ತ ಮಾಡಲಾಗಿದೆ.)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ