ನರಗುಂದ: ಸಮಾಜದಲ್ಲಿ ಜೀವಿಸುವ ಪ್ರತಿಯೊಂದು ಜೀವಿ ಪುರಾಣ ಪ್ರವಚನ ಕೇಳುವುದರಿಂದ ಮನಸ್ಸು ಶಾಂತವಾಗಿರುತ್ತದೆ. ನಾವು ಮಾಡುವ ಆ ದಿನದ ಕೆಲಸಗಳಿಗೆ ಉಲ್ಲಾಸ ನೀಡುತ್ತದೆ ಎಂದು ಕವಿ ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.
ನಮ್ಮ ಸಮಾಜದಲ್ಲಿ ಪುರಾಣ ಪ್ರವಚನ ಮಾಡುವ ಉದ್ದೇಶ ಇಷ್ಟೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿ ಪ್ರವಚನ ಕೇಳಿ ದುಶ್ಚಟಗಳನ್ನು ಬಿಟ್ಟು ಒಳ್ಳೆಯದನ್ನು ಪ್ರವಚನದಿಂದ ತಿಳಿಯಬೇಕು. ಇಂದಿನ ಯುವಕರು ಆಧ್ಯಾತ್ಮದ ಕಡೆ ಗಮನ ನೀಡಿ ಬಸವಣ್ಣವರು ಹಾಗೂ ಶರಣರ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಈ ಸಮಾಜ ಸುಧಾರಣೆಗೆ ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡ್ಡಮನಿ, ನಾಗನಗೌಡ ತಿಮ್ಮನಗೌಡ್ರ, ಶೆಲ್ಲಿಕೇರಿ, ದ್ಯಾಮಣ್ಣ ಕಾಡಪ್ಪನವರ, ಲಾಲಸಾಬ ಅರಗಂಜಿ, ಆರ್.ಐ. ನದಾಫ, ಹನಮಂತ ಕಾಡಪ್ಪನವರ, ಪ್ರಾಚಾರ್ಯ ಬಿ.ಆರ್. ಸಾಲಿಮಠ, ಇದ್ದರು.