ಸಾಕ್ಷರತೆ. ಕಂಪ್ಯೂಟೇಶನ್ ಕೌಶಲ್ಯಗಳು ಜೀವನಕ್ಕೆ ದಾರಿದೀಪ: ರವಿ ದಳವಾಯಿ

KannadaprabhaNewsNetwork |  
Published : Jun 07, 2026, 02:00 AM IST
ತರೀಕೆರೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ  ಉದ್ಯೋಗ ಮತ್ತು ಶಿಶಿಕ್ಷು ಮೇಳ -2026 ಉದ್ಗಾಟನಾ ಸಮಾರಂಭ | Kannada Prabha

ಸಾರಾಂಶ

ತರೀಕೆರೆಅನೇಕ ವೃತ್ತಿಗಳಿಗೆ ಅಗತ್ಯವಿರುವ ಮೂಲಭೂತ ಸಾಕ್ಷರತೆ, ಓದುವಿಕೆ ಮತ್ತು ಕಂಪ್ಯೂಟೇಶನ್ ಕೌಶಲ್ಯಗಳು ಜೀವನಕ್ಕೆ ದಾರಿದೀಪವಾಗಿದೆ ಎಂದು ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಬಾರಿ ಪ್ರಾಂಶುಪಾಲ ರವಿ ದಳವಾಯಿ ಹೇಳಿದ್ದಾರೆ.

ತರೀಕೆರೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉದ್ಯೋಗ ಮತ್ತು ಶಿಶಿಕ್ಷು ಮೇಳ -2026 ಉದ್ಗಾಟನಾ ಸಮಾರಂಭ

ಕನ್ನಡಪ್ರಭ ವಾರ್ತೆ ತರೀಕೆರೆ

ಅನೇಕ ವೃತ್ತಿಗಳಿಗೆ ಅಗತ್ಯವಿರುವ ಮೂಲಭೂತ ಸಾಕ್ಷರತೆ, ಓದುವಿಕೆ ಮತ್ತು ಕಂಪ್ಯೂಟೇಶನ್ ಕೌಶಲ್ಯಗಳು ಜೀವನಕ್ಕೆ ದಾರಿದೀಪವಾಗಿದೆ ಎಂದು ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಬಾರಿ ಪ್ರಾಂಶುಪಾಲ ರವಿ ದಳವಾಯಿ ಹೇಳಿದ್ದಾರೆ.ಶುಕ್ರವಾರ, ಬೆಂಗಳೂರು,ಕೈಗಾರಿಕೆ ಮತ್ತು ಉದ್ಯೋಗ ಇಲಾಖೆ, ತರೀಕೆರೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಯಿಂದ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಉದ್ಯೋಗ ಮತ್ತು ಶಿಶಿಕ್ಷು ಮೇಳ -2026 ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೌಶಲ್ಯ ಮತ್ತು ತರಬೇತಿ ಗುರಿಗಳನ್ನು ಗುರುತಿಸುವುದು. ಜ್ಞಾನದ ಅಂತರ ತುಂಬಲು ಉದ್ದೇಶಿತ ಶಿಕ್ಷಣ ಪಡೆಯುವುದು, ತಾಂತ್ರಿಕ ತಂತ್ರಜ್ಞಾನದ ಮೂಲಭೂತ ತತ್ವ ಕಂಡು ಹಿಡಿಯುವುದು ಹಾಗೂ ಪಾಂಡಿತ್ಯ ಖಚಿತಪಡಿಸಿಕೊಳ್ಳಲು ಇಂತಹ ಪ್ರಾಯೋಗಿಕ ತರಗತಿ ಬಳಸುವುದು ಒಳಗೊಂಡಿದೆ ಎಂದು ಹೇಳಿದರು.ನಿಮ್ಮ ಕೌಶಲ್ಯ ಮತ್ತು ಗುರಿಗಳನ್ನು ಗುರುತಿಸಿ ಯಾವುದೇ ತರಬೇತಿ ಪ್ರಾರಂಭಿಸುವ ಮೊದಲು, ನಿಮ್ಮ ಗುರಿ, ಅಗತ್ಯ ವಿರುವ ಸಾಮರ್ಥ್ಯವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿ, ಇದು ನಿಮ್ಮ ಅಭಿವೃದ್ಧಿಯನ್ನು ಕ್ರೀಯಾಶೀಲ ಉದ್ಯಮ-ಸಂಬಂದಿತ ಫಲಿತಾಂಶಗಳ ಮೇಲೆ ಕೇಂದ್ರಿಕರಿಸುತ್ತದೆ. ತಾಂತ್ರಿಕ ಕೌಶಲ್ಯ, ನಿರ್ದಿಷ್ಟ ಸಾಫ್ಟ್ ವೇರ್ ಯಂತ್ರೋಪಕರಣ ಅಥವಾ ವಹಿವಾಟು ಕಾರ್ಯಗತಗೊಳಿಸಲು ಕಠಿಣ ಕೌಶಲ್ಯ ಬೇಕಾಗುತ್ತದೆ. ಪ್ರಾವಿಣ್ಯತೆಗೆ ಖಂಡಿತ ಸ್ಥಾನ ಮತ್ತು ಬೇಡಿಕೆ ಇದೆ ಎಂದು ಹೇಳಿದರು.ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿದ್ದಪ್ಪ ಟಕ್ಕಳಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೋಷಕರು ಮಕ್ಕಳ ಮನಸ್ಥಿತಿ ಅರ್ಥಮಾಡಿಕೊಳ್ಳಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಕೊಡಿಸಬೇಕು, ಮಕ್ಕಳಿಗೆ ತಮ್ಮ ವಿದ್ಯಾಭ್ಯಾಸವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡಬೇಕು. ವಿದ್ಯಾರ್ಥಿಗಳ ಕೌಶಲ್ಯ ಏನು ಎಂದು ಯೋಚಿಸಬೇಕು. ವಿದ್ಯಾರ್ಥಿಗಳಿಗೆ ಅತ್ಮ ವಿಶ್ವಾಸ ಅಗತ್ಯ, ಪ್ರಯತ್ನಕ್ಕೆ ಸಮನಾದ ಬೇರೆ ಪದ ಇಲ್ಲ, ವಿದ್ಯಾರ್ಥಿಗಳು ಹೆಜ್ಜೆ ಗುರುತು ಮೂಡಿಸಬೇಕು. ಇತ್ತೀಚೆಗೆ ವೃತ್ತಿ ಕೌಶಲ್ಯ ಹೆಚ್ಚು ಬೆಳೆಯುತ್ತಿದೆ ಎಂದು ಹೇಳಿದರು.ಶಿವಮೊಗ್ಗ ರಾಜ್ ದೀಪ್ ಇಂಡಸ್ಟ್ರೀಸ್ ಮ್ಯಾನೇಜರ್ ಪಿ.ಪುಷ್ಪ ಮಾತನಾಡಿ ನಮ್ಮ ಗುರಿ ಏನು ಎಂಬುದನ್ನು ಮೊದಲು ಪರಿಶೀಲಿಸಬೇಕು. ಈ ಕುರಿತು ಪೋಷಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು, ಶಿಕ್ಷಣ ಬಹಳ ಮುಖ್ಯ, ತಾಂತ್ರಿಕವಾಗಿ ಬೆಳೆಯಬೇಕು, ನಿಮ್ಮ ಊರಿನಲ್ಲೇ ಕೈಗಾರಿಕೆಯನ್ನು ಹುಡುಕಿ, ಸಂಬಳದ ಕಡೆ ನೋಡಬೇಡಿ, ಅನುಭವವನ್ನು ಪಡೆದು ಕೊಳ್ಳಬೇಕು, ಉದ್ಯೋಗ ಬಹಳ ಮುಖ್ಯ ಎಂದು ಹೇಳಿದರು.ಸಂಪನ್ಮೂಲ ವ್ಯಕ್ತಿಗಳಾದ .ಅಂಬಿಕಾ, ಸುರೇಶ್ ಕುಮಾರ್, ಅಶ್ವಥ್, ಕಿರಿಯ ತರಬೇತಿ ಅಧಿಕಾರಿ ಪ್ರಸನ್ನಕುಮಾರ್ , ನವೀನ್ ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ವೀರೇಶ್, ಮನೋಹರ್.ಕೆ. ಅಭಿಷೇಕ್ , ಶ್ರೀಕುಮಾರ್, ಪ್ರೇಮ್ ಕುಮಾರ್, ಮಂಜುನಾಥ್, ರಿಕ್ಷನ್ ಫರ್ನಾಂಡಿಸ್, ಸೈಯದ್ ಸುಹೇಲ್ ಮತ್ತಿತರರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಸಂದರ್ಶನ ನಡೆಯಿತು.

-

5ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ನಡೆದ ಉದ್ಯೋಗ ಮತ್ತು ಶಿಶಿಕ್ಷು ಮೇಳ -2026 ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಭಾರಿ ಪ್ರಾಂಶುಪಾಲ ರವಿ ದಳವಾಯಿ, ಸ.ಪ.ಪೂ.ಕಾಲೇಜು ಪ್ರಾಂಶುಪಾಲ ಸಿದ್ದಪ್ಪ ಟಕ್ಕಳಿಕೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಶಾಲೆಗಳಲ್ಲಿ ಡೊನೇಶನ್ ಹಾವಳಿ ತಡೆಗೆ ಒತ್ತಾಯ
ಉದ್ಯಮಿಗಳಲ್ಲಿ ಆತ್ಮಸ್ಥೈರ್ಯ ತುಂಬಿದ ಸ್ಟಾರ್ಟಪ್‌ ಕಾನ್‌ಕ್ಲೇವ್‌