ಕನ್ನಡಪ್ರಭ ವಾರ್ತೆ ಕುಣಿಗಲ್
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಪ್ಪಣ್ಣ ಮಾತನಾಡಿ ಕನ್ನಡ ಸಾಹಿತ್ಯ ಅಕಾಡೆಮಿ ಸಂತೆಯಲ್ಲಿ ಕನ್ನಡ ಸಾಹಿತ್ಯ ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಅಭಿನಂದನಾ ವಿಚಾರ ಆಗಿದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಗ್ರಾಮೀಣ ಪ್ರತಿಭೆಗಳು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅಕ್ಕ ಮತ್ತು ನಾವಿಕ ಸಂಸ್ಥೆ 500ಕ್ಕಿಂತ ಹೆಚ್ಚು ಜನ ಗ್ರಾಮೀಣ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡಲಾಗಿದೆ ಸರ್ಕಾರವು ಕೂಡ ಹೆಚ್ಚು ಹೆಚ್ಚು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡಿ ಹಳ್ಳಿಯ ಮತ್ತು ದಲಿತ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಣಿಗಲ್ ಶಾಸಕ ಡಾ. ರಂಗನಾಥ್ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಸರ್ಕಾರ ಎಲ್ಲಾ ರೀತಿಯ ಸಹಕಾರಗಳನ್ನು ನೀಡಲಿದೆ. ಹಲವಾರು ಕಲಾವಿದರು ಕಲೆಗಳ ಬೆಳೆಸುವ ಪ್ರಯತ್ನದಲ್ಲಿ ಸಾಹಿತ್ಯಗಳು ಸಾಹಿತ್ಯವನ್ನು ಬೆಳೆಸುವ ಪ್ರಯತ್ನದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು. ಸಂತೆಯ ಬೀದಿಗಳಲ್ಲಿ ಕುಣಿಗಲ್ ರಾಮಚಂದ್ರ ಸಾಹಿತ್ಯ ಭರಿತವಾದ ಹಲವಾರು ಜಾನಪದ ಮತ್ತು ಸಾಹಿತ್ಯದ ಹಾಡುಗಳನ್ನು ಹಾಡುವ ಮುಖಾಂತರ ಸಂತೆಗೆ ಬಂದಿದ್ದ ವ್ಯಾಪಾರಸ್ಥರು ರೈತರು ಸೇರಿದಂತೆ ಸಾರ್ವಜನಿಕರನ್ನು ರಂಜಿಸಿದರು. ಕಾರ್ಯಕ್ರಮಕ್ಕೆ ಪ್ರಾರಂಭದ ಮುನ್ನ ಬೀರಗಾನಹಳ್ಳಿ ರೂಪ ರಿಂದ ಸಂತೆಯ ಬೀದಿಯಲ್ಲಿ ಅರೆವಾದ್ಯದ ಮುಖಾಂತರ ಹಲವಾರು ಗಣ್ಯರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸುಮಾ ಸತೀಶ್ ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾಧ್ಯಕ್ಷ ಕೆ ಎಸ್ ಸಿದ್ದಲಿಂಗಪ್ಪ ಎಡೆಯೂರು ಹನುಮಂತಯ್ಯ ಕುಣಿಗಲ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕಪನೀಪಾಳ್ಯ ರಮೇಶ್ ಸೇರಿದಂತೆ ಹಲವಾರು ಸಾಹಿತಿಗಳು ಇದ್ದರು.