ಪುಟ್ಟ ಬಾಲಕಿಯ ಹೆಸರು ಕರ್ನಾಟಕ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲು

KannadaprabhaNewsNetwork |  
Published : Jun 13, 2025, 08:05 AM IST
12ಕೆಎಂಎನ್ ಡಿ17 | Kannada Prabha

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾಮದ ಕೆ.ಎನ್.ಅನಿಲ್‌ಕುಮಾರ್ ಮತ್ತು ಬಿ.ಎಸ್. ಸೌಮ್ಯ ದಂಪತಿ ಪುತ್ರಿ ಎರಡು ವರ್ಷ, ಐದು ತಿಂಗಳ ಮಾನ್ವಿತಾ ಎ.ಎಂಬ ಪ್ರತಿಭಾವಂತ ಬಾಲಕಿ ಮಕ್ಕಳ ವಿಭಾಗದಲ್ಲಿ ಹಲವು ವಿಷಯಗಳನ್ನು ತಟ್ಟನೆ ಗುರುತಿಸಿ ಹೇಳುವ ಮೂಲಕ ಹೊಸ ದಾಖಲೆಯನ್ನು ಸ್ಥಾಪಿಸಿದ್ದಾಳೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬಹುಮುಖ ವಿಷಯಗಳ ಅಸಾಧಾರಣ ಬುದ್ಧಿಮತ್ತೆ ಪರಿಗಣಿಸಿ ತಾಲೂಕಿನ ಕಿರಂಗೂರು ಗ್ರಾಮದ ಪುಟ್ಟ ಬಾಲಕಿಯ ಹೆಸರು 2025ರ ಕರ್ನಾಟಕ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಿಸಿ ಗೌರವಿಸಿದೆ.

ತಾಲೂಕಿನ ಕಿರಂಗೂರು ಗ್ರಾಮದ ಕೆ.ಎನ್.ಅನಿಲ್‌ಕುಮಾರ್ ಮತ್ತು ಬಿ.ಎಸ್. ಸೌಮ್ಯ ದಂಪತಿ ಪುತ್ರಿ ಎರಡು ವರ್ಷ, ಐದು ತಿಂಗಳ ಮಾನ್ವಿತಾ ಎ.ಎಂಬ ಪ್ರತಿಭಾವಂತ ಬಾಲಕಿ ಮಕ್ಕಳ ವಿಭಾಗದಲ್ಲಿ ಹಲವು ವಿಷಯಗಳನ್ನು ತಟ್ಟನೆ ಗುರುತಿಸಿ ಹೇಳುವ ಮೂಲಕ ಹೊಸ ದಾಖಲೆಯನ್ನು ಸ್ಥಾಪಿಸಿದ್ದಾಳೆ.

ಈಕೆ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು, ಕರ್ನಾಟಕದ ನದಿಗಳ ಹೆಸರು, ಗ್ರಹಗಳ ಹೆಸರು, ಕರ್ನಾಟಕದ ಜಿಲ್ಲೆಗಳು, ವಾರ ಮತ್ತು ತಿಂಗಳು, ಪ್ರಾಣಿಗಳ ಹೆಸರು, ಪಕ್ಷಿಗಳ ಹೆಸರು, ಬಣ್ಣಗಳ ಹೆಸರು, ಆಕಾರಗಳು, ಕೀಟಗಳ ಹೆಸರು, ಹಣ್ಣುಗಳ ಹೆಸರು, ಸಂಗೀತ ವಾದ್ಯಗಳ ಹೆಸರು, ಪ್ರಾಸಗಳು, ಕ್ರಿಯಾ ಪದಗಳು, ಫೋನಿಕ್ಸ್, ಸ್ವಾತಂತ್ರ್ಯ ಹೋರಾಟಗಾರರ ಹೆಸರು, ಸ್ತೋತ್ರಂ, ಸಾಕು ಪ್ರಾಣಿಗಳು, ಇಂಗ್ಲಿಷ್ ವರ್ಣಮಾಲೆಗಳು, ಬಣ್ಣಗಳು, ಒಗಟು ಹೊಂದಾಣಿಕೆ, ದೇಹದ ಭಾಗಗಳು ಮತ್ತು ಅವರು ದೊಡ್ಡ ಮತ್ತು ಸಣ್ಣ, ಎತ್ತರ ಮತ್ತು ಕುಳ್ಳ, ಇತ್ಯಾದಿ ಪರಿಕಲ್ಪನೆಗಳನ್ನು ಪ್ರದರ್ಶಿಸಿದ್ದಾಳೆ. ಇವಳ ಬಹುಮುಖ ವಿಷಯಗಳಲ್ಲಿ ನಿಖರವಾದ ಕೌಶಲ್ಯವನ್ನು ಗುರುತಿಸುವ ಮತ್ತು ಹೇಳುವ ಕೌಶಲ್ಯವನ್ನು ನೋಡಿ, ಕರ್ನಾಟಕ ಬುಕ್ ಆಫ್ ರೆಕಾರ್ಡ್ ಮೆಚ್ಚಿ ಗೌರವಿಸಿದೆ.

ಪ್ರೊ.ಜೆಪಿಗೆ ಗೌರವ ಡಾಕ್ಟರೇಟ್ ಪುರಸ್ಕಾರ

ಮಂಡ್ಯ: ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಪ್ರೊ.ಜಯಪ್ರಕಾಶಗೌಡಗೆ ಮಂಡ್ಯ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತಿದೆ. ಕರ್ನಾಟಕ ಸಂಘದ ಅಧ್ಯಕ್ಷರಾಗಿರುವ ಜಯಪ್ರಕಾಶಗೌಡ ಅವರು ಅತ್ಯಂತ ಕ್ರಿಯಾಶೀಲವಾಗಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಸೇವೆ ಪರಿಗಣಿಸಿ ಮಂಡ್ಯ ವಿವಿ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಿದೆ. ಜೂ.14ರಂದು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆಯುವ ವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ ಎಂದು ಮಂಡ್ಯ ವಿವಿ ಕುಲಪತಿ ಡಾ. ಕೆ. ಶಿವಚಿತ್ತಪ್ಪ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''