ವಾಸ್ತವಿಕತೆ ಅರಿತು ಬದುಕಿ: ಶಿವಾನಂದ ರಾವ್

KannadaprabhaNewsNetwork |  
Published : Nov 16, 2026, 02:15 AM IST
ಕಾರ್ಯಕ್ರಮವನ್ನುಹಿರಿಯ ಸಾಹಿತಿ ಬಿ. ಪಿ. ಶಿವಾನಂದ ರಾವ್ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಬದುಕಿರುವುದು ಹೊಂದಿಕೊಳ್ಳಲಿಕ್ಕೆ, ಹೋಲಿಸಿಕೊಳ್ಳಲಿಕ್ಕಲ್ಲ. ಪ್ರಾಮಾಣಿಕತೆಯನ್ನು ಬದುಕಿನ ಉಸಿರಾಗಿಸಿಕೊಳ್ಳಬೇಕು.

ಕುಮಟಾ: ಬದುಕಿನಲ್ಲಿ ವಾಸ್ತವಿಕತೆಯನ್ನು ಅರಿತು ಜೀವಿಸಬೇಕು. ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಯಾರನ್ನೂ ಶೋಷಿಸಬಾರದು ಎಂದು ಹಿರಿಯ ಸಾಹಿತಿ ಬಿ. ಪಿ. ಶಿವಾನಂದ ರಾವ್ ಹೇಳಿದರು.

ಗೋರೆಯ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕೆನರಾ ಎಕ್ಸಲೆನ್ಸ್ ಸಂಭ್ರಮ ಮತ್ತು ಕರ್ನಾಟಕ ವೈಭವ ೨೦೨೬ ಉದ್ಘಾಟಿಸಿ ಮಾತನಾಡಿದರು.

ವಿಶ್ವಸ್ಥರಾದ ಡಿ.ಎನ್. ಭಟ್ ಅವರು ಹಳೆ ವಿದ್ಯಾರ್ಥಿ ಸಂಘಕ್ಕೆ ಚಾಲನೆ ನೀಡಿದರು. ನಾಡಗೀತೆ ಹಾಗೂ ವಿದ್ಯಾರ್ಥಿನಿ ಸಿಂಧೂರ ಪೂಜಾರಿ ಅವರಿಂದ ಸ್ವಾಗತ ನೃತ್ಯದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕಿರಣ ಭಟ್ ಹುತ್ಗಾರ ಸ್ವಾಗತಿಸಿದರು. ಸ್ಪರ್ಧಾ ವಿಜೇತರನ್ನು, ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸುನಿಲ್ ನಾಯ್ಕ, ಗಾಯತ್ರಿ ಹೆಗಡೆ, ಅಕ್ಷಯ ಹೆಗಡೆ ನಿರ್ವಹಿಸಿದರು.

ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಯಕ್ಷವೈಭವ, ಗಣಪತಿ ಭಟ್ ನಿರ್ದೇಶನದಲ್ಲಿ ವಿಜಯ ವೈಭವ ರೂಪಕ, ವಿದ್ವಾನ್ ಡಾ. ಹರೀಶ್ ಹೆಗಡೆ ಸಂಗಡಿಗರಿಂದ ಸಂಗೀತ ವೈಭವ ನೆರೆದವರನ್ನು ರಂಜಿಸಿತು. ಪ್ರಶಸ್ತಿ ಪ್ರದಾನ: ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವೈಭವ ಪ್ರಶಸ್ತಿಯನ್ನು ಅಶೋಕೆಯ ಸ್ವರಾತ್ಮ ಗುರುಕುಲದ ಪ್ರಾಚಾರ್ಯ ಡಾ. ಹರೀಶ ಹೆಗಡೆ ಅವರಿಗೆ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳ ಹಸ್ತಪತ್ರಿಕೆ ಛಾತ್ರಸಂಪದವನ್ನು ಬಿಡುಗಡೆಗೊಳಿಸಿದ ಉಡುಪಿ ಆಸೆಮ್ಸ್ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಪ್ರೊ. ಪವನ್ ಕಿರಣ್ ಕೆರೆ ಮಾತನಾಡಿ, ಬದುಕಿರುವುದು ಹೊಂದಿಕೊಳ್ಳಲಿಕ್ಕೆ, ಹೋಲಿಸಿಕೊಳ್ಳಲಿಕ್ಕಲ್ಲ. ಪ್ರಾಮಾಣಿಕತೆಯನ್ನು ಬದುಕಿನ ಉಸಿರಾಗಿಸಿಕೊಳ್ಳಬೇಕು. ಯಾವುದೇ ಕಾರ್ಯವನ್ನು ಅತ್ಯುತ್ತಮವಾಗಿ ಮಾಡಬೇಕು. ರ‍್ಯಾಂಕ್ ಸಾಧಕನಾದರೆ ಸಾಲದು, ಉತ್ತಮ ಗುಣವಂತನೆಂದು ಗುರುತಿಸಿಕೊಳ್ಳುವುದು ಮುಖ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ. ಜಿ.ಜಿ. ಹೆಗಡೆ ಮಾತನಾಡಿ, ಹಳೆ ವಿದ್ಯಾರ್ಥಿಗಳು ಸಂಸ್ಥೆಯೊಂದಿಗೆ ಸದಾ ಆತ್ಮೀಯ ಬಾಂಧವ್ಯವನ್ನು ಉಳಿಸಿಕೊಂಡು ಹೋಗಬೇಕು. ಸಂಸ್ಥೆಯಲ್ಲಿ ಕಲಿತ ಉತ್ತಮ ಸಂಸ್ಕಾರಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡಾಗಲೇ ಶಿಕ್ಷಣ ಸಾರ್ಥಕವಾಗುತ್ತದೆ ಎಂದರು.

ಕಾರ್ಯದರ್ಶಿ ಡಾ. ಸೀತಾಲಕ್ಷ್ಮಿ ಹೆಗಡೆ ಉಪಸ್ಥಿತರಿದ್ದರು. ಗಣಪತಿ ಭಟ್ ಸ್ವಾಗತಿಸಿದರು. ಆಡಳಿತಾಧಿಕಾರಿ ಶಶಾಂಕ ಶಾಸ್ತ್ರಿ, ಪ್ರೊ. ಪೂಜಾ ಭಟ್ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಮಾ ತೀರದಲ್ಲಿ ಅನೈತಿಕ ರಾಜಕಾರಣ ಮಾಡಲು ಬಿಡಲ್ಲ
ಶಿಬಿರದಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ