ಭೂಮಾಪನ ಅಧಿಕಾರಿ ಸಿದ್ದನಗೌಡರ ಮನೆ ಲೋಕಾ ದಾಳಿ

KannadaprabhaNewsNetwork |  
Published : Feb 13, 2026, 02:15 AM IST
ಧಾರವಾಡದ ಭಾರತಿ ನಗರದಲ್ಲಿರುವ ಎಸ್‌.ಎಫ್‌. ಸಿದ್ದನಗೌಡರ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಆಸ್ತಿ ದಾಖಲೆ ಪರಿಶೀಲಿಸುತ್ತಿರುವುದು. | Kannada Prabha

ಸಾರಾಂಶ

ಧಾರವಾಡದ ನಗರದ ಭಾರತಿ ನಗರದ ಮನೆ ಮತ್ತು ಐಸ್‌ಗೇಟ್‌ ಬಳಿ ಇರುವ ಭೂಮಾಪನ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಜತೆಗೆ ಬೆಳಗಾವಿ ಜಿಲ್ಲೆಯ ಮುರಗೋಡದ ಸಿದ್ದನಗೌಡರ ಮನೆ ಮೇಲೂ ದಾಳಿ ನಡೆದಿದೆ.

ಧಾರವಾಡ:

ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಇಲ್ಲಿಯ ಭೂಮಾಪನ ಇಲಾಖೆಯಲ್ಲಿ ಕಚೇರಿ ಮೇಲ್ವಿಚಾರಕ ಹುದ್ದೆಯಲ್ಲಿರುವ ಎಸ್‌.ಎಫ್‌. ಸಿದ್ದನಗೌಡರ ಮನೆ ಮೇಲೆ ಗುರುವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ನಗರದ ಭಾರತಿ ನಗರದ ಮನೆ ಮತ್ತು ಐಸ್‌ಗೇಟ್‌ ಬಳಿ ಇರುವ ಭೂಮಾಪನ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಜತೆಗೆ ಬೆಳಗಾವಿ ಜಿಲ್ಲೆಯ ಮುರಗೋಡದ ಸಿದ್ದನಗೌಡರ ಮನೆ ಮೇಲೂ ದಾಳಿ ನಡೆದಿದೆ.

ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಬೆಳಗ್ಗೆಯಿಂದ ಸಂಜೆ ವರೆಗೂ ಸಿದ್ದನಗೌಡರ ಅವರ ಆಸ್ತಿ ದಾಖಲೆಗಳು ವಶಕ್ಕೆ ಪಡೆದು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಒಂದು ಮನೆ, ಮೂರು ನಿವೇಶನ, 3 ಎಕರೆ ಜಮೀನು, ₹ 82 ಸಾವಿರ ನಗದು, ₹ 35 ಲಕ್ಷ ಮೌಲ್ಯದ 443 ಗ್ರಾಂ ಚಿನ್ನ, 4.5 ಕೆಜಿ ಬೆಳ್ಳಿ, ₹ 15 ಲಕ್ಷ ಮೌಲ್ಯದ ಕಾರು ಸೇರಿದಂತೆ ಒಟ್ಟು ₹ 2.64 ಕೋಟಿ ಆಸ್ತಿ ಪತ್ತೆಯಾಗಿದೆ. ಆದರೆ, ಈ ಪೈಕಿ ₹ 1.80 ಕೋಟಿ ಅಕ್ರಮ ಆಸ್ತಿ ಎಂದು ಗುರುತಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಐ ಮೂಲಕವೇ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಹೊಸ ಟೆಕ್‌!
ನನ್ನನ್ನು ಜೈಲಿಗೆ ಕಳಿಸಲು ಕುಮಾರಣ್ಣ ಸಂಚು : ಡಿಕೆಶಿ