ಶೇಷಮೂರ್ತಿ ಅವಧಾನಿ
ಲೋಕ ಸಮರದ ಕದನ ಕಣದಲ್ಲಿ 60 ದಿನಗಳಿಂದ ತುಂಬಾ ಕಾರ್ಯಮಗ್ನರಾಗಿದ್ದ ಜಿಲ್ಲೆಯ ಜನ ನಾಯಕರು ಮತದಾನವಾಗುತ್ತಿದ್ದಂತಯೇ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ.
ಜಿಲ್ಲೆಯಲ್ಲಿ ಕಳೆದ 2 ತಿಂಗಳಿಂದ ಲೋಕ ಕದನ ಕಣದಲ್ಲಿ ಮುಖಾಮುಕಿಯಾಗಿ ಪರಸ್ಪರ ತೆಗಳುತ್ತ, ಹೇಳಿಕೆ ಸಮರಕ್ಕೆ ಮುಂದಾಗಿದ್ದವರು ಮತದಾನ ಮುಗಿಯುತ್ತಿದ್ದಂತೆಯೇ ಕುಟುಂಬ ಸದ್ಯರೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ.ಕಾಂಗ್ರೆಸ್‌ನ ಹುರಿಯಾಳು ರಾಧಾಕೃಷ್ಣ ಅವರಂತೂ ಬುಧವಾರ ತಮ್ಮಮಾವನರ ಮನೆ ಲುಂಬಿಣಿಯಲ್ಲಿ ಕುಟುಂಬ ಸದಸ್ರೊಂದಿಗೆ ಹೆಚ್ಚಿನ ಸಮಯ ಕಳೆದರು. ಇದಲ್ಲದೆ ಆಗಾಗ ಭೇಟಿಯಾಗಲು ಬರುತ್ತಿದ್ದ ಕಾರ್ಯಕರ್ತರೊಂದಿಗ ಮಾತುಕತೆ ನಡೆಸುತ್ ಮತದಾನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು.
ಪತ್ರಿಕೆಗಳನ್ನು ಓದುವುದು, ಟೀವಿಯಲ್ಲಿನ ವಿಶ್ಲೇಷಣೆ, ಬಂಧುಗಳ ವಿವರಣೆ ಎಲ್ಲವನ್ನು ಕಿವಿಗೊಟ್ಟು ಆಲಿಸುವ ರಾಧಾಕೃಷ್ಣ ಮಾತ್ರ ತಮ್ಮ ಮತದಾನದ ಲೆಕ್ಕ ಜೊತೆಗೇ ಇಟ್ಟುಕೊಂಡು ಗೆಲುವಿನ ಸಂತಸದಲ್ಲಿದ್ದರು ಎಂದು ಆಪ್ತರು ಹೇಳಿದ್ದಾರೆ.
ದಿನ ಮುಂಜಾನೆ ಐದು ಗಂಟೆಯಿಂದ ಕಾಲಿಗೆ ಚಕ್ರ ಕಟ್ಟಿ ಓಡಾಟ ನಡೆಸಿದ ಜಾಧವ್ ಇದೀಗ ತುಸು ನೆಮ್ಮದಿಯಂದ ಇರೋಣವೆಂದು ಮುಂದಾಗಿದ್ದಾರೆ. ಫಲಿತಾಂಶಕ್ಕೆ ಬರೋಬರ್ರಿ ತಿಗಳಿರೋದರಿಂದ ಕುಟುಂಬದವರೊಂದಿಗೆ ಇರೋದೇ ನೆಮ್ಮದಿ ಎಂದು ಹೇಳುತ್ತಿದ್ದಾರೆ.
ಪ್ರಚಾರ ಭಾಷಣ ಸಭೆ ಇಲ್ಲದೆ ರಿಲಾಕ್ಸ್ ಮೂಡ್ ನಲ್ಲಿದ್ದು ಹೂವಿನ ಗಿಡಗಳಿಗೆ ನೀರುಣಿಸಿದರು. ನಂತರ ವ್ಯಾಯಾಮ ಮುಗಿಸಿ ಚಹಾ ಸವಿದರು ಟಿವಿ ಪತ್ರಿಕೆಗಳ ವರದಿ ವಿಶ್ಲೇಷಣೆ ಮೇಲೆ ಕನ್ನಡಿಗರು ಕುಟುಂಬದವರ ಜೊತೆ ಬೆರೆದರು. ಇಷ್ಟೆಲ್ಲದರ ಮಧ್ಯೆ ಗೆಲುವಿನ ಲೆಕ್ಕಾಚಾರದಲ್ಲಿ ಪಕ್ಕ ಮಾಡಿಕೊಂಡ ಜಾಧವ್ ಅಭಿಪ್ರಾಯ ಸಂಗ್ರಹದಲ್ಲೂ ನಿರತರಾಗಿದ್ದರು.
ಪೂಜೆ- ಪುನಸ್ಕಾರ ಮಾಡಿದ ಜಗದೇವ ಗುತ್ತೇದಾರ್: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ ಗುತ್ತೇದಾರರಿಗೆ 2 ತಿಂಗಳಿಂದ ಬಿಡುವಿಲ್ಲದ ಕೆಲಸವಿತ್ತು. ಖರ್ಗೆಯವರ ಅಳಿಯನವರೇ ಇಲ್ಲಿ ಅಭ್ಯರ್ಥಿಯಾಗಿದ್ದರಿಂದ ದೇಶದ ನಾಯಕರೆಲ್ಲರೂ ಕೇರಾಫ್ ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲೇ ಬಂದಿಳಿದರು.ಎಲ್ಲರೂ ಸರಣಿ ಸುದ್ದಿಗೋಷ್ಠಿ ನಡೆಸುತ್ತ ಹೇಳಿಕೆ ನೀಡುತ್ತಿರೋದರಿಂದ ಅವರೆಲ್ಲರೊಂದಿಗೆ ಇದ್ದು ನಿರಂತರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಜಗದೇವ ಗುತತೇದಾರ್ ಮತದಾನದ ಮಾರನೆ ದಿನ ಅಮಾವಾಸ್ಯೆಯಾದ್ದರಿಂದ ಮನೆಯಲ್ಲೇ ಕಾಲ ಕಳೆದರು.
ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಈ ಬಾರಿ ಜೇವರ್ಗಿಯಲ್ಲಿ ಅತೀ ಹೆಚ್ಚಿನ ಸಭೆಗಳನ್ನು ನಡೆಸಿ ಕೈ ಪರ ಮತಬೇಟೆ ನಡೆಸಿದ್ದರು. ಉರಿ ಬಿಸಿಲಲ್ಲಿ ನಡೆದ ನಿರಂತರ ಸಭೆಗಳಿಂದ ಬಸವಳಿದಿದ್ದ ಡಾ. ಅಜಯ್ ಸಿಂಗ್ ಅವರು ಮತದಾನ ಪ್ರಕ್ರಿಯೆ ಮುಗಿದು ತಮ್ಮ ಪಕ್ಷದ ಪರ ಒಲವು ಕಂಡಿರೋದು ಕೇಳಿ ಖುಷಿಯಲ್ಲಿ ಬೆಂಗಳೂರು ಸರಿ ಕುಟುಂಬದವರೊಂದಿಗೆ ಬೆರೆತಿದ್ದಾರೆ.
ಇನ್ನು ಕಲಬುರಗಿ ದಕ್ಷಿಣ ಶಾಸರಾದ ಅಲ್ಲಂಪ್ರಭು ಪಾಟೀಲರು ಮತದಾನದ ಮಾರನೆ ದಿನವೂ ಪಕ್ಷದ ನಾಯಕರು ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ತತ್ಮ್ಮ ಕ್ಷೇತ್ರದಲ್ಲಿನ ಶೇ. 55 ರಷ್ಟು ಮತದಾನವಾದ ಬಗ್ಗೆ, ಅದರಲ್ಲಿ ಕಾಂಗ್ರೆಸ್ ಪರವೇ ಹೆಚ್ಚಿನ ಒಲವು ಕಂಡಿರೋ ಬಗ್ಗೆಯೂ ಬೆಂಬಲಿಗರೊಂದಿಗೆ ಸಭೆ ನಡೆಸಿ, ಮಾತುಕತೆ ಮಾಡಿ ಮಾಹಿತಿ ಕಲೆ ಹಾಕುವಲ್ಲಿ ಮಗ್ನರಾಗಿದ್ದರು. ಇವರಿಗೂ ಮತದಾನದ ನಂತರವೂ ನೋ ರಿಲ್ಯಾಕ್ಸ್ ಎಂಬಂತೆಯೇ ಬುಧವಾರವೂ ಕೆಲಸ ಮಾಡಿದರು.