ಹಿರೇಕೆರೂರು: ಕಾಂಗ್ರೆಸ್‌ನ ಭದ್ರ ನೆಲೆಯಾಗಿದ್ದ ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರ, ಕ್ಷೇತ್ರ ಪುನರ್ ವಿಂಗಡಣೆಯಾಗಿ ಹಾವೇರಿ -ಗದಗ ಕ್ಷೇತ್ರವಾದ ಮೇಲೆ ಮತ್ತೆ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವಂತಹ ಎಲ್ಲ ಲಕ್ಷಣಗಳು ಕಂಡುಬಂದಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಪ್ರಚಾರವನ್ನು ಕೈಗೊಂಡಿದ್ದು, ಅವರ ಎರಡನೇ ಮತಯಾಚನೆ ಕಾರ್ಯಕ್ರಮವನ್ನು ರಟ್ಟೀಹಳ್ಳಿ ತಾಲೂಕಿನಲ್ಲಿ ಮಾ. ೩೧ರಂದು ನಡೆಸಲಾಗುವುದು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ, ಎಸ್.ಬಿ. ತಿಪ್ಪಣ್ಣನವರ, ಶಿವರಾಜ ಹರಿಜನ, ಮಹೇಶ ಗುಬ್ಬಿ, ಮಹೇಂದ್ರ ಬಡಳ್ಳಿ, ಸುರೇಶ ಮಡಿವಾಳರ, ಷಣ್ಮುಖಯ್ಯ ಮಳಿಮಠ, ಮಲ್ಲಿಕಾರ್ಜುನ ಬುರಡೀಕಟ್ಟಿ, ನಿಂಗಪ್ಪ ಚಳಗೇರಿ, ಸಿದ್ದನಗೌಡ ನರೇಗೌಡ್ರ, ಸನಾವುಲ್ಲಾ ಮಕನ್ದಾರ್, ಜ್ಯೋತಿ ಜಾಧವ, ಮಾದೇವಪ್ಪ ಮಾಳಮ್ಮನವರ, ಬಶೀರ್‌ಸಾಬ್ ಪಟ್ಟಣಶೆಟ್ಟಿ, ಪ್ರಕಾಶ ಉಪ್ಪಾರ, ಬಿರೇಶ ಹರ‍್ನಳ್ಳಿ, ಆನಂದ ನಾಯ್ಕರ ಸೇರಿದಂತೆ ಇತರರಿದ್ದರು.