ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಗಾಳಕ್ಕೆ ಪಾಲಿಕೆ ಪ್ರಥಮ ದರ್ಜೆ ಸಹಾಯಕ

KannadaprabhaNewsNetwork |  
Published : Mar 15, 2025, 01:03 AM IST
14ಕೆಡಿವಿಜಿ1-ದಾವಣಗೆರೆ ಪಾಲಿಕೆ ವಲಯ ಕಚೇರಿ-2ರ ಪ್ರಥಮ ದರ್ಜೆ ಸಹಾಯಕ ಪಾಲ ನಾಯಕ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದ ಆರೋಪಿ. | Kannada Prabha

ಸಾರಾಂಶ

ನಿವೇಶನವನ್ನು ವರ್ಗಾಯಿಸಿಕೊಡಲು ₹2,500ಕ್ಕೆ ಬೇಡಿಕೆ ಇಟ್ಟಿದ್ದ ಪಾಲಿಕೆ ಪ್ರಥಮ ದರ್ಜೆ ಸಹಾಯಕನೊಬ್ಬ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಗಾಳಕ್ಕೆ ಸಿಕ್ಕಿಬಿದ್ದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.

- ನಿವೇಶನ ವರ್ಗಾವಣೆಗೆ ₹2,500 ಕೇಳಿದ್ದ ಪಾಲನಾಯಕ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನಿವೇಶನವನ್ನು ವರ್ಗಾಯಿಸಿಕೊಡಲು ₹2,500ಕ್ಕೆ ಬೇಡಿಕೆ ಇಟ್ಟಿದ್ದ ಪಾಲಿಕೆ ಪ್ರಥಮ ದರ್ಜೆ ಸಹಾಯಕನೊಬ್ಬ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಗಾಳಕ್ಕೆ ಸಿಕ್ಕಿಬಿದ್ದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.

ನಗರದ ಪಾಲಿಕೆ ವಲಯ ಕಚೇರಿ-2ರ ಪ್ರಥಮ ದರ್ಜೆ ಸಹಾಯಕ ಪಾಲನಾಯಕ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದ ಆರೋಪಿ. ನಗರದ ಜಿ.ಯು.ಬಸವನಗೌಡ ಎಂಬುವರು ಆವರಗೆರೆ ವಾರ್ಡ್‌ ನಂ.30ರ ಬಾಡಾ ಕ್ರಾಸ್‌ನ ಮೋದಿ ನಗರದ ಖಾಲಿ ನಿವೇಶನ- ಡೋರ್ ನಂಬರ್‌ 338/21 ರ 30-40 ಅಳತೆ ನಿವೇಶನವನ್ನು ತಮ್ಮ ತಂಗಿ ಜಿ.ಯು.ಕಾವ್ಯ ಹೆಸರಿಗೆ ಪಾಲು ವಿಭಾಗ ಯಾನೆ ಪಾರೀಖತ್ ಪತ್ರದ ಮುಖಾಂತರ ನೋಂದಣಿ ಮಾಡಿಸಿದ್ದರು.

ಈ ಆಸ್ತಿ ಕಾವ್ಯ ಹೆಸರಿಗೆ ನಿವೇಶನ ಖಾತೆ ವರ್ಗಾವಣೆ ಮಾಡಿಕೊಡಲು ಪಾಲನಾಯಕ ₹2500 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪಾಲು ವಿಭಾಗದಲ್ಲಿ ಮಾಡಿಕೊಂಡ ನಿವೇಶನ ಸಹೋದರಿಗೆ ಹೆಸರಿಗೆ ವರ್ಗಾಯಿಸಿಕೊಡಲು ಲಂಚ ಕೊಡಲು ಬಸವನಗೌಡ ಇಷ್ಟಪಡಲಿಲ್ಲ. ಬದಲಿಗೆ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಪಾಲನಾಯಕನ ವಿರುದ್ಧ ದೂರು ನೀಡಿ, ಕ್ರಮ ಜರಿಗಿಸಲು ಕೋರಿದ್ದರು. ಪಾಲಿಕೆ ವಲಯದ ಕಚೇರಿ-2ರ ತಮ್ಮ ಕೊಠಡಿಯಲ್ಲಿ ಶುಕ್ರವಾರ ಪಿರ್ಯಾದಿ ಬಸವನಗೌಡರಿಂದ ಪ್ರಥಮ ದರ್ಜೆ ಸಹಾಯಕ ಪಾಲ ನಾಯಕ ₹2,500 ಲಂಚದ ಪಡೆಯುವಾಗ ಹಣದ ಸಮೇತ ಸಿಕ್ಕಿ ಬಿದ್ದಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು ಬ.ಸೂರಿನ, ಮುಸ್ತಾಕ್ ಅಹಮ್ಮದ್‌, ಲೋಕಾಯುಕ್ತ ಠಾಣೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪಾಲನಾಯಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

- - - -14ಕೆಡಿವಿಜಿ1.ಜೆಪಿಜಿ:

ಪಾಲನಾಯಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ