ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಜೆಪಿಯ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತೊಮ್ಮೆ ಗೆಲುವು ದಾಖಲಿಸಿದೆ. ಜಯನಗರದ ಎಸ್‌ಎಸ್‌ಎಂಎಆರ್‌ವಿ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಆರಂಭಿದಿಂದಲೂ ಮುನ್ನಡೆ ಕಾಯ್ದುಕೊಂಡರು. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಮತ ಎಣಿಕೆ ಕೇಂದ್ರದತ್ತ ಸುಳಿಯಲಿಲ್ಲ.
ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜಯನಗರ ಮತ್ತು ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಚಲಾವಣೆಗೊಂಡ ಮತಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಹೆಚ್ಚಿನ ಮತಗಳು ಚಲಾವಣೆಯಾಗಿದ್ದು ಬಿಟ್ಟರೆ, ಉಳಿದ 6 ಕ್ಷೇತ್ರಗಳಲ್ಲಿ ತೇಜಸ್ವಿ ಸೂರ್ಯ ಪರವಾಗಿ ಹೆಚ್ಚಿನ ಮತಗಳು ಚಲಾವಣೆಗೊಂಡವು.ಮತ ಎಣಿಕೆ ಪ್ರಕ್ರಿಯೆ 10 ನಿಮಿಷ ತಡವಾಗಿ ಆರಂಭವಾಯಿತು. ಮೊದಲಿಗೆ ಅಂಚೆ ಮತ ಎಣಿಕೆ ನಡೆಸಲಾಯಿತು. ತೇಜಸ್ವಿ ಪರವಾಗಿ 3,050 ಅಂಚೆ ಮತಗಳು ಚಲಾವಣೆ ಗೊಂಡಿದ್ದರೆ, ಸೌಮ್ಯಾ ರೆಡ್ಡಿ ಪರವಾಗಿ ಕೇವಲ 993 ಮತಗಳು ಚಲಾವಣೆ ಗೊಂಡಿದ್ದವು. ಆಮೂಲಕ ಅಂಚೆ ಮತದಲ್ಲಿಯೇ ತೇಜಸ್ವಿ ಸೂರ್ಯ 2,057 ಮತಗಳ ಮುನ್ನಡೆ ಪಡೆದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ 8 ಕ್ಷೇತ್ರಗಳ ಪೈಕಿ ಚಿಕ್ಕಪೇಟೆ ಕ್ಷೇತ್ರದಲ್ಲಿ ಸೌಮ್ಯಾ ರೆಡ್ಡಿಗೆ ತೇಜಸ್ವಿ ಸೂರ್ಯಗಿಂತ 1,471 ಮತಗಳು ಹಾಗೂ ಜಯನಗರದಲ್ಲಿ 2,875 ಹೆಚ್ಚಿನ ಮತಗಳು ಚಲಾವಣೆ ಗೊಂಡಿದ್ದವು. ಉಳಿದಂತೆ ಕಾಂಗ್ರೆಸ್ ಶಾಸಕರಿರುವ ಗೋವಿಂದರಾಜನಗರ, ವಿಜಯನಗರಗಳಲ್ಲಿ ತೇಜಸ್ವಿ ಸೂರ್ಯಗೆ ಭರ್ಜರಿ ಮುನ್ನಡೆ ದೊರೆಯಿತು.
ಠೇವಣಿ ಕಳೆದುಕೊಂಡ 20 ಮಂದಿ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಅದರಲ್ಲಿ ತೇಜಸ್ವಿ ಸೂರ್ಯ, ಸೌಮ್ಯಾ ರೆಡ್ಡಿ ಹೊರತುಪಡಿಸಿ ಉಳಿದ 20 ಮಂದಿ ಠೇವಣಿ ಕಳೆದುಕೊಂಡರು. ಅಲ್ಲದೆ, ಅವರಿಗಿಂತ ನೋಟಾ ಮತಗಳೇ ಹೆಚ್ಚು ಚಲಾವಣೆಗೊಂಡಿದ್ದವು. ನೋಟಾಗೆ 7,857 ಮತಗಳು ಚಲಾವಣೆಗೊಂಡಿದ್ದರೆ, ಠೇವಣಿ ಕಳೆದುಕೊಂಡ 20 ಅಭ್ಯರ್ಥಿಗಳು ಅದರ ಹತ್ತಿರಕ್ಕೂ ಸುಳಿಯಲಿಲ್ಲ.ಬಿಜೆಪಿ ಸಂಭ್ರಮಕ್ಕೆ ಪೊಲೀಸರ ತಡೆ
ಯಾರಿಗೆ ಎಷ್ಟು ಮತ?
ತೇಜಸ್ವಿ ಸೂರ್ಯ (ಬಿಜೆಪಿ): 7,50,830ಸೌಮ್ಯಾ ರೆಡ್ಡಿ (ಕಾಂಗ್ರೆಸ್): 4,73,747
ಗೆಲುವಿನ ಅಂತರ: 2,77,083
ವಿಧಾನಸಭಾ ಕ್ಷೇತ್ರವಾರು ಮತ ಗಳಿಕೆ ವಿವರ:ಕ್ಷೇತ್ರ ಬಿಜೆಪಿಕಾಂಗ್ರೆಸ್‌ಅಂತರ
ವಿಜಯನಗರ95,26162,72132,540
ಚಿಕ್ಕಪೇಟೆ65,33166,8021,471ಬಸನಗುಡಿ1,04,58322,48082,103
ಪದ್ಮನಾಭನಗರ1,08,27455,40652,868ಬಿಟಿಎಂ ಲೇಔಟ್72,54163,1929,349
ಜಯನಗರ61,70564,5802,875ಬೊಮ್ಮನಹಳ್ಳಿ1,37,76483,63754,127
ಅಂಚೆ ಮತ3,0509932,057ಒಟ್ಟು7,50,8304,73,7472,77,083
ಕೋಟ್ಕಾಂಗ್ರೆಸ್ನವರು ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಕ್ಷೇತ್ರದ ಮತದಾರರು ಕೆಲಸ ಮಾಡುವವರಿಗೆ ಮತ ಚಲಾಯಿಸಿದ್ದಾರೆ. ಎರಡನೇ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಂಸದನಾಗಿ ಆಯ್ಕೆ ಮಾಡಿದ್ದಾರೆ. ಕ್ಷೇತ್ರದ ಮತದಾರರಿಗೆ, ನನ್ನ ಪರವಾಗಿ ನಿಂತ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಧನ್ಯವಾದಗಳು. ಕಳೆದ 5 ವರ್ಷಗಳಲ್ಲಿ ಮಾಡಿದ ಕೆಲಸಕ್ಕಿಂತ 10 ಪಟ್ಟು ಹೆಚ್ಚಿನ ಕೆಲಸ ಮಾಡಲು ಶಕ್ತಿ ಬಂದಿದೆ.
-ತೇಜಸ್ವಿ ಸೂರ್ಯ, ಬಿಜೆಪಿ ಅಭ್ಯರ್ಥಿ.