ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕದ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಪ್ರಸ್ತುತ ಸಾಮಾಜಿಕ ನೆಲೆಯಲ್ಲಿ ವಾಲ್ಮೀಕಿ ರಾಮಾಯಣ ಎಂಬ ವಿಶೇಷ ಉಪನ್ಯಾಸದ ವೇಳೆ ಮಾತನಾಡಿದರು. ವರ್ಣಾಶ್ರಮದ ಕಾಲಘಟ್ಟದಲ್ಲಿ ತನ್ನ ಅಪಾರ ಜ್ಞಾನದಿಂದ ರಾಮಾಯಣದಂತಹ ಮಹಾಕಾವ್ಯವನ್ನು ನೀಡಿದ ಮೇಧಾವಿ ವಾಲ್ಮೀಕಿ. ರಾಮಾಯಣದ ಪ್ರತಿಯೊಂದು ಪದದಲ್ಲಿಯೂ ವಿಶೇಷ ಅರ್ಥವಿದೆ. ಅದನ್ನು ಅರಿತಾಗ ಮಾತ್ರ ವಾಲ್ಮೀಕಿಯ ಜ್ಞಾನದ ನಿಜವಾದ ಪರಿಚಯವಾಗುತ್ತದೆ ಎಂದು ತಿಳಿಸಿದರು.
ರಾಮಾಯಣ ಕೇವಲ ಮನುಷ್ಯರನ್ನಷ್ಟೇ ಒಳಗೊಂಡಿಲ್ಲ, ಪ್ರಾಣಿ, ಪಕ್ಷಿ, ಮರಗಿಡಗಳು, ಪರಿಸರ ಎಲ್ಲವನ್ನೂ ಒಳಗೊಂಡಿದೆ. ಅಲ್ಲಿ ಪ್ರಜಾಪ್ರಭುತ್ವ, ಆಡಳಿತ, ಸಮಾನತೆ, ಸ್ತ್ರೀವಾದ, ಭ್ರಾತೃತ್ವ ಹೀಗೆ ಎಲ್ಲದರ ಪರಿಕಲ್ಪನೆಯೂ ಅಡಗಿದೆ ಎಂದರು.ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ರಾಮಾಯಣದ ಜೀವನ ಮೌಲ್ಯಗಳನ್ನು ನಾವು ಪಾಲನೆ ಮಾಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪರಿಶಿಷ್ಟ ಜಾತಿ,ಪಂಗಡ ಘಟಕದ ನಿರ್ದೇಶಕ ಪ್ರೊ.ಹನುಮಂತಯ್ಯ ಪೂಜಾರಿ ಸ್ವಾಗತಿಸಿದರು. ವಾಲ್ಮೀಕಿ ಅಧ್ಯಯನ ಪೀಠದ ಸಂಯೋಜಕ ಸಂದೀಪ್ ವಂದಿಸಿದರು. ಡಾ.ತಹಮೀನಾ ಕೋಲಾರ್ ಕಾರ್ಯಕ್ರಮ ನಿರೂಪಿಸಿದರು.