ಮಂಗಳೂರಿನಲ್ಲಿ ಬಿಪಿಸಿಎಲ್‌ನ ‘ಭಾರತ್‌ಗ್ಯಾಸ್ ಲೈಟ್ ಜಿಪ್’ ಶುಭಾರಂಭ

KannadaprabhaNewsNetwork |  
Published : Aug 06, 2026, 02:45 AM IST
‘ಭಾರತ್‌ಗ್ಯಾಸ್‌ ಲೈಟ್‌ ಜಿಪ್‌’ ಎಂಬ ಪ್ರೀಮಿಯಂ ಫ್ರೀ ಟ್ರೇಡ್‌ ಎಲ್‌ಪಿಜಿ ಸೇವೆ ಬಿಡುಗಡೆಗೊಳಿಸಲಾಯಿತು | Kannada Prabha

ಸಾರಾಂಶ

ಭಾರತದ ಪ್ರಮುಖ ಇಂಧನ ಕಂಪನಿಗಳಲ್ಲಿ ಒಂದಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಮಂಗಳೂರಿನಲ್ಲಿ ತಕ್ಷಣದ ನೂತನ ಸಂಪರ್ಕ (ಇನ್‌ಸ್ಟಂಟ್ ನ್ಯೂ ಕನೆಕ್ಷನ್) ಮತ್ತು ಎಕ್ಸ್‌ಪ್ರೆಸ್ ಡೆಲಿವರಿಯ ಮೂಲಕ ಗ್ರಾಹಕರ ಅನುಭವವನ್ನು ಹೊಸದಾಗಿ ವ್ಯಾಖ್ಯಾನಿಸಲು ‘ಭಾರತ್‌ಗ್ಯಾಸ್ ಲೈಟ್ ಜಿಪ್’ ಎಂಬ ಪ್ರೀಮಿಯಂ ಫ್ರೀ ಟ್ರೇಡ್ ಎಲ್‌ಪಿಜಿ (ಎಫ್‌ಟಿಎಲ್‌) ಸೇವೆಯನ್ನು ಬಿಡುಗಡೆಗೊಳಿಸಿದೆ.

ಮಂಗಳೂರು: ಭಾರತದ ಪ್ರಮುಖ ಇಂಧನ ಕಂಪನಿಗಳಲ್ಲಿ ಒಂದಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಮಂಗಳೂರಿನಲ್ಲಿ ತಕ್ಷಣದ ನೂತನ ಸಂಪರ್ಕ (ಇನ್‌ಸ್ಟಂಟ್ ನ್ಯೂ ಕನೆಕ್ಷನ್) ಮತ್ತು ಎಕ್ಸ್‌ಪ್ರೆಸ್ ಡೆಲಿವರಿಯ ಮೂಲಕ ಗ್ರಾಹಕರ ಅನುಭವವನ್ನು ಹೊಸದಾಗಿ ವ್ಯಾಖ್ಯಾನಿಸಲು ‘ಭಾರತ್‌ಗ್ಯಾಸ್ ಲೈಟ್ ಜಿಪ್’ ಎಂಬ ಪ್ರೀಮಿಯಂ ಫ್ರೀ ಟ್ರೇಡ್ ಎಲ್‌ಪಿಜಿ (ಎಫ್‌ಟಿಎಲ್‌) ಸೇವೆಯನ್ನು ಬಿಡುಗಡೆಗೊಳಿಸಿದೆ.

ಮಂಗಳೂರಿನ ಅನುಪಮ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಈ 10 ಕೆಜಿ ಫೈಬರ್ ಕಂಪೋಸಿಟ್ ಎಲ್‌ಪಿಜಿ ಸಿಲಿಂಡರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಅನುಪಮ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ಮತ್ತು ಕಾಮಧೇನು ಗ್ಯಾಸ್ ಏಜೆನ್ಸಿ ಜಂಟಿಯಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಬಿಪಿಸಿಎಲ್ ಮೊದಲ ಹಂತವಾಗಿ 15 ಗ್ರಾಹಕರಿಗೆ ಸಿಲಿಂಡರ್‌ಗಳನ್ನು ಹಸ್ತಾಂತರಿಸಲಾಯಿತು.

ಭಾರತ್ ಗ್ಯಾಸ್ ಮಂಗಳೂರು ಎಲ್‌ಪಿಜಿ ಟೆರಿಟರಿ ಮ್ಯಾನೇಜರ್ ಸಂದೀಪ್ ಕುಮಾರ್ ರೈನಾ ಮಾತನಾಡಿ, ಗ್ರಾಹಕರ ಅನುಕೂಲತೆಗೆ ತಂತ್ರಜ್ಞಾನ ಆಧಾರಿತ ಸೇವೆಯನ್ನು ನೀಡುವುದೇ ಸಂಸ್ಥೆಯ ಆದ್ಯತೆಯಾಗಿದೆ ಎಂದರು.

ಭಾರತ್ ಗ್ಯಾಸ್ ಸೇಲ್ಸ್ ಮ್ಯಾನೇಜರ್ ದರ್ಶಿತ ಮಾಳವೀಯ, ನಿವೃತ್ತ ಆರ್‌ಟಿಒ ರವಿಶಂಕರ್, ಕಾಮಧೇನು ಗ್ಯಾಸ್ ಏಜೆನ್ಸಿ ವಿತರಕ ದಿನೇಶ್ ಕುಮಾರ್ ಶೆಟ್ಟಿ, ಅನುಪಮ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್‌ನ ಅಮೃತ, ಸುರೇಶ್ ಕುಮಾರ್ ಇದ್ದರು.

ಗ್ಯಾನ್ ಈವೆಂಟ್ಸ್ ಮಂಗಳೂರಿನ ಗಣೇಶ್ ಪ್ರಸಾದ್ ಕೆ. ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಡುಬಿದಿರೆಯಲ್ಲಿ ಶ್ರೀ ಶಾರದಾ ನಾಟ್ಯಾಲಯದಿಂದ ಆಟಿಡೊಂಜಿ ದಿನ
ಬನ್ನಂಜೆ ಜೀವನಾಧರಿತ ‘ಇಂದು ಎನೆಗೆ ಗೋವಿಂದ’ ವಿಶೇಷ ಪ್ರದರ್ಶನ