ಗಜೇಂದ್ರಗಡ: ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಅನ್ನ ಹಾಗೂ ಆಶ್ರಯ ನೀಡುವ ಮೂಲಕ ಅವರ ಬದುಕಿಗೆ ಬೆಳಕಾಗಿದ್ದ ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಲಿಂ. ಡಾ. ಶಿವಕುಮಾರ ಸ್ವಾಮೀಜಿ ಸದಾ ಸ್ಮರಣೀಯರು ಎಂದು ಮುಖಂಡ ಜಗದೀಶ ಸಂಕನೂರ ಹೇಳಿದರು.
೧೨ನೇ ಶತಮಾನದ ಬಸವಣ್ಣನವರ ತತ್ವಾದರ್ಶಗಳನ್ನು ಪಾಲನೆ ಜತೆಗೆ ಸಮಾಜದ ಉದ್ಧಾರಕ್ಕೆ ಸದಾ ತುಡಿಯುತ್ತಿದ್ದ ಆಧುನಿಕ ಬಸವಣ್ಣ ಎಂದು ಜನಮಾನಸ ಹಾಗೂ ಸಹಸ್ರ ಭಕ್ತರ ಮನಸ್ಸಿನಲ್ಲಿ ಡಾ.ಶಿವಕುಮಾರ ಸ್ವಾಮೀಜಿಯವರು ನೆಲೆಯೂರಿದ್ದಾರೆ. ಮಹಾತ್ಮರನ್ನು ಸ್ಮರಿಸುವುದು ಪುಣ್ಯದ ಕೆಲಸವಾಗಿದೆ. ಸರ್ಕಾರ ಮಾಡುವ ಕೆಲಸವನ್ನು ಮಠ ಮಾಡುತ್ತ ಬಂದಿದೆ. ಮಠದಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಅತಿ ಹೆಚ್ಚು ಉನ್ನತ ಹುದ್ದೆಯಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
"ಇದಕ್ಕೂ ಮುನ್ನ ಇಲ್ಲಿನ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಸಂಘಟಕರು ನಿರ್ಮಿಸಿದ್ದ ವೇದಿಕೆಯಲ್ಲಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ವಿಶೇಷ ಪೂಜೆ ನೆರವೇರಿಸಿದ ಬಳಿಕ ನೆರದಿದ್ದ ಭಕ್ತರು ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಭಕ್ತಿ ಭಾವ ಮೆರೆದರು. ನಂತರ ಸಾಮೂಹಿಕ ಅನ್ನ ಸಂರ್ತಪಣೆ ನಡೆಯಿತು. "ಈ ವೇಳೆ ಪುರಸಭೆ ಮಾಜಿ ಸದಸ್ಯರಾದ ಮುರ್ತುಜಾ ಡಾಲಾಯತ, ರಾಜು ಸಾಂಗ್ಲೀಕರ, ಮುಖಂಡರಾದ ನಾರಾಯಣಗೌಡ ಶಿನ್ನೂರ, ಪಾಶಾ ಹವಾಲ್ದಾರ, ಮಲ್ಲು ಕುಮಚಗಿ, ಮಲ್ಲು ಹಡಪದ, ಚಂದ್ರು ಕುಷ್ಟಗಿ, ಕಳಕೇಶ ಚನ್ನಿ, ಶ್ರೀಕಾಂತ ಕುಂಬಾರ, ಶ್ರೀಕಾಂತ ಕಮ್ಮಾರ, ಕಾಳಪ್ಪ ಕಮ್ಮಾರ, ಪ್ರವೀಣ ಹಿರೇಮಠ, ರಾಘವೇಂದ್ರ ಕಮ್ಮಾರ, ವೀರೇಶ ಹಡಪದ, ಮನಹೋರ ಧರೇಕಾರ, ಕಳಕಪ್ಪ ಮಳಗಿ, ಸಂಗಯ್ಯ ಸರಗಣಾಚಾರಿ, ಹೈದರ ಚಾಮಾಲಪುರ, ದಾದು ಹಣಗಿ, ಈಶಪ್ಪ ಜತ್ತಿ, ಬಸವರಾಜ ಹೂಗಾರ, ಮೋಹನ ತಟ್ಟಿ, ವಿಶ್ವನಾಥ ಗೌಡರ, ನಾಗರಾಜ ಕಲಾಲ, ಪ್ರಕಾಶ ಬಾಗಮಾರ, ಹನಮಂತ ಪವಾರ, ಮಹಾಂತೇಶ ಹಿಡಕಿಮಠ, ಕೃಷ್ಣಾ ಮಾಂಡ್ರೆ ಸೇರಿ ಇತರರು ಇದ್ದರು.