ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯಕೇರಳದ ಕುಟುಂಬವೊಂದು ಮೈಸೂರಿಗೆ ಬಂದಿದ್ದ ವೇಳೆ ಹಣವಿದ್ದ ಲಗೇಜ್ ಕಳವು ಆದ ಕಾರಣ ಸುಬ್ರಹ್ಮಣ್ಯದಿಂದ ಕೇರಳಕ್ಕೆ ನಡೆದುಕೊಂಡು ಹೋಗಲು ಸಿದ್ಧರಾದ ಕುಟುಂಬಕ್ಕೆ ಗುತ್ತಿಗಾರಿನ ವ್ಯಕ್ತಿಗಳು ಹಣ ಸಂಗ್ರಹಿಸಿ ವಾಹನದಲ್ಲಿ ಕಳುಹಿಸಿದ ಘಟನೆ ನಡೆದಿದೆ.ಮೂಲತಃ ಕೇರಳದ ಇಡುಕ್ಕಿ ಜಿಲ್ಲೆಯ ತಂದೆ-ತಾಯಿ ಮತ್ತು ಮಗ ಸಿಬಿನ್ ಜೂವೇನ್ ಎಂಬವರು ಮೈಸೂರಿಗೆ ತೆರಳಿದ್ದರು. ಅಲ್ಲಿಂದ ಮಾಹೆ ಚರ್ಚಿಗೆ ವಾಪಸ್ ಆಗುವ ಸಂದರ್ಭ ಲಗೇಜ್‌ನಲ್ಲಿ ಇಟ್ಟಿದ್ದ ಪರ್ಸ್, ಮೊಬೈಲ್ ಸಮೇತ ಲಗೇಜನ್ನು ಕಳ್ಳರು ಕಳವು ಮಾಡಿದ್ದಾರೆ. ಈ ವೇಳೆ ಅವರಲ್ಲಿದ್ದ ಹಣದಿಂದ ಮಡಿಕೇರಿಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದಾರೆ. ಈ ವೇಳೆ ಅವರು ತಮ್ಮೂರು ಕೇರಳದ ಇಡುಕ್ಕಿಯ ತೊಕೂದುರು ಎಂಬಲ್ಲಿ ತೆರಳಲು ನಡೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಈ ನಡುವೆ ಗುತ್ತಿಗಾರಿನಲ್ಲಿ ಪರಿಚಯಸ್ಥ ಯುವಕ ಇರುವ ಬಗ್ಗೆ ತಿಳಿದು ಅಲ್ಲಿಗೆ ನಡೆದುಕೊಂಡು ಹೋಗಿ ವಿಚಾರಿಸಿದ್ದರೂ ಆ ಯುವಕ ಅಲ್ಲಿರಲಿಲ್ಲ.
ಬಸ್ ವೆಚ್ಚವನ್ನು ಚರ್ಚ್ ಧರ್ಮಗುರು ಆದರ್ಶ್ ಜೋಸೆಫ್, ಶ್ರೀ ಮಂಗಳಾ ಡ್ರೈವಿಂಗ್ ಸ್ಕೂಲ್ ಮಾಲಕ ಸಾತ್ವಿಕ್ ಕನ್ನಡ್ಕ, ಭರತ್ ದೇರುಮಜಲ್, ಶೇಷಪ್ಪ ನಾಯ್ಕ್ ಒಟ್ಟು ೩೮೦೦ ರುಪಾಯಿಯನ್ನು ಚಂದ್ರಶೇಖರ ಕಡೋಡಿ ಅವರು ಸಂಗ್ರಹಿಸಿ ನೀಡಿದರು.