ಮಡಂತ್ಯಾರು: ‘ಜನರ ಬಳಿಕೆ, ತಾಲೂಕು ಆಡಳಿತ’ ಜನಸ್ಪಂದನೆ ಕಾರ್ಯಕ್ರಮ

KannadaprabhaNewsNetwork |  
Published : Jun 03, 2025, 12:51 AM IST
ಜನಸ್ಪಂದನೆ | Kannada Prabha

ಸಾರಾಂಶ

ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಅಧಿಕಾರಿಗಳೊಂದಿಗೆ ‘ಜನರ ಬಳಿಗೆ - ತಾಲೂಕು ಆಡಳಿತ’ ಮಡಂತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸ್ಪಂದನಾ ಕಾರ್ಯಕ್ರಮ ಇತ್ತೀಚೆಗೆ ಮಡಂತ್ಯಾರು ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಅಧಿಕಾರಿಗಳೊಂದಿಗೆ ‘ಜನರ ಬಳಿಗೆ - ತಾಲೂಕು ಆಡಳಿತ’ ಮಡಂತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸ್ಪಂದನಾ ಕಾರ್ಯಕ್ರಮ ಇತ್ತೀಚೆಗೆ ಮಡಂತ್ಯಾರು ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು.

ಮಂಗಳೂರು-ಧರ್ಮಸ್ಥಳ ಕೆಎಸ್ಸಾರ್ಟಿಸಿ ಸಾರಿಗೆ ಬಸ್ ಸಂಜೆ ೭ರ ಬಳಿಕ ಸಿಗುತ್ತಿಲ್ಲ ಕೆಲಸದಿಂದ ಬರುವವರಿಗೆ ವಿಪರೀತವಾಗಿ ಈ ಸಮಸ್ಯೆ ಕಾಡುತ್ತಿದೆ. ಮಡಂತ್ಯಾರಿನಿಂದ ಬೆಳ್ತಂಗಡಿಗೆ ಪ್ರಯಾಣಿಸುವಾಗ ನಿರ್ವಾಹಕರು ಒರಟಾಗಿ ಮಾತನಾಡುತ್ತಾರೆ. ಬಸ್ ತಡ ಯಾಕೆ ಎಂದು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ, ಕೆಲವೊಮ್ಮ ಬಸ್ ನಿಲ್ಲಿಸುವುದಿಲ್ಲ, ಒಮ್ಮೇಲೆ ೩-೪ ಬಸ್‌ಗಳು ಬರುತ್ತವೆ ಎಂದು ಗ್ರಾಮಸ್ಥೆ ಅನುಪಮ ಹೇಳಿದರು. ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಕೆಎಸ್ಸಾರ್ಟಿಸಿ ವಿಭಾಗದ ಅಧಿಕಾರಿಗಳು ಭರವಸೆ ನೀಡಿದರು.

ರಕ್ತೇಶ್ವರಿಪದವಿನಲ್ಲಿ ವಿದ್ಯುತ್ ಇಲ್ಲದೇ ೫ ದಿನಗಳು ಕಳೆದಿದೆ. ಪವರ್‌ಮ್ಯಾನ್, ಮೆಸ್ಕಾಂಗೆ ತಿಳಿಸಿದರೂ ಸರಿಪಡಿಸಿಲ್ಲ, ಇನ್ನೂ ಕುಕ್ಕಳ ಗ್ರಾಮದಲ್ಲಿಯೂ ವಿದ್ಯುತ್ ಇಲ್ಲದೇ ಐದು ದಿನಗಳು ಆಗಿದೆ. ಮೂಡಯೂರು ಬಳಿ ಟಿಸಿ ಆಫ್ ಆಗಿದ್ದು ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಮಡಂತ್ಯಾರು ಮೆಸ್ಕಾಂ ಜೆಇಗೆ ಕರೆ ಮಾಡಿದರೆ ಫೋನ್ ತೆಗೆಯಲ್ಲ ನಮ್ಮ ನಂಬರ್‌ ಬ್ಲಾಕ್ ಮಾಡಿದ್ದಾರೆ ಎಂದು ಸದಸ್ಯ ಹರೀಶ್ ಶೆಟ್ಟಿ ಹೇಳಿದರು.

೮೧ ಗ್ರಾಮಗಳಿಗೆ ೧೮ ವಿಎಗಳಿದ್ದು ಅವರಿಗೆ ಮೂರು ಗ್ರಾಮಗಳ ಜವಾಬ್ದಾರಿ ಇದೆ. ಜಿಲ್ಲೆಗೆ ೬೦ ವಿಎಗಳ ಅಗತ್ಯವಿದೆ.. ವಿಎಗಳ ಪರೀಕ್ಷೆ ನಡೆದು ತರಬೇತಿಯಲ್ಲಿದ್ದಾರೆ ಬಳಿಕ ೧೫ ವಿಎಗಳು ನಮ್ಮ ತಾಲೂಕಿಗೆ ಬರುತ್ತಾರೆ ಎಂದು ಶಾಸಕರು ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದು ತಿಳಿಸಿದರು. ಕಣಿಯೂರು ಹೊಬಳಿ ಕೇಂದ್ರದ ಕುರಿತು ಸರ್ಕಾರಕ್ಕೆ ಒತ್ತಡ ಹಾಕಲಾಗುತ್ತದೆ. ಬಾಕಿ ಉಳಿದ ೯೪ಸಿ ಕಡತಗಳನ್ನು ಬೇಗನೆ ವೀಲೆ ಮಾಡುವಂತೆ ವಿ.ಎ.ಗೆ ಶಾಸಕರು ಸೂಚಿಸಿದರು.

ಶಾಸಕರು ಜನರ ಅಹವಾಲುಗಳನ್ನು ಸ್ವೀಕರಿಸಿದರು. ಸುಮಾರು 30 ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಯಿತು.

ಕುಕ್ಕಳ ಗ್ರಾಮದಲ್ಲಿ ಕೆಲ ನಿವಾಸಿಗಳಿಗೆ ೯೪ಸಿ ಆಗದ ಕಾರಣ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸ್ಥಳ ತನಿಖೆ ನಡೆಸಲು ಶಾಸಕರು, ಇಒ, ತಹಸೀಲ್ದಾರ್, ಆರ್‌ಎಫ್‌ಒ, ಗ್ರಾ.ಪಂ.ಸದಸ್ಯರು ಭೇಟಿ ನೀಡಿದರು. ಈ ಬಗ್ಗೆ ಕ್ರಮವಹಿಸಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಸದಸ್ಯರಾದ ವಿಶ್ವನಾಥ್, ಶಶಿಪ್ರಭಾ, ಪಾರ್ವತಿ ಹಾಗೂ ರಾಜೀವ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಅಧ್ಯಕ್ಷೆ ರೂಪ ನವೀನ್ ಸ್ವಾಗತಿಸಿ, ಸದಸ್ಯ ಶೈಲೇಶ್ ವಂದಿಸಿ, ಉಪಾಧ್ಯಕ್ಷ ಗೋಪಾಲಕೃಷ್ಣ ನಿರೂಪಿಸಿದರು.

PREV

Recommended Stories

ದರ್ಶನ್‌ ಅಶ್ಲೀಲ ಫ್ಯಾನ್ಸ್‌ ವಿರುದ್ಧ ರಮ್ಯ ಸಮರ
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ನಾಲ್ವರು ಐಪಿಎಸ್‌ ಸಸ್ಪೆಂಡ್‌ ವಾಪಸ್‌