ಕನ್ನಡಪ್ರಭ ವಾರ್ತೆ ಪಾಂಡವಪುರ
ಡೈರಿ ಪ್ರಾರಂಭಗೊಂಡು 15 ವರ್ಷಗಳಾಗಿದೆ. ಒಮ್ಮೆ ಚುನಾವಣೆ ನಡೆದಿರುವುದು ಬಿಟ್ಟರೆ ಆನಂತರದಲ್ಲಿ ಚುನಾವಣೆ ನಡೆಸಿಲ್ಲ. ಡೈರಿಯಿಂದ ಷೇರುದಾರರಿಗೆ ಯಾವುದೇ ಪ್ರೋತ್ಸಾಹ ಧನ ನೀಡುತ್ತಿಲ್ಲ. ಬೋನಸ್ ಹಣವನ್ನೂ ಸರಿಯಾಗಿ ಪಾವತಿಸುತ್ತಿಲ್ಲ. ಗಲಾಟೆ ಮಾಡಿದಾಗ ಕೇವಲ 4 ವರ್ಷದ ಬೋನಸ್ ಹಣ ನೀಡಿದ್ದಾರೆ. ರಾಷ್ಟ್ರೀಯ ಹಬ್ಬಗಳಿಗೆ ಶಾಲೆಗಳಿಗೂ ಡೈರಿಯಿಂದ ಹಣ ನೀಡುವುದಿಲ್ಲ. ಬೋನಸ್ ಹಣ ಏನಾಗಿದೆ ಎಂಬುದು ಗೊತ್ತಾಗಿಲ್ಲ. ಆದರೆ ಎಲ್ಲಾ ಖರ್ಚು-ವೆಚ್ಚವನ್ನು ಬರೆದಿಟ್ಟು ಆಡಿಟ್ ಮಾಡಿಸುತ್ತಾರೆ. ಇವರ ಜತೆಗೆ ಸೂಪರ್ ವೈಸರ್ ಉಷಾ ಕೂಡ ಶಾಮೀಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡೇರಿ ಕಾರ್ಯದರ್ಶಿ ಚಿಕ್ಕತಾಯಮ್ಮ ಅವರು ತಮಗಿಷ್ಟ ಬಂದವರನ್ನು ನಿರ್ದೇಶಕರನ್ನಾಗಿ ಸ್ವಯಂ ಆಯ್ಕೆ ಮಾಡಿಕೊಂಡು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ನೆಪ ಮಾತ್ರಕ್ಕೆ ಈಗ ಮಾ.1 ಕ್ಕೆ ಚುನಾವಣೆ ಘೋಷಿಸಿದ್ದಾರೆ. ಗಲಾಟೆ ಎಬ್ಬಿಸಿ ಡೈರಿಯನ್ನು ಸೂಪರ್ ಸೀಡ್ ಮಾಡಿಸಿ ನಂತರ ಇವರಿಗೆ ಇಷ್ಟ ಬಂದವರನ್ನು ಆಯ್ಕೆ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಹೀಗಾಗಿ ಚುನಾವಣೆ ಮುಂದೂಡಬೇಕು ಎಂದು ಆಗ್ರಹಿಸಿದರು.ಹಾಲು ಸರಬರಾಜು ಮಾಡಿದ ಹಣವನ್ನು ಕಾಲ ಕಾಲಕ್ಕೆ ಬಟವಾಡೆ ಮಾಡುವುದಿಲ್ಲ ಎಂದು ಡೈರಿ ಕಾರ್ಯದರ್ಶಿ ಚಿಕ್ಕತಾಯಮ್ಮ ಹಾಗೂ ಸೂಪರ್ ವೈಸರ್ ಉಷಾ ವಿರುದ್ಧ ದೂರಿದ ರೈತರು, ಹಾಲು ಪೂರೈಸಲು ಬಂದ ರೈತರಿಂದ ಸರಿಯಾಗಿ ಹಾಲು ಪರೀಕ್ಷೆ ನಡೆಸದೆ ಗುಣಮಟ್ಟವಿಲ್ಲ ಎಂದು 12 ಜನರ ಹಾಲನ್ನು ವಾಪಸ್ ಕಳುಹಿಸುತ್ತಾರೆ. ಇದನ್ನು ಪ್ರಶ್ನಿಸುವ ಮಹಿಳೆಯರ ವಿರುದ್ಧ ದುರ್ನಡತೆ ಪ್ರದರ್ಶಿಸುವರು. ಪುರುಷರು ಪ್ರಶ್ನೆ ಮಾಡಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಚಲುವೇಗೌಡ, ನಾರಾಯಣಗೌಡ, ಶೇಖರ್, ಶಂಕರೇಗೌಡ, ಯೋಗಣ್ಣ, ಆನಂದ, ರಾಜಮ್ಮ, ವಿಜಯಮ್ಮ, ಲಕ್ಷ್ಮಮ್ಮ, ನಿಂಗಮ್ಮ, ಯಜಮಾನರಾದ ವೆಂಕಟೇಗೌಡ, ಮಂಜು, ಎಂ.ಎಸ್.ಜವರೇಗೌಡ ಇತರರು ಭಾಗವಹಿಸಿದ್ದರು.