ಶ್ರದ್ಧಾಭಕ್ತಿಯಿಂದ ರಾಯರ ಮಧ್ಯಾರಾಧನೆ

KannadaprabhaNewsNetwork |  
Published : Aug 22, 2024, 12:47 AM IST
ಕಾರಟಗಿಯಲ್ಲಿ ಬುಧವಾರ ಶ್ರೀಗುರು ರಾಘವೇಂದ್ರ ಮಠದಲ್ಲಿ ಮಧ್ಯರಾಧನೆ ನಿಮಿತ್ಯ ರಾಯರ ವೃಂದಾನವಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ ಅಲಂಕರಿಸಲಾಗಿತ್ತು. | Kannada Prabha

ಸಾರಾಂಶ

ಶ್ರೀಗುರು ರಾಘವೇಂದ್ರ ಸ್ವಾಮಿಗಳ ೩೫೩ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಬುಧವಾರ ಇಲ್ಲಿನ ಶ್ರೀ ಗುರು ರಾಯರ ಮಠದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರಟಗಿ

ಶ್ರೀಗುರು ರಾಘವೇಂದ್ರ ಸ್ವಾಮಿಗಳ ೩೫೩ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಬುಧವಾರ ಇಲ್ಲಿನ ಶ್ರೀ ಗುರು ರಾಯರ ಮಠದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಅರ್ಚಕ ಪ್ರಮೋದ ಆಚಾರ್ ಮತ್ತು ರಾಮರಾವ್ ಕುಲಕರ್ಣಿ ನೇತೃತ್ವದಲ್ಲಿ ಬೆಳಗ್ಗೆ ಸುಪ್ರಬಾತ ಮತ್ತು ನಿರ್ಮಾಲ್ಯದಿಂದ ದಿನದ ವಿವಿಧ ಪೂಜೆ ವಿಧಿವಿಧಾನಗಳು ನಡೆದವು. ನಂತರ ಅಷ್ಟೋತ್ತರ ಸಹಿತ ಪಂಚಾಮೃತಾಭಿಷೇಕ, ಪಾದಪೂಜೆ, ಅರ್ಚನೆ ನಂತರ ಅಲಂಕಾರಗಳು ಭಕ್ತ ಸಮೂಹದ ನಡುವೆ ನಡೆಯಿತು. ಪಟ್ಟಣ ಭಕ್ತ ಸಮೂಹ ಶ್ರೀಗಳ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಸಂಜೆ ಮಹಿಳೆಯರು ಸಾಮೂಹಿಕ ಭಜನೆ ಮಾಡಿದರು. ನಂತರ ಮಠದ ಆವರಣದಲ್ಲಿ ಪಲ್ಲಕಿ ಉತ್ಸವ ನಡೆಯಿತು.

ಆರಾಧನಾ ಮಹೋತ್ಸವದ ಮೊದಲ ದಿನವಾದ ಸೋಮವಾರ ಮಠದ ಪ್ರಾಂಗಣದಲ್ಲಿ ಗೋಪೂಜೆ, ಧ್ವಜಾರೋಹಣ, ಧಾನ್ಯಪೂಜೆ, ಲಕ್ಷ್ಮೀಪೂಜೆ, ಸ್ವಸ್ತಿ ಪೂಜೆ ನಡೆಸುವ ಮೂಲಕ ಆರಾಧನೆ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಈ ವೇಳೆ ವಿಪ್ರ ಸಮಾಜದ ಮುಖಂಡ ಪ್ರಹ್ಲಾದ್ ಜೋಶಿ, ವಿಚಾರಣಕರ್ತ ರಾಘವೇಂದ್ರ ಕುಲಕರ್ಣಿ, ಕೃಷ್ಣಾಚಾರ್ಯ ಇನಾಂದಾರ್, ನಾಗರಾಜ ಕುಲಕರ್ಣಿ, ರಾಘವೇಂದ್ರರಾವ್ ಕುಲಕರ್ಣಿ, ಪುರಂದರ್‌ ವಿಠ್ಠಲ್‌ಕೊಳ್ಳಿ, ಶೇಷಗಿರಿ ದೇಶಪಾಂಡೆ, ಸಾಗರ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ ಗುಡೂರು, ರಾಘವೇಂದ್ರರಾವ್ ದೇಸಾಯಿ, ರಮೇಶ ಕುಲಕರ್ಣಿ ಸೇರಿದಂತೆ ಶ್ರೀಮಠದ ವ್ಯವಸ್ಥಾಪಕ ಉದಯ ಜಾಗೀರ್‌ದಾರ, ವಿಪ್ರ ಸಮಾಜದ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.

ಕೊಪ್ಪಳ ರಾಘವೇಂದ್ರಮಠದಲ್ಲಿ ಪೂರ್ವಾರಾಧನೆ ಸಂಭ್ರಮ:ಕೊಪ್ಪಳ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ 353ನೇ ಆರಾಧನಾ ಮಹೋತ್ಸವ ನಿಮಿತ್ತ ಸೋಮವಾರ ಪೂರ್ವಾರಾಧನೆ ಆರಂಭವಾಗಿದ್ದು, ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.ಪೂರ್ವಾರಾಧನೆ ದಿನದಂದು ಬೆಳಗ್ಗೆ 5ಕ್ಕೆ ಸುಪ್ರಭಾತ, 7.15ಕ್ಕೆ ಅಷ್ಟೋತ್ತರ, 8 ಗಂಟೆಗೆ ಪಂಚಾಮೃತ ಅಭಿಷೇಕ, 10.30ಕ್ಕೆ ಶ್ರೀ ಮದ್ಭಾಗವತ ಪ್ರವಚನ, 11.30ಕ್ಕೆ ಗಂಟೆಗೆ ನೈವೇದ್ಯ, ಹಸ್ತೋದಕ, ಅಲಂಕಾರ ಹಾಗೂ ತೀರ್ಥ ಪ್ರಸಾದ ಜರುಗಿದವು.ಸಂಜೆ ಮಠದ ಆವರಣದಲ್ಲಿ ಬೆಂಗಳೂರಿನ ಸುಜಯೀಂದ್ರ ಕುಲಕರ್ಣಿ ಅವರ ಭಕ್ತಿ ಸಂಗೀತದ ಮನಸೂರೆಗೊಂಡಿತು. 9.30ಕ್ಕೆ ರಥೋತ್ಸವ, ಸ್ವಸ್ತಿವಾಚನ, ತೊಟ್ಟಿಲು ಸೇವೆ ಹಾಗೂ ಮಂತ್ರಾಕ್ಷತೆ ವಿತರಣೆ ಮಾಡಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ