ಹಿಂದು ಪರಂಪರೆಯ ರಕ್ಷಣೆಗಾಗಿ ಸಂತ ಸಮಾವೇಶ: ಮಾದುಲಿಂಗ ಮಹಾರಾಜರು

KannadaprabhaNewsNetwork |  
Published : Jun 20, 2025, 12:34 AM IST
ಜಮಖಂಡಿಯ ನಮಸ್ಕಾರ ಮಂಡಲಿಯ ಕಚೇರಿಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾದುಲಿಂಗ ಮಹರಾಜರು ಮಾತನಾಡಿದರು. | Kannada Prabha

ಸಾರಾಂಶ

ಹಿಂದೂ ಪರಂಪರೆಯ ರಕ್ಷಣೆ ಭಾಗವಾಗಿ ವಿ.ಎಚ್.ಪಿ ಮತ್ತು ಭಜರಂಗದಳ ವತಿಯಿಂದ ಜಿಲ್ಲಾಮಟ್ಟದ ಸಂತ ಸಮಾವೇಶ ಹಮ್ಮಿಕೊಂಡಿದೆ ಎಂದು ಜಕನೂರಿನ ಮಾದಣ್ಣ ಮದಗೊಂಡ ಸಿದ್ದಮಠದ ಮಾದುಲಿಂಗ ಮಹಾರಾಜರು ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಹಿಂದೂ ಪರಂಪರೆಯ ರಕ್ಷಣೆ ಭಾಗವಾಗಿ ವಿ.ಎಚ್.ಪಿ ಮತ್ತು ಭಜರಂಗದಳ ವತಿಯಿಂದ ಜಿಲ್ಲಾಮಟ್ಟದ ಸಂತ ಸಮಾವೇಶ ಹಮ್ಮಿಕೊಂಡಿದೆ ಎಂದು ಜಕನೂರಿನ ಮಾದಣ್ಣ ಮದಗೊಂಡ ಸಿದ್ದಮಠದ ಮಾದುಲಿಂಗ ಮಹಾರಾಜರು ಹೇಳಿದರು.

ಗುರುವಾರ ನಗರದ ನಮಸ್ಕಾರ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ತಾಲೂಕಿನ ಹುಲ್ಯಾಳ ಗುರುದೇವಾಶ್ರಮದಲ್ಲಿ ಜೂ.21ರಂದು ಸಂತ ಸಮಾವೇಶ ಏರ್ಪಡಿಸಿದ್ದು, ಅಂದು ಬೆಳಗ್ಗೆ 10.30 ರಿಂದ 1.30ರವರಗೆ ಎರಡು ಚಿಂತನಗೋಷ್ಠಿಗಳು ನಡೆಯಲಿವೆ. ಇದರಲ್ಲಿ ಜಿಲ್ಲೆಯ 200 ಜನ ಸಂತರು ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ ಹೊಕ್ಕಳ ಬಾವಿ ಪ್ರದೇಶದದಿಂದ ಬಸವಭವನದವರೆಗೆ ಶೋಭಾಯಾತ್ರೆ ನಡೆಯಲಿದೆ. ಸಂತರು,1008 ಮಹಿಳೆಯರು, ಸಮಾಜದ ಪ್ರಮುಖರು ಭಾಗವಹಿಸಲಿದ್ದಾರೆ.

ಬಸವಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ರಾಷ್ಟ್ರಸಂತ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು, ಕನ್ಹೇರಿ ಕಾಡಸಿದ್ದೇಶ್ವರಮಠದ ಶ್ರೀ ಅದೃಶ್ಯಕಾಡಸಿದ್ದೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ವಿಹಿಂಪ ದಕ್ಷೇತ್ರೀಯ ಸಂಪರ್ಕ ಪ್ರಮುಖ ಜಿ. ಬಸವರಾಜ, ಪ್ರಾಂತ ಅಧ್ಯಕ್ಷ ಲಿಂಗರಾಜ ಅಪ್ಪಾಜಿ, ಪ್ರಾಂತ ಕಾರ್ಯದರ್ಶಿ ಶಿವಕುಮಾರ ಚೋಳಶೆಟ್ಟಿ, ಪ್ರಾಂತ ಪ್ರಮುಖ ವಂಕಟೇಶ ದೇಶಪಾಂಡೆ, ತಾಲೂಕು ಗೌರವಾಧ್ಯಕ್ಷ ಮಾದುಲಿಂಗ ಮಹಾರಜರು, ಆರ್,ಎಸ್.ಎಸ್ ವಿಭಾಗ ಕಾರ್ಯವಾಹ ವಿಠ್ಠಲ ಕುಲಕರ್ಣಿ ಸೇರಿದಮತೆ ಇನ್ನಿತರರು ಆಗಮಿಸಲಿದ್ದಾರೆ ಎಂದು ಹೇಳಿದರು.

ವಿಎಚ್‌ಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಸಿದರೆಡ್ಡಿ, ಆಲಗೂರು ಧರಿದೇವರ ಮಠದ ಶಾಂತಮೂರ್ತಿ ಲಕ್ಷ್ಮಣಮುತ್ಯಾ ಮಾತನಾಡಿದರು.ಸರ್ವೋತ್ತಮ ಗಲಗಲಿ, ಉಮೇಶ ಸಿದರೆಡ್ಡಿ, ಹಣಮಂತ ಗಿರಡ್ಡಿ, ಕರೆಪ್ಪಾ ಬೀಳಗಿ, ಗಿರೀಶ ಕೆಂಗನಾಳ, ಮುತ್ತು ಲಕ್ಕನಗೌಡರ, ಸಾಗರ ಜಂಬಗಿ, ನಂದಕಿಶೋರ ಮಂತ್ರಿ, ತುಕಾರಾಮ ಅಸುಗಡೆ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ