ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಈ ಕುರಿತು ಮಾತನಾಡಿದ ಮುತ್ತಪ್ಪ ಮಲಯಾಳಿ ಸಂಘದ ಅಧ್ಯಕ್ಷ ಸುಮೇಶ್ ಪಿ.ಜಿ. ಶ್ರೀ ಮುತ್ತಪ್ಪ ಮಲೆಯಾಳಂ ಸಂಘದ ವತಿಯಿಂದ ಮೊದಲ ಬಾರಿಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ಈ ಹೋಮ ಹವನ ಕಾರ್ಯಕ್ರಮವನ್ನು ಹಮ್ಮಿಕೊಂಡು ನಾಡಿನ ಜನರಿಗೆ ಆರೋಗ್ಯ ಭಾಗ್ಯ ಸಿಗಲಿ ಎಂಬ ಉದ್ದೇಶದಿಂದ ನಡೆಸಿದ್ದೇವೆ. ಮುಂದಿನ ವರ್ಷ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಶಿವನ ಜಾಗರಣೆ ಮತ್ತು ಭಜನೆ ಇತ್ಯಾದಿ ನಡೆಯಲಿದೆ ಎಂದು ತಿಳಿಸಿದರು.
ಮೃತ್ಯುಂಜಯ ಹೋಮವನ್ನು ಕೇರಳ ರಾಜ್ಯದ ಇರಟ್ಟಿಯ ನಾರಾಯಣ ಮತ್ತು ತಂಡ ಹಾಗೂ ವಿರಾಜಪೇಟೆಯ ಸಂಘದ ಸದಸ್ಯ ಶ್ರಿಜು ಅವರ ನೇತೃತ್ವದಲ್ಲಿ ನಡೆಯಿತು.ನೂರಾರು ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭ ಶ್ರೀ ಮುತ್ತಪ್ಪ ಮಲಯಾಳಿ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದರು.