ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ
ರಾಜ್ಯ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯದಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಮಾದಿಗ ಮಹಾಸಭಾ ಅಸ್ಥಿತ್ವಕ್ಕೆ ಬಂದಿದೆ ಎಂದು ಮಹಾ ಸಭಾದ ರಾಜ್ಯ ಸಂಘಟಕ ಬಿ.ಕೆ. ಶಿವಪ್ಪ ಹೇಳಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮಾದಿಗ ಮಹಾ ಸಭಾ ಮತ್ತು ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘ ತಾಲೂಕು ಘಟಕಗಳ ಆಶ್ರಯದಲ್ಲಿ ನಡೆದ ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟಿಸಿ ಮಾತನಾಡಿ ನಮ್ಮ ಸಮಾಜದ ಮಕ್ಕಳು ಮುಖ್ಯವಾಹಿನಿಗೆ ಬರಲು ಉತ್ತಮ ಶಿಕ್ಷಣ ಪಡೆಯಬೇಕು. ಡಾ. ಬಿ.ಆರ್. ಅಂಬೇಡ್ಕರ್ 32 ಪದವಿ ಪಡೆದಿದ್ದರು. ನಮ್ಮ ಮಕ್ಕಳು ಕನಿಷ್ಠ ಎರಡು ಪದವಿಯಾದರೂ ಪಡೆದು ಮಾದಿಗ ಜಾತಿಯೆಂದು ಎದೆ ತಟ್ಟಿ ಹೇಳಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಇತ್ತೀಚಿಗೆ ಬಂದಿರುವ ಎಐ (ಆರ್ಟಿಫಿಸಿಯಲ್ ಇಂಟಲಿಜನ್ಸ್) ತಂತ್ರಜ್ಞಾನ ಮಕ್ಕಳು ಸರಿ ಯಾದ ರೀತಿ ಬಳಸಿ ತಂದೆ-ತಾಯಿ ಮತ್ತು ನಮ್ಮ ಮಾದಿಗ ಸಮಾಜಕ್ಕೆ ಗೌರವಿಸುವಂತೆ ಸಾಧನೆ ಮಾಡಬೇಕು. ಪ್ರಯತ್ನಸಿದರೆ ಯಾವುದೂ ಅಸಾಧ್ಯ ವಲ್ಲ. ನೀವೆ ನಮ್ಮ ಸಮಾಜದ ಆಸ್ತಿ, ನಿಮ್ಮಲ್ಲೆರ ರಕ್ಷಣೆಗೆ ನಮ್ಮ ಮಹಾಸಭಾ ಇದೆ ಎಂದರು.
ಬೆಂಗಳೂರು ವಾಣಿಜ್ಯ ತೆರಿಗೆಗಳ ಇಲಾಖೆಗಳ ಸಹಾಯಕ ಆಯುಕ್ತ ಜೆ.ಪಿ. ಓಬಣ್ಣ ಮಾತನಾಡಿ ವಿದ್ಯಾರ್ಥಿ ಗಳು ವೈಜ್ಞಾನಿಕ ಚಿಂತನೆಗಳಿಂದ ತಮ್ಮ ಜೀವನ ರೂಪಿಸಬೇಕು. ದೇವಸ್ಥಾನಕ್ಕಿಂತ ಶಾಲೆ ಗಳನ್ನು ಕಟ್ಟಲು ಕೈಜೋಡಿಸಬೇಕು ಎಂದು ತಿಳಿಸಿದರು.
ತರೀಕೆರೆ- ಅಜ್ಜಂಪುರ ತಾಲೂಕಿನ ಮಾದಿಗ ಸಮಾಜದ ಎಸ್.ಎಸ್.ಎಲ್.ಸಿ., ಪಿಯುಸಿ, ವಿವಿಧ ಪದವಿಗಳಲ್ಲಿ ಉನ್ನತ ಸ್ಥಾನ ಗಳಿಸಿದ ವಿದ್ಯಾರ್ಥಿ ಹಾಗೂ ಹಿರಿಯ ಪೌರಕಾರ್ಮಿಕರು, ಚಮ್ಮಾರಿಕೆ ಮಾಡುವವರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನಡೆಸಲಾಯಿತು.
--
ತರೀಕೆರೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮಾದಿಗ ಮಹಾ ಸಭಾ ಮತ್ತು ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘ ತಾಲೂಕು ಘಟಕಗಳ ಆಶ್ರಯದಲ್ಲಿ ನಡೆದ ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮಹಾ ಸಭಾದ ರಾಜ್ಯ ಸಂಘಟಕ ಬಿ.ಕೆ. ಶಿವಪ್ಪ ಉದ್ಘಾಸಿದರು.