ಕನ್ನಡಪ್ರಭ ವಾರ್ತೆ ಮೈಸೂರು
ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ದಕ್ಷಿಣ ವಲಯ ಅಂತರ ವಿವಿ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮದ್ರಾಸ್ ವಿವಿ ತಂಡವು, ಕೊನೇರು ಲಕ್ಷ್ಮಯ್ಯ ಎಜುಕೇಷನ್ ಫೌಂಡೇಷನ್ ವಿರುದ್ಧ 25 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 392 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ಯೋಗ್ಯಶ್ರೀ ಕೌಸುರಿ 106 ಮತ್ತು ಎಂ.ಎಸ್. ಐಶ್ವರ್ಯ 55 ರನ್ ಗಳಿಸಿದರು. ಈ ಮೊತ್ತ ಬೆನ್ನು ಹತ್ತಿದ್ದ ಕೊನೇರು ಲಕ್ಷ್ಮಯ್ಯ ಎಜುಕೇಷನ್ ಫೌಂಡೇಷನ್ ತಂಡವು 17.2 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 51 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಎಸ್.ಜೆ.ಸಿ.ಇ ಮೈದಾನದಲ್ಲಿ ನಡೆದ ಮತ್ತೊಂದು ಪಂದ್ಯಾವಳಿಯಲ್ಲಿ ದೇವಿಕಾ ಕಂಡ್ರೆಗುಳ ಮತ್ತು ಜಿ. ಉದ್ವಿತಾ ಅವರ ಭರ್ಜರಿ ಶತಕದ ನೆರವಿನಿಂದ ಆದಿಕವಿ ನಣ್ಣಯ್ಯ ವಿವಿ ಮಹಿಳಾ ತಂಡವು ಕೇವಲ 25 ಓವರ್‌ಗಳಲ್ಲಿ 345 ರನ್‌ಗಳ ಬೃಹತ್ ಮೊತ್ತ ಪೇರಿಸಿ, ಅಳಗಪ್ಪ ವಿವಿ ತಂಡವನ್ನು 291 ರನ್‌ಗಳ ಭಾರೀ ಅಂತರದಿಂದ ಪರಾಭವಗೊಳಿಸಿ ದಾಖಲೆ ನಿರ್ಮಿಸಿತು.ನಗರದ ಎಸ್.ಜೆ.ಸಿ.ಇ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ ವಿವಿ ಮಹಿಳೆಯರ ಕ್ರಿಕೆಟ್ಪಂದ್ಯಾವಳಿಯಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಣ್ಣಯ್ಯ ವಿವಿ ತಂಡವು ನಿಗದಿತ 25 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 342 ರನ್‌ಗಳ ದಾಖಲೆಯ ಮೊತ್ತ ಕಲೆ ಹಾಕಿತು. ತಂಡದ ಪರವಾಗಿ ದೇವಿಕಾ ಕಂದ್ರೆಗುಳ (125) ಮತ್ತು ಜಿ. ಉದ್ವಿತಾ (133) ಶತಕ ಬಾರಿಸಿದರು.
ಸೋಲ್ಕ ಕಿಶೋರ್ ಅವರ ಅಬ್ಬರದ ಬ್ಯಾಂಟಿಂಗ್ ಪ್ರದರ್ಶನ ಮತ್ತು ಸಿ.ಜೆ. ಸಿರ್ರಿ ಅವರ ಮಾರಕ ಬೌಲಿಂಗ್ ದಾಳಿಯಿಂದಾಗಿ ವಿಟಿಯು ತಂಡವು, ಆಚಾರ್ಯ ನಾಗಾರ್ಜುನ ವಿವಿಯನ್ನು 120 ರನ್ ಗಳ ಅಂತರದಲ್ಲಿ ಮಣಿಸಿತು.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಮತ್ತು ಸವಿತಾ ವೈದ್ಯಕೀಯ, ತಾಂತ್ರಿಕ ಮತ್ತು ವಿಜ್ಞಾನ ಸಂಸ್ಥೆ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿತು.
ಮದ್ರಾಸ್ ವಿವಿಯು ಕೊನೇರು ಲಕ್ಷ್ಮಯ್ಯ ಎಜುಕೇಷನ್ ಫೌಂಡೇಶನ್ ವಿರುದ್ಧ 341 ರನ್ ಕಲೆ ಹಾಕಿತು.