ರಾಣಿ ಕೆಂಪನಂಜಮ್ಮಣ್ಣಿ ಮಹಿಳಾ ಅಭಿವೃದ್ಧಿಯ ಕನಸು ಕಂಡವರು: ಪ್ರೊ. ಸಬಿಹಾ ಭೂಮಿಗೌಡ

KannadaprabhaNewsNetwork | Published : May 17, 2024 12:33 AM

ಸಾರಾಂಶ

ನಿರ್ದಿಷ್ಟ ಮಾದರಿ ಇಟ್ಟುಕೊಂಡು ಗುರಿಯ ಕಡೆಗೆ ನಡೆಯಬೇಕು. ಗುರಿ ಎಂಬುದು ಕೇವಲ ಹೆಚ್ಚು ಅಂಕ ಗಳಿಕೆ ಮಾತ್ರವೇ ಮುಖ್ಯವಾಗಬಾರದು. ಅದರ ಜತೆಗೆ ನಡೆ, ನುಡಿಯಲ್ಲಿ ಅಲ್ಲದೇ ಉನ್ನತಮಟ್ಟದ ಉದ್ಯೋಗ ಗಳಿಸಿ, ಆ ಸ್ಥಾನದಲ್ಲಿ ತಾವು ಮೇಲ್ಪಂಕ್ತಿಯನ್ನು ಹಾಕಿ ಕೊಡಬೇಕು

- ಎಲ್ಲ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ, ಕುಟುಂಬಕ್ಕೆ ಕಾಣಿಕೆ ನೀಡಲು ಕರೆಕನ್ನಡಪ್ರಭ ವಾರ್ತೆ ಮೈಸೂರುಎಲ್ಲ ವರ್ಗದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಆ ಮೂಲಕ ಮಹಿಳಾ ಅಭಿವೃದ್ಧಿಯ ಕನಸು ಕಂಡವರು ರಾಣಿ ಕೆಂಪನಂಜಮ್ಮಣ್ಣಿ ಅವರು, ಹಾಗಾಗಿ ಎಲ್ಲ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ, ಕುಟುಂಬಕ್ಕೆ ಕಾಣಿಕೆ ನೀಡಬೇಕು ಎಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಕರೆ ನೀಡಿದರು.

ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಗುರುವಾರ ಜರುಗಿದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

ನಿರ್ದಿಷ್ಟ ಮಾದರಿ ಇಟ್ಟುಕೊಂಡು ಗುರಿಯ ಕಡೆಗೆ ನಡೆಯಬೇಕು. ಗುರಿ ಎಂಬುದು ಕೇವಲ ಹೆಚ್ಚು ಅಂಕ ಗಳಿಕೆ ಮಾತ್ರವೇ ಮುಖ್ಯವಾಗಬಾರದು. ಅದರ ಜತೆಗೆ ನಡೆ, ನುಡಿಯಲ್ಲಿ ಅಲ್ಲದೇ ಉನ್ನತಮಟ್ಟದ ಉದ್ಯೋಗ ಗಳಿಸಿ, ಆ ಸ್ಥಾನದಲ್ಲಿ ತಾವು ಮೇಲ್ಪಂಕ್ತಿಯನ್ನು ಹಾಕಿ ಕೊಡಬೇಕು ಎಂದು ಅವರು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಎಂ. ಅಬ್ದುಲ್ ರಹಿಮಾನ್ ಮಾತನಾಡಿ, ಭಾರತೀಯ ಸಂಸ್ಕೃತಿ ವಿಶ್ವದಲ್ಲಿ ಸರ್ವಶ್ರೇಷ್ಠವಾದುದು. ಇದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ಸಹಜೀವಿಗಳ ಕುರಿತು ಉದಾತ್ತತೆಯನ್ನು ಬಿತ್ತುತ್ತದೆ. ಹಾಗಾಗಿ ಈ ಸಂಸ್ಕೃತಿಯನ್ನು ಪಾಲಿಸಬೇಕಾದ ಅಗತ್ಯವಿದೆ.

ಸಂಸ್ಕೃತಿಯ ಹಿನ್ನೆಲೆಯಲ್ಲಿ ನಡೆ ನುಡಿ ನಮ್ಮಲ್ಲಿ ಅಡಕವಾಗುತ್ತದೆ.

ಹಾಗಾಗಿ ಈ ನೆಲದ ಮೂಲ ಸಂಸ್ಕೃತಿಗಳ ಬಗ್ಗೆ ಅರಿತು ನಡೆಯಿರಿ ಎಂದು ಕಿವಿ ಮಾತು ಹೇಳಿದರು.

ವಿವಿಧ ವಿಭಾಗಗಳಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ಎನ್.ಸಿ.ಸಿ, ಎನ್.ಎಸ್.ಎಸ್. ಹಾಗೂ ಕ್ರೀಡೆ, ಸಾಂಸ್ಕೃತಿಕ ವಿಭಾಗಗಳಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಅಧ್ಯಾಪಕರನ್ನು ಸನ್ಮಾನಿಸಿತು.

ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ವಿ. ಲಲಿತಾ, ಖಜಾಂಚಿ ಆರ್‌. ರಶ್ಮಿ, ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಡಿ. ರಮಣಿ, ರೇಂಜರ್ಸ್ ಸಂಚಾಲಕಿ ಮಂಜುಳಾ ಶೇಷಗಿರಿ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಡಾ. ಲಕ್ಷ್ಮೀ ಎಂ ಪಲೋಟಿ, ಪತ್ರಾಂಕಿತ ವ್ಯವಸ್ಥಾಪಕಿ ಆರ್‌. ಮೀನಾಕ್ಷಿ, ವಿದ್ಯಾರ್ಥಿ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಎಂ. ಶರಣ್ಯಾ, ಸ್ನಾತಕೋತ್ತರ ಪದವಿ ವಿಭಾಗದ ಉಪಾಧ್ಯಕ್ಷೆ ಎಚ್‌.ಎಂ. ಜಯಲಕ್ಷ್ಮಿ, ಸ್ನಾತಕ ಪದವಿ ವಿಭಾಗದ ಉಪಾಧ್ಯಕ್ಷೆ ಬಿ.ಎಂ. ಅರ್ಚನಾ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಕಾವ್ಯ ಎಂ. ಕಟ್ಟಿ, ಜಂಟಿ ಕಾರ್ಯದರ್ಶಿ ಆರ್‌. ಮೇಘನಾ, ಕನ್ನಡ ಸಂಪಾದಕಿ ಎಂ. ಕೀರ್ತಿ, ಇಂಗ್ಲಿಷ್ ಸಂಪಾದಕಿ ಆರ್‌. ಚೈತ್ರ, ರಾಷ್ಟ್ರೀಯ ಸೇವಾ ಯೋಜನೆಯ ಕೆ. ಸಹನಾ, ಕೆ.ಆರ್‌. ಸಿಂಚನಾ, ಕ್ರೀಡಾ ಕಾರ್ಯದರ್ಶಿ ವಿ. ಲಿಖಿತಾ, ಜಂಟಿ ಕಾರ್ಯದರ್ಶಿ ಎಸ್‌.ಎಂ. ಐಶ್ವರ್ಯ, ರೇಂಜರ್ಸ್ ಕಾರ್ಯದರ್ಶಿಗಳಾದ ಬಿ. ಹರ್ಷಿತಾ, ಎನ್.ಸಿ.ಸಿ ಅಧಿಕಾರಿ ಎಂ. ಮಮತಾ, ಅಧ್ಯಾಪಕರು ಹಾಗೂ ಅಧ್ಯಾಪಕೇತರರು ಇದ್ದರು.

ಕೆ. ವಿದ್ಯಾಶ್ರೀ, ಎಚ್‌.ಸಿ. ಪುಣ್ಯ, ವಿಂದ್ಯಾ, ನಮ್ರತಾ ಮತ್ತು ಎಚ್‌.ಕೆ. ರಕ್ಷಿತಾ ಅವರ ತಂಡ ಪ್ರಾರ್ಥಿಸಿದರು.

ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಸುನಿತಾ ಮತ್ತು ನಿವೇದಿತಾ ನಿರೂಪಿಸಿ, ವಂದಿಸಿದರು.

Share this article