ರಾಣಿಬೆನ್ನೂರು ನಗರದಲ್ಲಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಸೋಮವಾರ ಜರುಗಿದ ಸಮ್ಮೇಳನಾಧ್ಯಕ್ಷ ಶ್ರೀ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯರ ಮೆರವಣಿಗೆ ಜನರ ಕಣ್ಮನ ಸೆಳೆಯಿತು.

ರಾಣಿಬೆನ್ನೂರು: ನಗರದಲ್ಲಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಸೋಮವಾರ ಜರುಗಿದ ಸಮ್ಮೇಳನಾಧ್ಯಕ್ಷ ಶ್ರೀ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯರ ಮೆರವಣಿಗೆ ಜನರ ಕಣ್ಮನ ಸೆಳೆಯಿತು. ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದ ಬಳಿ ಬೆಳಗ್ಗೆ ಡಿವೈಎಸ್‌ಪಿ ಜೆ.ಲೋಕೇಶ ಮೆರವಣಿಗೆಗೆ ಚಾಲನೆ ನೀಡಿದರು. ಸಾಮಾನ್ಯವಾಗಿ ಸಮ್ಮೇಳನಾಧ್ಯಕ್ಷರನ್ನು ಸಾರೋಟಿನಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ಆದರೆ ಸ್ವತಃ ಸಮ್ಮೇಳನಾಧ್ಯಕ್ಷರೇ (ಸುಮಾರು ಒಂದು ಕಿಮೀ ದೂರ) ಮೆರವಣಿಗೆಯುದ್ದಕ್ಕೂ ನಡೆದುಕೊಂಡು ಕಾರ್ಯಕ್ರಮ ಆಯೋಜಿಸಿದ ಸ್ಥಳದವರೆಗೂ ಬಂದರು. ಬಸವಣ್ಣ ಮತ್ತು ಅಕ್ಕಮಹಾದೇವಿ ಭಾವಚಿತ್ರಗಳನ್ನು ಹೊತ್ತ ವಾಹನ, ವಚನ ಸಾಹಿತ್ಯ ತಲೆಯ ಮೇಲೆ ಹೊತ್ತು ಸಾಗಿದ ಮಹಿಳೆಯರು, ಮಹಿಳಾ ಡೊಳ್ಳು ಕುಣಿತ, ಸಮಾಳ ವಾದ್ಯಗಳು, ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ವೇಷ ಧರಿಸಿದ ಪುಟಾಣಿ ಮಕ್ಕಳು ಮೆರವಣಿಗೆ ಕಳೆಕಟ್ಟಿದಂತಾಗಿತ್ತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ, ರಾಜ್ಯ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಸೋಮಶೇಖರ, ಜಿಲಾಧ್ಯಕ್ಷ ಮಾರುತಿ ಶಿಡ್ಲಾಪುರ, ತಾಲೂಕು ಅಧ್ಯಕ್ಷೆ ರಾಜೇಶ್ವರಿ ಪಾಟೀಲ, ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ, ಬಿ.ಪಿ.ಶಿಡೇನೂರ, ಎಸ್.ಎಚ್.ಪಾಟೀಲ, ಶಿವಾನಂದ ಸಂಗಾಪುರ, ಪ್ರಭು ಹಲಗೇರಿ, ನಿತ್ಯಾನಂದ ಕುಂದಾಪುರ, ಎಸ್.ಕೆ.ನೆಶ್ವಿ, ಶಿವಪ್ಪ ಗುರಿಕಾರ, ಭಾರತಿ ಜಂಬಗಿ, ಮಂಗಳಾ ಪಾಟೀಲ, ಶೀಲಾ ಮಾಕನೂರ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.