ಆರ್‌ಎಸ್‌ಎಸ್ ಸಾವಿರಾರು ಹಿಂದೂ ಸಮ್ಮೇಳನ ನಡೆಸುವ ಗುರಿ ಹೊಂದಿದೆ. ಉದ್ದೇಶ ಇಷ್ಟೆ, ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬಿದ ಹಿನ್ನೆಲೆ ದೇಶದ ರಕ್ಷಣೆಗಾಗಿ ಜಾತಿ ಮತ ಮೀರಿ ಒಂದಾಗಿ ನಡೆಯಬೇಕು.
ಡಂಬಳ: ದೇಶದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಭಾರತ ಹಿಂದು ರಾಷ್ಟ್ರ, ಹಿಂದುಸ್ಥಾನ ಎಂದು ಕರೆಸಿಕೊಂಡಿದೆ. ಹೀಗಾಗಿ ಹಿಂದು ಮತಯಾಚಕವಲ್ಲ, ಧರ್ಮ ವಾಚಕವಲ್ಲ, ರಾಷ್ಟ್ರ ವಾಚಕ, ರಾಷ್ಟ್ರ ಸೂಚಕವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಕ್ಷೇತ್ರಿಯ ಸಂಯೋಜಕ ಜಗದೀಶ ಕಾರಂತ ತಿಳಿಸಿದರು.
ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಹಿಂದೂ ಸಮ್ಮೇಳನದಲ್ಲಿ ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿ, ಧಾರವಾಡ ವಿಭಾಗದಲ್ಲಿ ಪ್ರಥಮವಾಗಿ ಡಂಬಳದಲ್ಲಿ ಹಿಂದೂ ಸಮ್ಮೇಳನ ನಡೆಸಲಾಗಿದೆ ಎಂದರು.ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ನೆಲೆಸಿರುವ ಮುಸ್ಲಿಮರು ಮರಳಿ ಅವರ ದೇಶಕ್ಕೆ ಹೋಗಬೇಕು. ಆರ್‌ಎಸ್‌ಎಸ್ ಗುರುತಿಸುವುದಕ್ಕಿಂತ ಮುಂಚೆ ಭಾರತವನ್ನು ಜಗತ್ತು ಗುರುತಿಸಿರುವುದು ಹಿಂದು ಎಂದು. ದೇಶದ ಎಲ್ಲ ಜಮಾತೆ ಇಸ್ಲಾಂ ಸಂಘಟನೆಗಳು ತಮ್ಮ ಸಂಘಟನೆಗಳನ್ನು ಹೆಸರಿಸುವುದು ಜಮಾತೆ ಇಸ್ಲಾಂ ಹಿಂದ್ ಎಂದು.
ಆರ್‌ಎಸ್‌ಎಸ್ ಸಾವಿರಾರು ಹಿಂದೂ ಸಮ್ಮೇಳನ ನಡೆಸುವ ಗುರಿ ಹೊಂದಿದೆ. ಉದ್ದೇಶ ಇಷ್ಟೆ, ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬಿದ ಹಿನ್ನೆಲೆ ದೇಶದ ರಕ್ಷಣೆಗಾಗಿ ಜಾತಿ ಮತ ಮೀರಿ ಒಂದಾಗಿ ನಡೆಯಬೇಕು. ಸಮಾಜದಲ್ಲಿ ಸಮರಸದಿಂದ ಬಾಳುವುದನ್ನು ಕಲಿಸುವುದರ ಜತೆಗೆ ದೇಶ ಎದುರಿಸಬಹುದಾದ ಅನೇಕ ಸವಾಲುಗಳನ್ನು ಮೆಟ್ಟಿ ನಿಲ್ಲುವಂತಾಗಬೇಕು ಎಂದರು.ಹರ್ಲಾಪುರದ ಡಾ. ಅಭಿನವ ಕೊಟ್ಟೂರೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಒಂದು ಸಮಾಜ ಎಂಬುದು ದ್ವಾರಬಾಗಿಲು ಇದ್ದಂತೆ. ಜಾತಿಮತ ಇಲ್ಲದೆ ಹಿಂದುಗಳು ನಾವೆಲ್ಲ ಒಂದು, ಬಂಧುಗಳು ಎಂಬ ಭಾವನೆಯಿಂದ ಎಲ್ಲವನ್ನು ಅಪ್ಪಿಕೊಳ್ಳುವ ಸಮಾಜವಾಗಿದೆ. ಜಾತ್ಯತೀತವಾಗಿ ಎಲ್ಲರೂ ಧೈರ್ಯದಿಂದ ಹಿಂದುಗಳು ಎನ್ನುವುದು ಅಗತ್ಯವಿದೆ. ಇದು ಭ್ರಾತೃತ್ವ ತೋರಿಸುತ್ತದೆ ಎಂದರು.
ಸಂಜೀವ ರಿತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ದೇವಸ್ಥಾನದಿಂದ ವಿವಿಧ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭಾರತಾಂಬೆ ಭಾವಚಿತ್ರದೊಂದಿಗೆ ಶೋಭಾಯಾತ್ರೆ ಜರುಗಿತು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ, ಡಂಬಳ ಮಂಡಳ ಅಧ್ಯಕ್ಷ ಅಂದಪ್ಪ ಹಾರೂಗೇರಿ, ಹಿಂದೂ ಸಮ್ಮೇಳನದ ಅಧ್ಯಕ್ಷ ಮಲ್ಲೇಶ ಮಠದ, ಉಪಾಧ್ಯಕ್ಷ ಹನುಮಪ್ಪ ಹಾದಿಮನಿ, ಬಾಬು ರಾಠೋಸ, ಡಿ. ಪ್ರಸಾದ, ಮಂಜುನಾಥ ಇಟಗಿ, ರವಿ ಕರಿಗಾರ, ನಾಗರಾಜ ಕಾಟ್ರಳ್ಳಿ, ಈಶ್ವರಗೌಡ ಪಾಟೀಲ, ಸಮಿತಿಯ ಪ್ರಮುಖರಾದ ಬೀರಪ್ಪ ಬಂಡಿ, ವೆಂಕನಗೌಡ ಪಾಟೀಲ್, ಮುದಿಲಿಂಗಪ್ಪ ಕೊರ್ಲಹಳ್ಳಿ, ನಾಗರಾಜ ಕಾಟ್ರಳ್ಳಿ, ಈಶ್ವರಗೌಡ, ಕುಬೇರಪ್ಪ ಬಂಡಿ, ಕೃಷ್ಣ ಬಂಡಿ, ಪ್ರಭು ಕರಮುಡಿ, ದೇವಪ್ಪ ಇಟಗಿ, ಕೃಷ್ಣಾ ಬಂಡಿ, ಶರಣಪ್ಪ ಕೊಂಬಳಿ, ಮಹಾದೇವಪ್ಪ ತೋಟಪ್ಪನವರ, ಬಸವರಾಜ ಚನ್ನಳ್ಳಿ, ಪಕ್ಕಣನಗೌಡರ ರಡ್ಡೇರ, ರಮೇಶ ತುರಕಾಣಿ, ಪ್ರಕಾಶ ಕೋಂತಬ್ರಿ, ಶಿವಾನಂದ ಬಂಡಿ, ಹನುಮಂತ ಪೂಜಾರ, ಪಾಂಡಪ್ಪ ರಾಠೋಡ, ಲಕ್ಷ್ಮಣ ರಾಠೋಡ, ಬಸವಂತಪ್ಪ ಬಡಿಗೇರ, ಬಾಬಣ್ಣ ರಾಠೋಡ, ಸಿದ್ಧನಗೌಡ ಪಾಟೀಲ, ನಿಂಗನಗೌಡ ಹರ್ತಿ, ಮಂಜುನಾಥ ರಾಮೇನಳ್ಳಿ, ಈಶಪ್ಪ ರಂಗಪ್ಪನವರ, ಮಿತ್ತಯ್ಯಜ್ಜ ಹರ್ತಿಮಠ, ಕೃಷ್ಣಪ್ಪ ನಗರ, ದೇವಪ್ಪ ಕಲಿವಾಳ, ವಾಸುದೇವ ಪಾಟೀಲ, ಮುದಕಪ್ಪ ಮುಳಗುಂದ, ಮುತ್ತು ಚಿನ್ನಪ್ಪಗೌಡರ, ರವಿ ಕರಿಗಾರ, ಮುತ್ತು ಚಿನ್ನಪ್ಪಗೌಡರ, ಸೋಮಶೇಖರಯ್ಯ ಹಿರೇಮಠ, ಲಕ್ಷ್ಮಣ ಬೂದಿಹಾಳ, ಯಲ್ಲಪ್ಪ ಮುದಗಣ್ಣನವರ, ಶಂಭು ಸಂದಿಗೌಡ, ಮಂಜುನಾಥ ಇಟಗಿ ನಿರೂಪಿಸಿ, ವಂದಿಸಿದರು.