ಮಹರ್ಷಿ ವಾಲ್ಮೀಕಿ ಅವರು ಕಳ್ಳ, ಕಟುಕ ಎಂದು ಅಪಪ್ರಚಾರ: ಜೈಶಂಕರ್

KannadaprabhaNewsNetwork |  
Published : Oct 27, 2026, 02:00 AM IST
26ಕೆಎಂಎನ್ ಡಿ13 | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿ ಅವರು ಕಳ್ಳ, ಕಟುಕ ಎಂಬುದಾಗಿತೇಪೆ ಹಚ್ಚಲಾಗಿದೆ. ವಾಲ್ಮೀಕಿಯರ ಮೂಲ ರಾಮಾಯಣದ ಗ್ರಂಥದ 24 ಸಾವಿರ ಶ್ಲೋಕದಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ ಹಾಗೇ ವಾಲ್ಮೀಕಿಯವರ ರಾಮಾಯಣ ಹಾಗೂ ಕುವೆಂಪುರ ರಾಮಾಯಣದಶಂ ಅವರ ಕಾವ್ಯಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಹರ್ಷಿ ವಾಲ್ಮೀಕಿ ಅವರು ಕಳ್ಳ, ಕಟುಕ ಎಂಬುದು ಭಾರತೀಯ ಸಾಹಿತ್ಯ ಇತಿಹಾಸದ ಅತಿದೊಡ್ಡ ಅಪಪ್ರಚಾರವಾಗಿದೆ ಎಂದು ಸಮರ್ಪಣ ಟ್ರಸ್ಟ್ ಅಧ್ಯಕ್ಷ ಜೈಶಂಕರ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪ್ರಧಾನ ಭಾಷಣ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಕಳ್ಳ, ಕಟುಕ ಎಂಬುದಾಗಿತೇಪೆ ಹಚ್ಚಲಾಗಿದೆ. ವಾಲ್ಮೀಕಿಯರ ಮೂಲ ರಾಮಾಯಣದ ಗ್ರಂಥದ 24 ಸಾವಿರ ಶ್ಲೋಕದಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ. ವಾಲ್ಮೀಕಿ ವಿವಾಹದ ಬಗ್ಗೆಯೂ ಸಹ ಉಲ್ಲೇಖವಾಗಿಲ್ಲ. ಕ್ರಿ.ಶ.7 ಮತ್ತು 8ನೇ ಶತಮಾನದಲ್ಲಿ ಸ್ಕಂದ ನಾಗರಕಂದ 184ನೇ ಅಧ್ಯಾಯ, 15ನೇ ಶತಮಾನದ ಆನಂದ ರಾಮಾಯಣದಲ್ಲಿ ಉಲ್ಲೇಖಿಸಿದ್ದಾರೆ ಅಷ್ಟೆ. ಮೂಲ ಕಾವ್ಯದಲ್ಲಿ ಇಲ್ಲ. ಜೊತೆಗೆ ಸಾಹಿತಿ ಎಂ.ಎಂ.ಕಲ್ಬುರ್ಗಿಯವರು ಸಹ ಕಳ್ಳ, ಕಟುಕ ಅಲ್ಲ ಎಂಬುದಾಗಿ ಪ್ರತಿಪ್ರಾದಿಸಿದ್ದಾರೆ. ವಾಲ್ಮೀಕಿ ಕಳ್ಳ, ಕಟುಕ ಅಲ್ಲ ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ ಎಂದರು.ವಾಲ್ಮೀಕಿಯವರ ರಾಮಾಯಣ ಹಾಗೂ ಕುವೆಂಪುರ ರಾಮಾಯಣದಶಂ ಅವರ ಕಾವ್ಯಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ವಾಲ್ಮೀಕಿ ರಾಮಾಯಣದಲ್ಲಿ ರಾಮನನ್ನು ದೇವರ ಮೂರ್ತಿ, ಸೀತೆಯೂ ಪತಿವೃತೆ ರಾಮನನ್ನು ಎಂದಿಗೂ ಪ್ರಶ್ನಿಸಲಿಲ್ಲ. ರಾವಣ ಕಳನಾಯಕ ಎಂಬುದಾಗಿ ಉಲ್ಲೇಖಿಸಿದ್ದಾರೆ ಎಂದರು.

ಕುವೆಂಪು ರಾಮಾಯಣದಲ್ಲಿ ರಾಮ ಮಾನವನಾಗಿದ್ದ ಆತ ಅನುಮಾನ, ಕೋಪ ಬರುತ್ತಿತ್ತು, ಸೀತೆ ರಾಮನನ್ನನ್ನು ಪ್ರಶ್ನಿಸಿದ್ದಳು, ರಾವಣ ಶಾಪಗ್ರಸ್ಥ ಮಹಾತ್ಮನಾಗಿದ್ದ, ಜ್ಞಾನಿಯೂ ಆಗಿದ್ದನ್ನು ಎಂಬುದಾಗಿ ಉಲ್ಲೇಖಿಸಲಾಗಿದೆ. ಕುವೆಂಪು ರಾಮಾಯಣದಲ್ಲಿ ರಾಮ ಮನುಷ್ಯನಾಗಿ ದೇವರಾಗಿ ಮೇಲೇರಿದ ಕತೆಯನ್ನು ಕಾಣಬಹುದಾಗಿದೆ ಎಂದರು.

ರಾಮಾಯಣ ಕೃತಿಯೂ 300ಕ್ಕೂ ಕೃತಿಗಳನ್ನು ಕಾಣಬಹುದು. 40 ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಯಲ್ಲಿ ಕೃತಿಗಳಿವೆ. ಒಂದೊಂದು ಕೃತಿಯಲ್ಲಿ ಒಂದೊಂದು ರೀತಿಯಲ್ಲಿ ರಾಮ-ಸೀತೆಯ ಕುರಿತು ಉಲ್ಲೇಖವಾಗಿವೆ. 20 ವಿದೇಶಿಭಾಷೆಗಳಲ್ಲಿ ಉಲ್ಲೇಖವಾಗಿವೆ ಎಂದರು.

ತಹಸೀಲ್ದಾರ್ ಆದರ್ಶ ಮಾತನಾಡಿ, ಆದಿ ಕವಿ, ಸಂಸ್ಕೃತ ಕವಿ ಎಂಬುದಾಗಿ ಕರೆಯಲ್ಪಡುವ ವಾಲ್ಮೀಕಿ ಅವರ ರಾಮಾಯಣದಲ್ಲಿ ಸಮಾಜಕ್ಕೆ ಬೇಕಾದ ಹಲವು ಮಹತ್ತರ ಸಂದೇಶಗಳನ್ನು ನೀಡಿದ್ದಾರೆ. ರಾಮನ ಧರ್ಮ, ಸೀತೆಯ ಸತ್ಯ, ರಾವಣ್ಣ ಅಹಂಕಾರದ ಜತೆಗೆ ಕುಟುಂಬದ ಸ್ವಾರಸ್ಯ, ಭಕ್ತಿ, ನಿಷ್ಠೆ, ಕ್ಷಮೆ, ಕರುಣೆ ಎಲ್ಲವನ್ನು ನೀಡಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಸಮಾಜಕಲ್ಯಾಣಾಧಿಕಾರಿ ಕೋಮಲ, ದೈಹಿಕ ಪರಿವೀಕ್ಷಕ ಶ್ರೀನಿವಾಸ್, ಉಪ ತಹಸೀಲ್ದಾರ್ ರಾಜೇಶ್, ಎಸ್.ಎನ್.ಕೆಂಪೇಗೌಡ, ಸಬ್ ಇನ್ಸ್ ಪೆಕ್ಟರ್ ಧರ್ಮಪಾಲ್, ಕುಮಾರಸ್ವಾಮಿ, ಮಹದೇವಸ್ವಾಮಿ, ರಾಘವೇಂದ್ರ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ರಾಮಾಯಣದಿಂದ ಸಮಾಜಕ್ಕೆ ಸಂದೇಶ
ರುದ್ರಭೂಮಿ ಸ್ವಚ್ಛಗೊಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು