ಸವದತ್ತಿ: ಅಹಿಂಸೆಯೇ ಪರಮೋ ಧರ್ಮ ಎಂಬ ಸಂದೇಶದ ಮೂಲಕ ಜಗತ್ತಿಗೆ ಶಾಂತಿಯ ಮೌಲ್ಯಗಳನ್ನು ಬೋಧಿಸಿದ ಭಗವಾನ್ ಮಹಾವೀರರ ತತ್ವಗಳು ಇಂದಿನ ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಹಿಂಸಾತ್ಮಕವಾದ ಚಟುವಟಿಕೆಗಳು ಸಮಾಜಕ್ಕೆ ಮಾರಕವಾಗಿದ್ದು, ಅಹಿಂಸಾ ತತ್ವದಡಿ ಪ್ರತಿಯೊಬ್ಬರು ಜೀವನ ಸಾಗಿಸುವ ನಿಟ್ಟಿನಲ್ಲಿ ಮಹಾವೀರರ ಬೋಧನೆಗಳನ್ನು ಮೈಗೂಡಿಸಿಕೊಂಡು ನಡೆಯಬೇಕು ಎಂದು ಹೇಳಿದರು.
ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾಜದ ಮುಖಂಡರಾದ ಚಂದ್ರಣ್ಣ ಶಾಮರಾಯನವರ, ಮದನಲಾಲ ಚೋಪ್ರಾ, ಸುರೇಶ ಚೋಪ್ರಾ, ಬಮ್ಮು ಶೇಠ, ಮದನ ತಾಥೇಡ, ಬೋಪಾಲ ಬಾಂಡೇಕರ, ಗ್ರೇಡ್-೨ ತಹಸಿಲ್ದಾರ ಎಂ.ಎನ್.ಮಠದ, ಸಿಡಿಪಿಒ ಅಮೃತ ಸಾಣಿಕೊಪ್ಪ, ಬಿಇಒ ಎ.ಎ.ಖಾಜಿ, ಶಿರಸ್ತೆದಾರ ಶಶಿರಾಜ ವನಕಿ, ಶಾಂತಿಲಾಲ ಜೈನ್, ಎಫ್.ವೈ.ಗಾಜಿ, ಎಂ.ಎನ್.ಮುತ್ತಿನ, ಬಸವರಾಜ ಅರಮನೆ, ಮಂಜುನಾಥ ಪಾಚಂಗಿ, ಪ್ರವೀಣ ರಾಮಪ್ಪನವರ, ಬಸವರಾಜ ಗುರಣ್ಣವರ, ಹಾಗೂ ಸಮಾಜ ಬಾಂಧವರು ಮತ್ತು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.