ಅಮಿತ್‌ ಶಾ ವಿರುದ್ಧ ಮಹಿಳಾಮಣಿಗಳ ಪ್ರತಿಭಟನೆ

KannadaprabhaNewsNetwork |  
Published : Dec 25, 2024, 01:30 AM IST
ಪ್ರತಿಭಠನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ: ಲೋಕಸಭೆಯಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತ ನೀಡಿದ ಹೇಳಿಕೆಯನ್ನು ಖಂಡಿಸಿ ರಮಾಬಾಯಿ ಅಂಬೇಡ್ಕರ್ ಮಹಿಳಾ ಸ್ವ-ಸಹಾಯ ಸಂಘದ ಕಾರ್ಯಕರ್ತರು ಹಾಗೂ ರಾಜಶೇಖರ ಸಿಂಧೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು

ಕನ್ನಡಪ್ರಭ ವಾರ್ತೆ ಇಂಡಿ: ಲೋಕಸಭೆಯಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತ ನೀಡಿದ ಹೇಳಿಕೆಯನ್ನು ಖಂಡಿಸಿ ರಮಾಬಾಯಿ ಅಂಬೇಡ್ಕರ್ ಮಹಿಳಾ ಸ್ವ-ಸಹಾಯ ಸಂಘದ ಕಾರ್ಯಕರ್ತರು ಹಾಗೂ ರಾಜಶೇಖರ ಸಿಂಧೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಯಲ್ಲಿ ವಿವಿಧ ಘೋಷಣೆಗಳನ್ನು ಕೂಗುವ ಹಾಗೂ ತಮಟೆ ಬಾರಿಸುವ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಎಸಿ ಅಬೀದ್ ಗದ್ಯಾಳ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಭುವನೇಶ್ವರಿ ಕಾಂಬಳೆ, ಸಚಿವ ಅಮಿತ್ ಶಾ ರಾಜೀನಾಮೆ ನೀಡಿ, ದೇಶದ ಜನರ‌ ಕ್ಷೇಮೆ ಕೇಳಬೇಕು. ಅದಲ್ಲದೇ ಅಮಿತ್ ಶಾ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಮಾಬಾಯಿ ಅಂಬೇಡ್ಕರ್ ಮಹಿಳಾ ಸ್ವ-ಸಹಾಯ ಸಂಘದ ಅಧ್ಯಕ್ಷ ಇಂದಿರಾಗಾಂಧಿ ಹೊಸಮನಿ, ಸುಶೀಲಾ ಬನಸೊಡೆ, ಬೈಜಾಬಾಯಿ ಹರಿಜನ, ಮಹಾದೇವಿ ಶಿವಶರಣ, ಭಾಗವ್ವ ದಶವಂತ, ಯಲಬಾಯಿ ಬನಸೊಡೆ, ಲಕ್ಷ್ಮೀ ದ್ರಾವಿಡ, ರೇಣುಕಾ ದಶವಂತ, ಪವಿತ್ರ ಮಾದರ, ಸುನಂದ ದಶವಂತ, ಜ್ಯೋತಿ ಹೊಸಮನಿ, ರೂಪಾ ಕಾಲೇಬಾಗ, ಪವಿತ್ರ ಸಾವಳಸಂಗ, ಸರೋಜನಿ ಕಟ್ಟಿಮನಿ, ಶೋಭಾ ಲೋಗಿ, ಗುಂಡವ್ವ ಕಾಂಬಳೆ, ಸುಜಾತ ಬಬಲಾದಿ,ರಾಜಶೇಖರ ಶಿಂಧೆ, ಸುಭಾಸ ತಳಕೇರಿ, ಪಾಂಡುರಂಗ ರೇವಪ್ಪ ಹೊಸಮನಿ, ವಿಕಾಸ ಬನಸೋಡೆ, ಆನಂದ ಅಗರಖೇಡ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ