ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣಕ್ಕೆ ತೆರವು ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದ್ದು, ಅವಶೇಷ ತೆರವು ಕಾರ್ಯಾಚರಣೆ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳುವ ಲಕ್ಷಗಳಿವೆ. ತೆರವು ಕಾರ್ಯಾಚರಣೆ 13ನೇ ದಿನಕ್ಕೆ ಕಾಲಿಟ್ಟಿದೆ. ಅವಶೇಷ ತೆರವುಗೊಳಿಸುವ ಕಾರ್ಯ 12 ದಿನವಾದ ಬುಧವಾರವೂ ಭರದಿಂದ ಸಾಗಿತು.
ಸ್ವಯಂಪ್ರೇರಿತ ತೆರವು ಮಾಡಿದ ಶೆಟ್ಟರ
ಅಗಲೀಕರಣ ಕಾರ್ಯದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದ ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ತಮ್ಮ ಬೃಹತ್ ಕಟ್ಟಡವನ್ನು ಸ್ವಯಂಪ್ರೇರಿತರಾಗಿ ತೆರವು ಮಾಡಿಕೊಂಡು ಅಗಲೀಕರಣಕ್ಕೆ ಸಾಥ್ ನೀಡಿದರು. 1941ರಲ್ಲಿ ನಿರ್ಮಾಣ ಮಾಡಿದ್ದ ತಮ್ಮ ಕಟ್ಟಡವನ್ನ ಉಳಿಸಿಕೊಳ್ಳಲು ಹೋರಾಟ ನಡಸಿದ್ದ ಅವರು, ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ತೆರವುಗೊಳಿಸಿದರು. ಉಳಿದಂತೆ ಪಟ್ಟಣದ ಸುಭಾಸ ಸರ್ಕಲ್ ನಿಂದ ಹಿಡಿದು ಹಳೆಯ ಗುಮ್ಮನಹಳ್ಳಿ ರಸ್ತೆ ವರೆಗೆ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರೆದಿದೆ.