ಶನಿವಾರಸಂತೆ: ಕೊಟ್ಟಿಗೆ ಗೊಬ್ಬರ ಮುಂತಾದ ಸಾವಯವ ಜೈವಿಕ ಗೊಬ್ಬರ ಬಳಸುವುದರ ಮೂಲಕ ರೈತರು ತಮ್ಮ ಕೃಷಿ ಭೂಮಿಯಲ್ಲಿ ಮಣ್ಣಿನ ಆರೋಗ್ಯ ಕಾಪಾಡಿಕೊಂಡು ಕೃಷಿ ಭೂಮಿಯಲ್ಲಿ ವ್ಯವಸಹಾಯ ಮಾಡಲು ಉಳಿಸಿಕೊಳ್ಳಿ ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಮೋಹನ್ ಕುಮಾರ್ ರೈತರಿಗೆ ಸಲಹೆ ನೀಡಿದರು.
ರೈತರು ತಮ್ಮ ಕೃಷಿ ಭೂಮಿಯಲ್ಲಿ ಫಲವತ್ತತೆ ಹೆಚ್ಚಿಸಲು ಮಣ್ಣಿನ ಪರೀಕ್ಷೆಯ ಜೊತೆಯಲ್ಲಿ ಮಣ್ಣಿನಲ್ಲಿ ಸೂಕ್ಷಮಾಣು ಉತ್ಪತ್ತಿಗೊಳ್ಳಲು ಕೊಟ್ಟಿಗೆ ಗೊಬ್ಬರ ಮುಂತಾದ ಜೈವಿಕ ಸಾವಯಯವಗೊಬ್ಬರಗಳನ್ನು ಬಳಕೆ ಮಾಡಬೇಕು ಇದರಿಂದ ತಾವು ಮಾಡಿರುವ ಕೃಷಿ ಬೆಳೆಯಲ್ಲಿ ಹೆಚ್ಚಿನ ಇಳುವರಿಗಳಿಸಲು ಸಾಧ್ಯವಾಗುತ್ತದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರ ಸಾವಯವ ಕೃಷಿ ಪದ್ದತಿಗೆ ಪ್ರೋತ್ಸಾಹ ನೀಡುತ್ತಿದ್ದು ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ನಾನಾ ತರಹದ ಸಾವಯವ ಗೊಬ್ಬರ, ಲಘು ಪ್ರಮಾಣದಲ್ಲಿ ರಸಾಯಿನಿಕ ಅಂಶ ಒಳಗೊಂಡ ಗೊಬ್ಬರ ಲಭ್ಯ ಇರುತ್ತದೆ ಈ ನಿಟ್ಟಿನಲ್ಲಿ ರೈತರು ಇದನ್ನು ಸದ್ಬಳಕೆ ಮಾಡಿಕೊಂಡು ಕೃಷಿಯಲ್ಲಿ ಪ್ರಗತಿ ಕಾಣುವಂತೆ ಮನವಿ ಮಾಡಿದರು.ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಸಂಪತ್ ಮಾತನಾಡಿ-ಇತ್ತಿಚಿನ ದಿನದಲ್ಲಿ ರೈತರ ಕೃಷಿ ಭೂಮಿ ಬಂಜರುಗೊಳುತ್ತಿದ್ದು ಈ ನಿಟ್ಟಿನಲ್ಲಿ ಸಾಯವಯ ಕೃಷಿ ಪದ್ದತಿಗೆ ಹೆಚ್ಚಿನ ಒತ್ತುಕೊಡಬೇಕು ಎಂದರು.