ಇ- ತ್ಯಾಜ್ಯ ಬಹುಮುಖ್ಯ ಸಮಸ್ಯೆ: ಟಿ.ಎಚ್. ವೆಂಕಟೇಶ್

KannadaprabhaNewsNetwork |  
Published : Feb 05, 2024, 01:48 AM IST
35 | Kannada Prabha

ಸಾರಾಂಶ

ಇ ತ್ಯಾಜ್ಯದ ಬಗ್ಗೆ ಕಾಳಜಿ ವಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದರೆ ಮುಂದೆ ಬಹುದೊಡ್ಡ ಅನಾಹುತವನ್ನು ತಪ್ಪಿಸಬಹುದು. ಪ್ರತಿವಾರ ಮೈಸೂರಿನ ವಿವಿಧ ಜಾಗಗಳಲ್ಲಿ ಇ- ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಮೈಸೂರು

ಇ- ತ್ಯಾಜ್ಯ ಇಂದು ಪ್ರಪಂಚದಲ್ಲಿ ಬಹು ಮುಖ್ಯವಾದ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಲಯನ್ಸ್ ಜಿಲ್ಲೆ 317ಜಿ ಸಂಪುಟ ಕಾರ್ಯದರ್ಶಿ ಟಿ.ಎಚ್. ವೆಂಕಟೇಶ್ ತಿಳಿಸಿದರು.

ಲಯನ್ಸ್ ಕ್ಲಬ್ ಆಫ್ ಮೈಸೂರ್ ಅಂಬಾಸಿಡರಸ್ ಆಯೋಜಿಸಿದ್ದ ಇ-ತ್ಯಾಜ್ಯ ಸಂಗ್ರಹಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇ ತ್ಯಾಜ್ಯದ ಬಗ್ಗೆ ಕಾಳಜಿ ವಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದರೆ ಮುಂದೆ ಬಹುದೊಡ್ಡ ಅನಾಹುತವನ್ನು ತಪ್ಪಿಸಬಹುದು ಎಂದು ಹೇಳಿದರು.

ಇ-ತ್ಯಾಜ್ಯ ಜಿಲ್ಲಾಧ್ಯಕ್ಷ ಮಕಾಳ ಶಿವಕುಮಾರ್ ಮಾತನಾಡಿ, ಪ್ರತಿವಾರ ಮೈಸೂರಿನ ವಿವಿಧ ಜಾಗಗಳಲ್ಲಿ ಇ- ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಎಚ್.ಸಿ. ಕಾಂತರಾಜು, ಕಾರ್ಯದರ್ಶಿ ಸಿ.ಆರ್. ದಿನೇಶ್, ಖಜಾಂಚಿ ಕೆ.ಟಿ. ವಿಷ್ಣು, ವಿ. ಶ್ರೀಧರ್, ಕೆ.ಆರ್. ಭಾಸ್ಕರಾನಂದಾ, ಎಚ್.ಕೆ. ಪ್ರಸನ್ನ, ರವಿಚಂದ್ರ, ಮಲ್ಲಿಕಾರ್ಜುನ್, ಮನು, ರವಿ, ಅಮರ ಭವಾನಿ, ಅರುಣ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದ 13 ಜಿಲ್ಲೆಗಳಲ್ಲಿ ಬೇಸಿಗೆ ಮಳೆ
ಕನ್ನಡಿಗ ಅಮರೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ