ಕೃಷಿಯನ್ನು ಉಪಕಸುಬುಗಳ ಮೂಲಕ ಲಾಭದಾಯಕವಾಗಿಸಿ

KannadaprabhaNewsNetwork |  
Published : Jan 21, 2026, 02:15 AM IST
ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರದೊಂದಿಗೆ ಏರ್ಪಡಿಸಲಾಗಿದ್ದ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಂತಹ ರೈತರಿಗೆ ಶಾಸಕ ಸಿ.ಬಿ ಸುರೇಶ್‌ಬಾಬು ಬಹುಮಾನ ವಿತರಿಸಿದರು. | Kannada Prabha

ಸಾರಾಂಶ

ರೈತರು ಕೃಷಿಯೊಂದಿಗೆ ಕೋಳಿ, ಕುರಿ, ಹಸು ಸಾಕುವುದರ ಮೂಲಕ ಕೃಷಿಯನ್ನು ಲಾಭದಾಯಕ ಮಾಡಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹುಳಿಯಾರು

ರೈತರು ಕೃಷಿಯೊಂದಿಗೆ ಕೋಳಿ, ಕುರಿ, ಹಸು ಸಾಕುವುದರ ಮೂಲಕ ಕೃಷಿಯನ್ನು ಲಾಭದಾಯಕ ಮಾಡಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಹುಳಿಯಾರು ಸಮೀಪದ ಚೌಳಕಟ್ಟೆ ಗ್ರಾಮದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ , ಚೌಳಕಟ್ಟೆ ಗ್ರಾಪಂ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರದೊಂದಿಗೆ ಏರ್ಪಡಿಸಲಾಗಿದ್ದ ಜಾನುವಾರು ಆರೋಗ್ಯ ತಪಾಸಣೆ ಮತ್ತು ಬರಡು ರಾಸು ಚಿಕಿತ್ಸಾ ಶಿಬಿರ ಮತ್ತು ಮಿಶ್ರತಳಿ ಕರುಗಳ ಪ್ರದರ್ಶನದ ಅಧ್ಯಕ್ಷತೆವಹಿಸಿ ಮಾತನಾಡಿದರು.

ರೈತರು ಹೈನುಗಾರಿಕೆಯನ್ನು ಆಳವಡಿಸಿಕೊಳ್ಳಬೇಕು ಇದರಿಂದ ಅವರ ಜೀವನದ ಆರ್ಥಿಕ ಮಟ್ಟ ಚೆನ್ನಾಗಿರುತ್ತದೆ ಅದರಂತೆ ಹಸುಗಳನ್ನು ಸಾಕುವಂತೆ ಕರುಗಳನ್ನು ಮಕ್ಕಳಂತೆ ಸಾಕಿದರೆ ಅವುಗಳಿಂದಲೂ ಲಾಭವಿದೆ. ಈ ಪಶುಪಾಲನೆಯನ್ನು ಪ್ರೋತ್ಸಾಹಿಸಲು ಸರ್ಕಾರ ವಿವಿಧ ಸವಲತ್ತುಗಳನ್ನು ನೀಡುತ್ತಿದ್ದು. ರೈತರು ಹಸುಗಳಿಗೆ ನೆಲಹಾಸುಗಳನ್ನು, ಮೇವು ಕತ್ತರಿಸುವ ಯಂತ್ರವನ್ನು ಸೇರಿದಂತೆ ಉಚಿತವಾಗಿ ವೈದ್ಯಕೀಯ ಸೌಲಭ್ಯಗಳು ಪಶು ಇಲಾಕೆಯಿಂದ ಸಿಗುತ್ತಿದ್ದು ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು. ತಾ ಪಂ ಮಾಜಿ ಸದಸ್ಯೆ ಹೇಮಲತಾ ಮಾತನಾಡಿ, ರೈತರು ಕೃಷಿಯೊಂದಿಗೆ ಉಪಕಸುಬುಗಳನ್ನು ಆಳವಡಿಸಿಕೊಳ್ಳಬೇಕು. ಶಾಸಕರು ಅವರ ಸರ್ಕಾರ ಇಲ್ಲದಿದ್ದರೂ ಕ್ಷೇತ್ರದಲ್ಲಿ ಮನೆಮಗ ಕಾರ್ಯಕ್ರಮ, ಜನಸ್ಪಂದನಾ ಕಾರ್ಯಕ್ರಮಗಳ ಮೂಲಕ ಜನರ ಸೇವೆ ಮಾಡುತ್ತಿದ್ದು ಇವರ ಸೇವೆ ಕ್ಷೇತ್ರಕ್ಕೆ ಅವಶ್ಯಕತೆ ಇದೆ ಎಂದರು. ಪಶುಸಂಗೋಪನಾ ಇಲಾಕೆಯ ಸಹಾಯಕ ನಿರ್ದೇಶಕ ಕಾಂತರಾಜು ಮಾತನಾಡಿ ಸರ್ಕಾರವು ಹೈನುಗಾರಿಕೆಯನ್ನು ರೈತರನ್ನು ಪ್ರೋತ್ಸಾಹಿಸಲು ಕರುಗಳ ಪ್ರದರ್ಶನ, ಹಾಲುಕರೆಯುವ ಸ್ಪರ್ಧೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಲಾಖೆಯಿಂದ ಉಚಿತವಾಗಿ ೧ಲಕ್ಷ ವೆಚ್ಚದ ಔಷಧಿಗಳನ್ನು ನಿಡಲಾಗುತ್ತಿದೆ. ಇದರೊಂದಿಗೆ ೬೦ ಮಿಶ್ರತಳಿ ಕರುಗಳ ಪ್ರದರ್ಶನವನ್ನು ನಡೆಸಲಾಗುತ್ತಿದೆ. ಕರುಗಳನ್ನು ನೋಡಿದರೆ ನನಗೆ ನೋವಾಯಿತು ಕಾರಣ ಕರುಗಳನ್ನು ಸಾಕುವುದರಲ್ಲಿ ರೈತರು ಅಸಡ್ಡೆ ತೋರಿಸಿದ್ದಾರೆ. ಕರುಗಳನ್ನು ಮಾನವೀಯತೆಯಿಂದ ಸಾಕುವುದು ಒಳ್ಳೆಯದು. ಅವುಗಳಿಂದಲು ೪ವರ್ಷದ ನಂತರದಲ್ಲಿ ಲಾಭ ಮಾಡಬಹುದು. ನೀವು ಉತ್ತಮವಾಗಿ ಕರುಗಳನ್ನು ಸಾಕಿದರೆ ಅದರಿಂದ ಇಳುವರಿಯು ಉತ್ತಮವಾಗಿರುತ್ತದೆ. ಗಿಣ್ಣದ ಹಾಲನ್ನು ೩೦ನಿಮಿಷದೊಳಗೆ ಕರುಗಳಿಗೆ ಕುಡಿಸಬೇಕು ಅದರಲ್ಲಿ ಉತ್ತಮ ರೋಗ ನಿರೋಧಕ ಶಕ್ತಿ ಇರುತ್ತದೆ. ಕುರವಿನ ತೂಕದ ೧೦ಭಾಗದಷ್ಟು ಹಾಲನ್ನು ಕೊಡಬೇಕು ಎಂದ ಅವರು ಈ ಭಾಗದ ಚೌಳಕಟ್ಟೆ, ಸಬ್ಬೇನಹಳ್ಳಿ, ಹಾಗೂ ಹರೇನಹಳ್ಳಿ ಗ್ರಾಮಗಳಲ್ಲಿ ಹಾಲು ಕರೆಯುವ ಸ್ಪರ್ದೆಯನ್ನು ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗ್ರಾ ಪಂ ಸದಸ್ಯರುಗಳಾದ ಸುಮಾ, ಶಿವಣ್ಣ, ಪಶುವೈದ್ಯ ಪ್ರಮೋದ್, ಪಿಡಿಒ ರಂಜಿತ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ