ಮದ್ದೂರು : ತಾಲೂಕಿನ ಯರಗನಹಳ್ಳಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಪ್ರಥಮ ಬಾರಿಗೆ ಬಿಜೆಪಿ ಪಾಲಾಗಿದ್ದು, ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಡಿ.ಸಿ.ಸುನಿತಾ ಮತ್ತು ಉಪಾಧ್ಯಕ್ಷರಾಗಿ ವಿ.ಆರ್.ಪವಿತ್ರ ಚುನಾಯಿತರಾಗಿದ್ದಾರೆ.
ಸಂಘದ ಆವರಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಮತ್ತು ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಿ.ಸಿ.ಸುನಿತಾ, ಉಪಾಧ್ಯಕ್ಷರಾಗಿ ವಿ.ಆರ್.ಪವಿತ್ರಾ, ನಿರ್ದೇಶಕರಾಗಿ ಆರ್.ನಂದಿನಿ, ಎಂ.ಕೆ.ನಯನಾ, ಲಕ್ಷ್ಮಮ್ಮ, ಸೌಭಾಗ್ಯ, ಭಾಗ್ಯಮ್ಮ, ಸೌಜನ್ಯ ಮತ್ತು ಕಲಾವತಿ ಚುನಾಯಿತರಾಗಿದ್ದಾರೆ.
ಸಂಘದ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರನ್ನು ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಅಭಿನಂದಿಸಿ ಮಾತನಾಡಿ, ಸಂಘದ ಎಲ್ಲಾ ಸ್ಥಾನಗಳಿಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿರುವುದು ಉತ್ತಮ ಬೆಳವಣಿಗೆ. ಅಧ್ಯಕ್ಷರು ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಸಂಘವನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸುವ ಜೊತೆಗೆ ಜಿಲ್ಲಾ ಹಾಲು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ನಂದೀಶ್ ಗೌಡ, ಸದಸ್ಯ ಅಪ್ಪಾಜಿ ಗೌಡ, ರಾಮಚಂದ್ರ, ಚೌಡೇಶ್, ಬೋರಯ್ಯ ಮತ್ತಿತರರು ಇದ್ದರು.
ಮದ್ದೂರು: ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಕ್ಷಯ ಮುಕ್ತ ಗ್ರಾಪಂ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್ ಉಪಸ್ಥಿತಿ, ತಾಲೂಕು ಯೋಜನಾಧಿಕಾರಿ ಸುರೇಶ್ ಅಧ್ಯಕ್ಷತೆ ತಾಲೂಕಿನಲ್ಲಿ ಆಯ್ಕೆಯಾಗಿರುವ ಕ್ಷಯ ಮುಕ್ತ ಗ್ರಾಪಂಗಳ ಪಿಡಿಒಗಳೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಕ್ಷಯ ಮುಕ್ತ ಗ್ರಾಪಂ ಮಾನದಂಡಗಳ ಬಗ್ಗೆ ತಿಳಿಸಿ, ಮುಂದಿನ ಕಾರ್ಯಕ್ರಮಗಳ ವಿವರಿಸಲಾಯಿತು. ಎಸ್ ಟಿಎಸ್ ಕೆಂಪೇಗೌಡ ಮಾತನಾಡಿ, ತಾಲೂಕಿನಲ್ಲಿ 2025ನೇ ಸಾಲಿನಲ್ಲಿ 13 ಪಂಚಾಯ್ತಿಗಳು ಕ್ಷಯ ಮುಕ್ತ ಗ್ರಾಪಂಗಳಾಗಿ ಆಯ್ಕೆ ಆಗಿವೆ. ತಾಲೂಕಿನ ಎಲ್ಲಾ ಪಂಚಾಯ್ತಿಗಳನ್ನು ಕ್ಷಯ ಮುಕ್ತ ಮಾಡಲು ಕಾರ್ಯಕ್ರಮ ರೂಪಿಸುವ ಬಗ್ಗೆ ಮತ್ತು ರೋಗದ ಬಗ್ಗೆ ಹೆಚ್ಚು ಅರಿವು ಮೂಡಿಸಿದರು. ಸಭೆಯಲ್ಲಿ ಟಿಎಚ್‌ಒ ಕಚೇರಿ ಹರ್ಷ ಹಾಜರಿದ್ದರು.